ಜಾಲಹಳ್ಳಿ : ಮಾ 12 ಗ್ರಾಮದ ಮುಸ್ಲಿಂ ಬಾಂಧವರ ಕಬರಸ್ಥಾನದಲ್ಲಿರುವ ಸರ್ವೇ ನಂಬರ್ 205 ಮತ್ತು 160ರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ ಇದ್ದ ಹಸಿರಾದ ಗಿಡಗಳು ಸುಟ್ಟು ಭಸ್ಮವಾಗಿವೆ.
ಸುದ್ದಿ ತಿಳಿದ ತಕ್ಷಣ ಕಬರಸ್ಥಾನ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ಮುಂದಕ್ಕೆ ಪಸರಿಸದಂತೆ ಬಹಳ ಶ್ರಮವಹಿಸಿ ನೀರಿನಿಂದ ಬೆಂಕಿಯನ್ನು ನಂದಿಸಿದರು. ಕಬರಸ್ಥಾನ ಸಮಿತಿಯ ಸದಸ್ಯರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಸಂಪೂರ್ಣವಾಗಿ ಬೆಂಕಿ ನಂದಿಸುವವರೆಗೆ ಅಲ್ಲೇ ಇದ್ದು ಸ್ವಚ್ಛತಾ ಕಾರ್ಯವೂ ನಡೆಸಿದರು.
ಕಬರಸ್ಥಾನ ಸಮಿತಿಯ ಪದಾಧಿಕಾರಿಗಳು ತೋರಿದ ತ್ವರಿತ ಕಾರ್ಯಾಚರಣೆ ಮತ್ತು ಸೇವಾ ಮನೋಭಾವ ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಈ ಬೆಂಕಿ ನಂದಿಸುವ ಕಾರ್ಯದಲ್ಲಿ
ಕಬರಸ್ಥಾನ ಸಮಿತಿಯ ಅಧ್ಯಕ್ಷರಾದ ಹೈದರ್ ಸಾಬ್ ಮುಲ್ಲಾ ,
ಕಾರ್ಯದರ್ಶಿಯಾದ ಕುರ್ಷಿದ್ ಪಟೇಲ್, ಖಜಾಂಚಿಯಾದ ಇಮಾಮ್ ಸಾಬ್ ಉದ್ದಾರ್
ಸದಸ್ಯರಾದ ಜಹೀರ್ ಮುರ್ಷೇದ್ ಹಾಗೂ ಆರಿಫ್ ಗ್ರಾಮದ ಮುಖಂಡರಾದ ಹನುಮಂತರಾಯ ನಾಯಕ್ ಆಲ್ದಾಳ ಉಪಸ್ಥಿತರಿದ್ದರೂ.


