ಸಿಂಧನೂರು : ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು ಪ್ರಾಥಮಿಕ ಆರೋಗ್ಯ ಕೇಂದ್ರ ದಡೇಸೂಗುರ್ ವ್ಯಾಪ್ತಿಗೆ ಒಳಪಡುವ ಆಯುಷ್ಮಾನ್ ಆರೋಗ್ಯ ಕೇಂದ್ರ ಗೊರೆಬಾಳ ಸರ್ಕಾರಿ ಪ್ರೌಢಶಾಲೆ ಇವರ ಸಯುಕ್ತ ಆಶ್ರಯದಲ್ಲಿ , ಗೊರೆಬಾಳ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಶ್ರೀಮತಿ ಗೀತಾ ಹಿರೇಮಠ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡಿ ಎಚ್ ಪಿ ವಿ(HPV )ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು , ಎಚ್ ಪಿ ವಿ ಲಸಿಕೆ ಎಂದರೆ ಹ್ಯೂಮನ್ ಪ್ಯಾಪಿಲೋಮ ವೈರಸ್ ನಿಂದ ಉಂಟಾಗುವ ಜನನಾಂಗದ ನರಹುಲಿಗಳು ಗುದದ್ವಾರ ಗಂಟಲು ಮತ್ತು ತಲೆ ಕುತ್ತಿಗೆ ಕ್ಯಾನ್ಸರ್ ಗಳಿಂದ ರಕ್ಷಣೆ ನೀಡುತ್ತದೆ 9 ರಿಂದ 45 ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಈ ಲಸಿಕೆ ಅತ್ಯಂತ ಪರಿಣಾಮಕಾರಿ ಹೆಣ್ಣು ಮಕ್ಕಳಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಿಕೆ ಕ್ಯಾನ್ಸರ್ ಪೂರ್ವ ಸ್ಥಿತಿಗಳ ನಿರ್ವಹಣೆ ಕ್ಯಾನ್ಸರ್ ಗೆ ಕಾರಣವಾಗುವ ಎಚ್ ಪಿ ವಿ ತಳಿಗಳಿಂದ ಉಂಟಾಗುವ ಕೋಶಗಳ ಬದಲಾವಣೆಯನ್ನು ತಡೆಯುತ್ತದೆ ಜನನಾಂಗದ ನರಹುಲಿಗಳ ಕ್ಯಾನ್ಸರಗಳ ತಡೆಗಟ್ಟುವಿಕೆ ಈ ಲಸಿಕೆಯನ್ನು ಪಡೆಯುವ ಸಮಯ 9 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಎರಡು ಡೋಸ್ ಗಳನ್ನು ಶಿಫಾರಸ್ಸು ಮಾಡಲಾಗುತ್ತದೆ ಲೈಂಗಿಕ ಚಟುವಟಿಕೆಗಳ ಪ್ರಾರಂಭವಾಗುವ ಮೊದಲು ಲಸಿಕೆ ಪಡೆಯುವುದು ಅತ್ಯಂತ ಪರಿಣಾಮಕಾರಿ 15ರಿಂದ 45 ವರ್ಷ ವಯಸ್ಸಿನವರೆಗೂ ಇದು ಪ್ರಯೋಜನಕಾರಿಯಾಗಿದೆ ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭವಿದೆ ಲಸಿಕೆ ಹಾಕಿದ ಜಾಗದಲ್ಲಿ ನೋವು ಊಟ ಅಥವಾ ಲಘು ಜ್ವರ ಇರಬಹುದು ಲಸಿಕೆ ಪಡೆಯುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ ಎಚ್ ಪಿ ವಿ ಲಸಿಕೆಯು ಹೊಸದೇನಲ್ಲ ಜಗತ್ತಿನಾದ್ಯಂತ ಈಗಾಗಲೇ 50 ಕೋಟಿ ಲಸಿಕೆಗಳನ್ನು ನೀಡಲಾಗಿದೆ ಕಳೆದ 15 ವರ್ಷಗಳ ಅಂಕಿ ಅಂಶಗಳು ಎಚ್ ಪಿ ವಿ ಲಸಿಕೆ ಸುರಕ್ಷತಾ ಮತ್ತು ಪರಿಣಾಮಕಾರಿ ಎಂದು ಸಾಬೀತುಪಡಿಸಿವೆ ಬೇರೆ ಬೇರೆ ದೇಶಗಳಲ್ಲಿ 10ವರ್ಷದಲ್ಲಿ ಕ್ಯಾನ್ಸರ್ ಪೂರ್ವ ಲಕ್ಷಣಗಳು ಕಡಿಮೆಯಾಗಿದೆ ನಂತರ ಸಾಂಕ್ರಾಮಿಕ ರೋಗಗಳ ಕುರಿತು ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ವಿಷಪೂರಿತ ಆಹಾರ ಸೇವನೆಯ ಮಾಡಬಾರದು ನಂತರ ಧೂಮಪಾನ ರಹಿತ ದಿನ ಬಗ್ಗೆ ನಿಮ್ಮ ಶ್ವಾಸಕೋಶ ಬೂದಿಪಾತ್ರೆಯಲ್ಲ ಧೂಮಪಾನದ ಹವ್ಯಾಸ ಬಿಡಿ ಮುಕ್ತವಾಗಿ ಉಸಿರಾಡಿ ದಂದು ಆರೋಗ್ಯಕರ ಭವಿಷ್ಯದತ್ತ ಹೆಜ್ಜೆ ಇಡಿ ತಂಬಾಕನಲ್ಲ ಉತ್ತಮ ಜೀವನವನ್ನು ಆರಿಸಿ . ಸಮಯಕ್ಕೆ ಸರಿಯಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆಗಾಗೆ ಬಗ್ಗೆ ಪರೀಕ್ಷೆಯನ್ನ ಮಾಡಿಸಬೇಕೆಂದು ಹೇಳಲಾಯಿತು ಸದರಿ ಕಾರ್ಯಕ್ರಮದಲ್ಲಿ ಶ್ರೀಮತಿ ಅಂಬಮ್ಮ ಪಿಎಚ್ ಸಿಇಒ, ಚಾಂದ್ ಬಾಷಾ ಸಿ ಎಚ್ ಓ, ಶಿವರೆಡ್ಡಿ ಮುಖ್ಯ ಗುರುಗಳು, ನಿಲೋಪರ್ ಮೇಡಂ, ಶ್ವೇತಾ, ಪದ್ಮಾ, ಗಂಗಾಧರ್ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *