ಸಿಂಧನೂರು – ಸುಮಾರು ವರ್ಷಗಳಿಂದ ಸಿಂಧನೂರು ತಾಲೂಕಿನ ಹರೇಟನೂರು ಗ್ರಾಮದ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯ ಅರ್ಚಕರಾದ ವೇದಮೂರ್ತಿ ಅಮರಯ್ಯ ಸ್ವಾಮಿ ಹಿರೇಮಠ ಅವರು ಆ ತಾಯಿಗೆ ಬಂದಿರುವಂತಹ ಮಂಗಳಾರತಿ ತಟ್ಟೆಯ ಕಾಣಿಕೆ ಹಾಗೂ ದವಸ ಧಾನ್ಯಗಳು ಅನಾಥರಿಗೆ ನೊಂದವರಿಗೆ ಬುದ್ಧಿಮಾಂದ್ಯರಿಗೆ ಉಪಯೋಗವಾಗಲಿ ಎನ್ನುವ ಸಾರ್ವಜನಿಕ ಸಾಮಾಜಿಕ ಪ್ರಜ್ಞೆಯಿಂದ ಶ್ರೀಮಠ ಸೇವಾ ಟ್ರಸ್ಟ್ (ರಿ) ಹರೇಟನೂರು ಎನ್ನುವ ಟ್ರಸ್ಟ್ ಅಡಿಯಲ್ಲಿ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮವನ್ನು ಹುಟ್ಟು ಹಾಕಿದರು. ಈ ಟ್ರಸ್ಟ್ ನ ಉಪಾಧ್ಯಕ್ಷರಾಗಿ ಕರಿಬಸಯ್ಯಸ್ವಾಮಿ ಹಿರೇಮಠ ಹರೇಟನೂರು. ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ಚಿದಾನಂದಪ್ಪ ಗೌಡ ಮಾಲಿ ಪಾಟೀಲ್ ಖಜಾಂಚಿಗಳಾಗಿ ಕೆ.ಸಂಗನಗೌಡ ಮಾಲಿ ಪಾಟೀಲ್ ಸದಸ್ಯರುಗಳಾಗಿ ಶರಣಪ್ಪ ಗೌಡ ಕಟಾಲಿ ಮಂಜುನಾಥಗೌಡ ಮಾಲಿಪಾಟೀಲ್ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್. ಅಶೋಕ ನಲ್ಲ. ಸುಜಾತ ಹಿರೇಮಠ ಇವರುಗಳ ಒಗ್ಗೂಡಿನ ಸಾಕಾರದೊಂದಿಗೆ ಹುಟ್ಟು ಹಾಕಿದರು. ಕೊರೋನಾ ಎನ್ನುವ ಲಾಕ್ ಡೌನ್ ನಲ್ಲಿ ಅದೆಷ್ಟೋ ನಿರ್ಗತಿಕ ಹಾಗೂ ಬಸ್ ನಿಲ್ದಾಣಗಳಲ್ಲಿ ಮತ್ತು ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಇರುವಂತಹ ಅನಾಥರಿಗೆ ತಮ್ಮ ಜೋಳಿಗೆಯ ಮೂಲಕ ಆಸರೆಯಾದರು. ಮತ್ತು ಸರ್ಕಾರದಿಂದ ಜಿಲ್ಲಾಡಳಿತದಿಂದ ತಾಲೂಕಾಡಳಿತದಿಂದ ಮತ್ತು ನಮ್ಮ ರಾಜ್ಯದ ಹಾಗೂ ಅನೇಕ ರಾಜ್ಯದ ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ವಿತರಿಸಿ ಗೌರವಿಸಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಇಂತಹ ಪ್ರಾಮಾಣಿಕ ಸೇವೆಯನ್ನು ಸಮಾಜಕ್ಕೆ ಒದಗಿಸುತ್ತಿರುವ ಈ ಕರುಣೆಯ ಕಾರುಣ್ಯ ಕುಟುಂಬಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯದಿರುವುದು ದುರದೃಷ್ಟಕರ ಸಂಗತಿ
ಮತ್ತು ವಿಶೇಷವಾಗಿ ಸುಮಾರು ಜನ ನೊಂದವರನ್ನು ಮತ್ತು ಮನೆಯಿಂದ ಅನೇಕ ಕಾರಣಗಳಿಂದ ಹೊರಬಂದು ಈ ನಮ್ಮ ಕಾರುಣ್ಯ ಕುಟುಂಬದಲ್ಲಿ ಆಶ್ರಯ ಪಡೆದವರು ವೃದ್ಧರನ್ನು ಅವರ ಮಕ್ಕಳು ಮೊಮ್ಮಕ್ಕಳಿಗೆ ಬುದ್ಧಿವಾದ ಹೇಳುವುದರ ಮೂಲಕ ಅವರವರ ಮನೆಗೆ ಕಳುಹಿಸಿದ್ದೇವೆ. ನಿಜವಾದ ಅನಾಥರಿಗೆ ತಮಗರಿವಿಲ್ಲದ ಬುದ್ಧಿಮಾಂಧ್ಯರಿಗೆ ಆಶ್ರಮದಲ್ಲಿ ಆಶ್ರಯ ಕಲ್ಪಿಸಿ ಕೊಟ್ಟಿದ್ದೇವೆ. ಇದು ಸಮಾಜದ ಸೇವೆಯಲ್ಲ ಸಮಾಜಕ್ಕೆ ನಾವು ಮಾಡುವ ಪ್ರಾಮಾಣಿಕ ಕರ್ತವ್ಯ ಎನ್ನುವ ಆತ್ಮ ತೃಪ್ತಿ ನಮಗಿದೆ ಆದುದರಿಂದ ಸಾರ್ವಜನಿಕರಲ್ಲಿ ಮತ್ತೊಮ್ಮೆ ಕಾರುಣ್ಯ ಕುಟುಂಬದ ವಿನಂತಿ ಏನಂದರೆ ತಾವುಗಳು ಸ್ವಂತ ಜಾಗ ಕಲ್ಪಿಸಿಕೊಟ್ಟಲ್ಲಿ ನಮ್ಮೆಲ್ಲರ ಪ್ರೀತಿ ವಿಶ್ವಾಸ ಆಶೀರ್ವಾದದೊಂದಿಗೆ ಇನ್ನೂ ಹೆಚ್ಚಿನ ಅನಾಥರಿಗೆ ಆಶ್ರಯ ಕಲ್ಪಿಸಿ ಕೊಡುತ್ತೇವೆ ಎಂದು ಆಶ್ರಮದ ಕಾರ್ಯಾಧ್ಯಕ್ಷರಾಗಿರುವಂತಹ ಡಾ.ಚನ್ನಬಸವ ಸ್ವಾಮಿ ಹಿರೇಮಠ ಹರಟನೂರು ಅವರು ಪತ್ರಿಕಾ ಬಳಗದೊಂದಿಗೆ ತಮ್ಮ ನೋವನ್ನು ತೋಡಿಕೊಂಡರು. ಈ ಸಮಯದಲ್ಲಿ ಆಶ್ರಮದಲ್ಲಿ ಆಶ್ರಯ ಪಡೆದ 80 ವರ್ಷದ ಜಯಮ್ಮ ಸಿಂಧನೂರು ಹಾಗೂ ನಾಡಿನ ಜನರು ಕಾರುಣ್ಯ ಎನ್ನುವ ಕುಟುಂಬಕ್ಕೆ ಸಹಾಯ ಮಾಡುವುದರ ಮೂಲಕ ನಮ್ಮ ಜೀವನ ಬದುಕಿಗೆ ಆಸರೆಯಾದ ತಮ್ಮೆಲ್ಲರಿಗೂ ಒಳ್ಳೆಯದಾಗಲಿ ಬಡಜಂಗಮರಾದ ಪರೇಟನೂರಿನ ಜಂಗಮ ಕುಟುಂಬದವರು ನಮ್ಮನ್ನು ಸ್ವಂತ ತಂದೆ ತಾಯಿಗಳ ಹಾಗೆ ಪ್ರೀತಿ ತೋರಿಸಿ ನಮ್ಮೆಲ್ಲರ ಹಿಂದಿನ ನೋವನ್ನು ಮರೆಸಿ ಸ್ವರ್ಗದಂತೆ ನಮ್ಮ ಕಾರುಣ್ಯ ಕುಟುಂಬವನ್ನು ನಿರ್ವಹಣೆ ಮಾಡುತ್ತಿರುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯವಾಗಿದೆ ಎಂದು ಭಾವನಾತ್ಮಕವಾದಂತಹ ನುಡಿಗಳನ್ನು ನುಡಿದರು

