ಸಿಂಧನೂರು:ಮಹಮ್ಮದಿಯ ನೌ ಜವಾನ್ ಕಮಿಟಿಯ ಆಶ್ರಯದಲ್ಲಿ ದಿ: 10-03-2026 ಮಂಗಳವಾರ ಸಾಯಂಕಾಲ 4:00 ಗಂಟೆಗೆ ತಿಪ್ಪನಹಟ್ಟಿ ಮಸೀದಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.ಸಮಾಜದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಧರ್ಮಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು
ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಖಾಸಾ ಶಾಖಾಮಠ, ಕರಿಬಸವ ನಗರ, ಸಿಂಧನೂರು ವಹಿಸಿ ಆಶೀರ್ವಚನ ನೀಡಿದರು.ತಮ್ಮ ಆಶೀರ್ವಚನದಲ್ಲಿ ಅವರು ಎಲ್ಲಾ ಧರ್ಮಗಳ ಸಾರ ಮಾನವೀಯತೆ ಮತ್ತು ಸಹೋದರತ್ವವಾಗಿದ್ದು, ಇಂತಹ ಇಫ್ತಾರ್ ಕೂಟಗಳು ವಿವಿಧ ಧರ್ಮಗಳ ನಡುವೆ ಸೌಹಾರ್ದತೆ ಹಾಗೂ ಪರಸ್ಪರ ಗೌರವವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಮರೇಗೌಡ ಮಲ್ಲಾಪುರ, ವನಸಿರಿ ಫೌಂಡೇಶನ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಮಾತನಾಡಿ ರಮಝಾನ್ ತಿಂಗಳು ತ್ಯಾಗ, ನಿಯಮ ಮತ್ತು ದಾನಧರ್ಮದ ಸಂಕೇತವಾಗಿದ್ದು, ಇಂತಹ ಸೌಹಾರ್ದ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಮತ್ತು ಐಕ್ಯತೆಯನ್ನು ಬಲಪಡಿಸುತ್ತವೆ ಎಂದು ಹೇಳಿದರು.ಸಾಮಾಜಿಕ ಚಿಂತಕರಾದ ವೆಂಕೋಬ ನಾಯಕ್ ರಾಮತ್ನಾಳ ಅವರು ಮಾತನಾಡಿ ಇಫ್ತಾರ್ ಕೂಟಗಳು ಕೇವಲ ಉಪವಾಸ ಮುರಿಯುವ ಕಾರ್ಯಕ್ರಮವಲ್ಲ, ಅದು ಎಲ್ಲರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಪರಸ್ಪರ ಪ್ರೀತಿ ಮತ್ತು ಸಹೋದರತ್ವವನ್ನು ಬೆಳೆಸುವ ಅವಕಾಶವಾಗಿದೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾರೂನ್ ಸಾಹೇಬ್ ಜಾಗೀರ್ದಾರ, ಜಮಾತೆ ಇಸ್ಲಾಮ್ ಹಿಂದ್ ಸಿಂಧನೂರು ಅಧ್ಯಕ್ಷ ಟಿ. ಹುಸೇನ್ ಸಾಬ್, ಜಾಫರ್ ಜಾಗೀರ್ದಾರ,ಜನಾಬ ಮಹಿಬೂಬ್ ಸಾಬ್ ಸಾಹುಕಾರ್ ಮುಳ್ಳೂರು, ಜನಾಬ ಮಾಬುಸಾಬ್ ಮಾಜಿ ಅಧ್ಯಕ್ಷರು ಎಸ್.ಡಿ.ಎಂ.ಸಿ. ತಿಪ್ಪನಹಟ್ಟಿ, ಜನಾಬ ಹುಸೇನ್ ಸಾಬ್ ಬೆಂಡೋನಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಪಗಡದಿನ್ನಿ, ಜನಾಬ ಹುಸೇನ್ ಪೀರ್‌ಸಾಬ್ ಮಾಜಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಪಗಡದಿನ್ನಿ, ಜನಾಬ ಮಹಿಬೂಸಾಬ್ ವಕೀಲರು ಕುನ್ನಟಗಿ, ಜನಾಬ ಖಾದರ್ ಭಾಷಾ ನ್ಯಾಯಬೆಲೆ ಅಂಗಡಿ ಕುನ್ನಟಗಿ ಕ್ಯಾಂಪ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮೌಲಾನಾ ಫರೀದ್ ಉಮರಿ ಮಾನವಿ ಅವರು ರಂಜಾನ್ ತಿಂಗಳ ಮಹತ್ವದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ತಮ್ಮ ಭಾಷಣದಲ್ಲಿ ಅವರು ರಮಝಾನ್ ತಿಂಗಳು ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರ ತಿಂಗಳಾಗಿದ್ದು, ಈ ತಿಂಗಳಲ್ಲಿ ಮುಸ್ಲಿಮರು ಉಪವಾಸ ಆಚರಿಸುವ ಮೂಲಕ ಆತ್ಮಶುದ್ಧಿ, ನಿಯಮ ಮತ್ತು ತ್ಯಾಗವನ್ನು ಕಲಿಯುತ್ತಾರೆ. ಉಪವಾಸವು ಕೇವಲ ಆಹಾರ ಮತ್ತು ನೀರನ್ನು ತ್ಯಜಿಸುವುದಲ್ಲ, ಅದು ಮನಸ್ಸು, ಮಾತು ಮತ್ತು ನಡೆನುಡಿಗಳಲ್ಲೂ ಶುದ್ಧತೆ ತರಲು ಸಹಾಯಕವಾಗುತ್ತದೆ ಎಂದು ಹೇಳಿದರು.ಮುಂದುವರೆದು ಅವರು ರಮಝಾನ್ ತಿಂಗಳಲ್ಲಿ ಕುರಾನ್ ಅವತರಿಸಿದ ಮಹತ್ವವನ್ನು ವಿವರಿಸಿ, ಈ ತಿಂಗಳಲ್ಲಿ ಪ್ರಾರ್ಥನೆ, ದಾನಧರ್ಮ, ಬಡವರಿಗೆ ಸಹಾಯ ಹಾಗೂ ಪರಸ್ಪರ ಸಹೋದರತ್ವವನ್ನು ಹೆಚ್ಚಿಸುವುದು ಅತ್ಯಂತ ಮಹತ್ವದ್ದಾಗಿದೆ. ಇಫ್ತಾರ್ ಕೂಟಗಳು ಸಮಾಜದಲ್ಲಿ ಪ್ರೀತಿ, ಸಹಕಾರ ಮತ್ತು ಐಕ್ಯತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.ಅದೇ ರೀತಿ ಅವರು ಯುವಕರು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.ವಿಶೇಷ ಆಹ್ವಾನಿತರಾಗಿ ಜನಾಬ ಬಾಬರ್ ಪಾಷಾ ವಕೀಲರು, ಜನಾಬ ಜಿಲಾನಿ ಪಾಶ ಜಾಗೀರದಾರ, ಜನಾಬ ಜಾಫರ್ ಅಲಿ ಜಾಗೀರದಾರ, ಜನಾಬ ಖಾದರ್ ಸುಭಾನಿ, ಜನಾಬ ಎಂ.ಡಿ. ನದಿಮುಲ್ಲಾ, ಜನಾಬ ಹಾಜಿ ಮಸ್ತಾನ್ ಸಾಬ್ (ಬೆಲ್ಲೋ ಬ್ಯಾಟರಿ), ಜನಾಬ ಹಾರೂನ್ ಪಾಷಾ ಜಾಗೀರದಾರ, ಜನಾಬ ಅಬೀದ್ ಜಾಗೀರದಾರ, ಜನಾಬ ಖಾಜಿ ಮಲ್ಲಿಕ್ ಅಹಮದ್ ವಕೀಲರು, ಜನಾಬ ಶಫಿವುಲ್ಲಾ ಖಾನ್ ಸಾಬ್, ಜನಾಬ ನಿಸಾರ್ ಖಾನ್ ಸಾಬ್, ಜನಾಬ ಖಾದರ್ ವಲಿ (ವಲಿ ಆರ್ಟ್ಸ್), ಜನಾಬ ಖಾಜಾ ಹುಸೇನ್ ರೌಡಕುಂದ, ಜನಾಬ ಅಲ್ತಾಫ್ ಸಾಹುಕಾರ್ ಉಪ್ರಾಳ, ಜನಾಬ ಲಿಯಾಕತ್ ಅಹಮದ್, ಜನಾಬ ಸೈಯದ್ ಫಯಾಜ್ ಪೀರ್, ಜನಾಬ ಶಕ್ಷಾವಲಿ ವಕೀಲರು ಬೂತಲದಿನ್ನಿ, ಜನಾಬ ಮೊಹಮ್ಮದ್ ಮುಸ್ತಫಾ (ಮುಸ್ತಫಾ ಜ್ಯೂವೆಲ್ಲರ್ಸ್), ಜನಾಬ ಶಬ್ಬಿರ್ ನಾಯಕ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಹಾಗು ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿಯಾದ ಅಮರೇಗೌಡ ಮಲ್ಲಾಪುರ ಅವರು ಹಾಗೂ ಗಣ್ಯರು ಸೇರಿ ಮಸೀದಿ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಉಳಿಸಿ ನಮ್ಮ ಮುಂದಿನ ಪೀಳಿಗೆಗಾಗಿ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಯುವಕರಾದ ಮಂಜೂರು ಹುಸೇನ್,ಮೆಹಬೂಬ್,ಬಾಷಾ, ಗೌಸ್, ಅವೇಜ್,ಇಮ್ರಾನ್, ಕೈಫ್,ಆಸಿಫ್, ಇನಾಯತ್ ಅವರ ನೇತೃತ್ವದಲ್ಲಿ ತಿಪ್ಪನಹಟ್ಟಿಯ ಯುವಕರು ಸೇರಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.




