ಮಾನ್ವಿ: ಪಟ್ಟಣದ ಪಟ್ಟಣದ ಪಂಪಾ ಉದ್ಯಾನವನದಲ್ಲಿ ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ ವತಿಯಿಂದ ಸಂವಿಧಾನ ದಿನ ಅಂಗವಾಗಿ 3ನೇ ವರ್ಷದ ಮಾಜಿ ಯೋಧರು,ಸೈನಿಕರು,ರೈತರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಚಾಲನೆ ನೀಡಿ ಮಾತನಾಡಿ ದೇಶವನ್ನು ಕಾಯುವ ಯೋಧರನ್ನು, ಹಾಗೂ ಆಹಾರವನ್ನು ನೀಡುವ ರೈತರಿಗೆ ಪ್ರತಿಯೊಬ್ಬರು ಕೂಡ ಗೌರವ ಸಲ್ಲಿಸಬೇಕು ಹನುಮಂತ ಕೋಟೆಯವರು ಕಳೆದ ಮೂರು ವರ್ಷಗಳಿಂದ ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಸೇವ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಅವರಿಗೆ ನಮ್ಮಲರ ಸಹಕಾರ ಅಗತ್ಯವಾಗಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲ್ಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಚೆನ್ನಾರೆಡ್ಡಿ, ಮಾಜಿ ಸೈನಿಕರಾದ ಶಿವಯ್ಯ ಸ್ವಾಮಿ,ಸೈಯಾದ್ ಮುಕ್ತಾರ,ಕೃಷ್ಣ ಮೂರ್ತಿ, ಬಸವರಾಜ್ ಮುಸ್ಟೂರು, ಹನುಮಂತ ಜಲ್ಲಿ,ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರನ್ನು,ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಭಾರತೀಯರ ಸೇವಾ ಸಮಿತಿಯ ರಾಷ್ಟಿçÃಯ ಅಧ್ಯಕ್ಷರಾದ ರಾಮಚಂದ್ರ ಹೂಡಿ ಚಿನ್ನಿ, ಯುವಶಕ್ತಿ ಬೆಂಗಳೂರಿನ ಸೂರಿ, ಭಾರತೀಯರ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಬಿ.ತಿಮ್ಮಪ್ಪ, ,ಕ.ಸಾ.ಪ,ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೋಸೂರು, ಸೇರಿದಂತೆ ಇನ್ನಿತರರು ಇದ್ದರು. ಮಾನ್ವಿ: ಪಟ್ಟಣದ ಪಟ್ಟಣದ ಪಂಪಾ ಉದ್ಯಾನವನದಲ್ಲಿ ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ ವತಿಯಿಂದ ಮಾಜಿ ಯೋಧರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *