ಮಸ್ಕಿ: ನಮ್ಮ ಕಾನೂನಿನ ಸೂರಿನಡಿ ಮಹಿಳೆಯರಿಗೆ ರಕ್ಷಣೆಯಿದ್ದು, ಅಂತಹ ಕಾನೂನುಗಳ ಬಗ್ಗೆ ಪ್ರತಿಯೊರ್ವ ಮಹಿಳೆಯೂ ಅರಿವು ಹೊಂದಬೇಕು. ಮಹಿಳೆಯರು ತಮ್ಮ ಹಕ್ಕುಗಳು ಮತ್ತು ಕರ್ತವ್ಯದ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆಯದಿದ್ದರೆ ಸಮಾಜದಲ್ಲಿ ನಡೆಯುವ ದೌರ್ಜನ್ಯಗಳಿಂದ ರಕ್ಷಣೆ ಹೊಂದಲು ಅಸಾಧ್ಯ. ಹೀಗಾಗಿ ಮಹಿಳೆಯರಿಗೆ ಕಾನೂನು ಅರಿವು ಅಗತ್ಯ ಎಂದು ಲಿಂಗಸುಗೂರಿನ ನ್ಯಾಯವಾದಿ ಪ್ರೇರಣಾ ರಾಮನಗೌಡ ಹೇಳಿದರು.
ಮಸ್ಕಿ ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ವಿವಿಧ ಮಹಿಳಾ ಸಂಘಟನೆಗಳೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆಯನ್ನು ಮಾಡುತ್ತಿದ್ದಾರೆ. ಕಾನೂನಿನ ಸೂರಿನಡಿ ಮಹಿಳೆಯರಿಗೆ ರಕ್ಷಣೆಯಿದ್ದು, ಅಂತಹ ಕಾನೂನುಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಯೂ ಅರಿವು ಹೊಂದಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗಾಗಿ ಜಾರಿಗೆ ತಂದಿರುವ ಕಾನೂನಿನ ಬಗ್ಗೆ ತಿಳಿದುಕೊಂಡು ಇತರರಿಗೂ ಅದನ್ನು ತಿಳಿಸುವ ಕೆಲಸ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕಾನೂನಿನ ಅರಿವು ಹೊಂದಬೇಕು. ಅದರಲ್ಲೂ ಮಹಿಳೆಯರು ಕಾನೂನಿನ ಬಗ್ಗೆ ಮಾಹಿತಿ ಹೊಂದಬೇಕೆಂದು ಮಹಿಳೆಯರ ಹಕ್ಕು, ರಕ್ಷಣೆಗಳ ಕುರಿತು ಕಾನೂನು ಅರಿವು ಬಗ್ಗೆ ಉಪನ್ಯಾಸ ನೀಡಿದರು.
ಶಿಕ್ಷಕಿ ನೇತ್ರಾವತಿ ಹಿರೇಮಠ, ಜಿ.ಪಂ ಮಾಜಿ ಅಧ್ಯಕ್ಷೆ ಶ್ರೀದೇವಿ ಕ್ಯಾತ್ನಟ್ಟಿ ಮಾತನಾಡಿ, ಕುಟುಂಬ ನಿರ್ವಹಣೆ ಹಾಗೂ ಕುಟುಂಬದಲ್ಲಿ ಸಾಮರಸ್ಯ ಕಾಪಾಡುವಂತ ಶಕ್ತಿ ಮಹಿಳೆಯರಲ್ಲಿದೆ ಎಂದರು. ಮಹಿಳೆ ಸಾಮರ್ಥ್ಯಳು ಅವಳಲ್ಲಿ ಅಗಾದವಾದ ಶಕ್ತಿಯಿದೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು ಅದನ್ನು ಸಶಕ್ತಳಾಗಿ ನಿರ್ವಹಿಸುವ ಶಕ್ತಿ ಕೂಡ ಮಹಿಳೆಯರಲ್ಲಿದೆ ಎಂದರು. ಇಂದಿನ ದಿನಮಾನಗಳಲ್ಲಿ ಮಹಿಳೆಯರು ಶಿಕ್ಷಣ ಪಡೆದು ಉದ್ಯೋಗ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ ಸಾಧನೆಯ ಮೈಲಿಗಲ್ಲಿನ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ತಾಯಿ ಗುಣವಿರುವಂತ ಹೆಣ್ಣು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಂತ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು. ಶಿಕ್ಷಣವಂತರಾದ ಮಹಿಳೆಯರಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಹೆಣ್ಣು ಮಗು, ಗಂಡು ಮಗು ಎಂಬ ತಾರತಮ್ಯ ಮಾಡದೆ ಮಕ್ಕಳಿಗೆ ಉತ್ತಮವಾದ ಸಂಸ್ಕಾರಯುತ ಶಿಕ್ಷಣ ಕೊಡಿಸಿ ಉತ್ತಮ ನಾಗರೀಕರನ್ನಾಗಿ ಮಾಡಿ ಸಮಾಜಸೇವೆಗೆ ಮುಂದಾಗುವಂತೆ ಬೆಳೆಸುವದಕ್ಕೆ ಮುಂದಾಗಬೇಕೆಂದರು.
ಚಂದ್ರಕಲಾ ದೇಶಮುಖ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರು. ಉದ್ಯಮಿ ಪ್ರಕಾಶ ಧಾರಿವಾಲ, ಚಂದ್ರಕಲಾ ದೇಶಮುಖ, ವಿದ್ಯಾವತಿ ವÀನಕಿ, ರೋಹಿಣಿ, ಸಹನಾ ಬ್ಯಾಳಿ, ಈರಮ್ಮ ಬರಗಿ, ಶಾರದಾ, ಕಾವೇರಿ, ಚೇತನ, ಲಲಿತಾ.ಪಿ ಹಾಗೂ ವಿವಿಧ ಮಹಿಳಾ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ನೂರಾರು ಮಹಿಳೆಯರು ಇದ್ದರು.

