ಅರಕೇರಾ : ತಾಲೂಕಿನ ಕೆ.ಹನುಮಂತ್ರಾಯನಗರದ ಭಕ್ತಾಧಿಗಳಿಂದ ದಕ್ಷಿಣ ಭಾರತ ಪ್ರಸಿದ್ದ ಪವಿತ್ರ ಕ್ಷೇತ್ರವಾದ ಶ್ರೀಶೈಲಕ್ಕೆ ಪಾದಯಾತ್ರೆ ಶ್ರೀಶೈಲದ ಮಲ್ಲಿಕಾರ್ಜುನಕ್ಷೇತ್ರಕ್ಕೆ ಯುಗಾದಿ ಹಬ್ಬದ ಅಂಗವಾಗಿ ರಥೋತ್ಸವಕ್ಕೆ ಪ್ರತಿವರ್ಷದಂತೆ ಈವರ್ಷಕೂಡಾ ಭಕ್ತಾಧಿಗಳು ಪಾತ್ರಯಾತ್ರೆ ಹಮ್ಮಿಕೊಳ್ಳಲಾಗಿದೆ. ಕೆ,ಹನುಮಂತ್ರಾಯನಗರದ ಭಕ್ತಾಧಿಗಳು 11 ನೇವರ್ಷದ ಪಾದಯಾತ್ರೆಗೆ ಇಂದು ದಿನಾಂಕ 9-3-2026 ರಂದು ಮುಂಜಾನೆ 6ಗಂಟೆಗೆ ಪಾದಯಾತ್ರೆಗೆ ಹೋರಟರು.
ಇಂದು ಕೆ,ಹನುಮಂತ್ರಾಯ ನಗರದಿಂದ ಪಾದಯಾತ್ರೆ ಆರಂಭಮಾಡಿ ಶ್ರೀ ಭಗಮ್ಮದೇವಿ ದೇವಸ್ಥಾನದಲ್ಲಿ ಮತ್ತು ಶ್ರೀಮಾರೇಮ್ಮದೇವಿ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿದರು. ಪಾದಯಾತ್ರೆಗೆ ತೆರುಳುಭಕ್ತಾಧಿಗಳಿಗೆ ಗ್ರಾಮಸ್ಥರು ಭಾಜಿ ಭಜಂತ್ರಿಯೊಂದಿಗೆ ಬೀಳುಕೊಟ್ಟರು.ಪಾದಯಾತ್ರೆಯಲ್ಲಿ ಮಹಿಳೆಯರು ಪುರುಷರು ಮಕ್ಕಳು ಭಾಗವಹಿಸಿದ್ದರು.
ಅರಕೇರಾ,ಮಲ್ಲಾಪೂರು,ಪಿಲಿಗುಂಡ ಮೂರು ಗ್ರಾಮಗಳ ಭಕ್ತಾಧಿಗಳು ಪಾದಯಾತ್ರೆ ಕೈಗೊಂಡಿದದ್ದರು
ಸಂದರ್ಬದಲ್ಲಿ ಭಾಗೇಶನಾಯಕ ಮಾಜಿಗ್ರಾಮಪಂಚಾಯತ ಸದಸ್ಯರು,ವೆಂಕಟೇಶನಾಯಕ ಮಾಜಿ ಗ್ರಾಮ ಪಂಚಾಯತ ಸದಸ್ಯರು, ಕೃಷ್ಣನಾಯಕ ಕರ್ನಾಳ ಎಸ್ ಡಿ ಎಂಸಿ ಅಧ್ಯಕ್ಷರು,ಸಾಭಯ್ಯಕರ್ನಾಳ.ನಾಗೇಶಕರ್ನಾಳ,ಭೀಮಣ್ಣನಾಯಕ ಕರ್ನಾಳ,ಭಗವಂತ್ರಾಯನಾಯಕ ತಾತೆ ಮಾಜಿಗ್ರಾ.ಪಂ.ಸ. ಸಿದ್ದಲಿಂಗಪ್ಪ, ಬಸನಗೌಡ ಕರ್ನಾಳ,,ಶಿವಗೇನಿಜಲ್ಲೆ ರವಿ ಕರ್ನಾಳ. ರಂಗಪ್ಪ, ಮುದಕಪ್ಪ ಸೇರಿದಂತೆ ಕೆ,ಹನುಮಂತ್ರಾಯನಗರ ಹಾಗೂ ಅರಕೇರಾ ಗ್ರಾಮಸ್ಥರು ಉಪಸ್ಥಿತರಿದ್ದರು.ಪಾದಯಾತ್ರೆ ಕೈಗೊಂಡಿರುವ ಭಕ್ತಾಧಿಗಳಿಗೆ ಶಿವಗೇನಿನಾಯಕ ಜಲ್ಲೆ,ಬಸವರಾಜನಾಯಕ ಜಲ್ಲೆ, ಶಿವರಾಜನಾಯಕ ಕಟಿಗಿಮಿಷನ್ ಇವರುಗಳು ಭಕ್ತಾಧಿಗಳಿಗೆ ಉಪಹಾರ ವ್ಯವಸ್ಥೆಮಾಡಿದರು.

