ಕವಿತಾಳ :
ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರಿಗೆ ಪಟ್ಟಣದ ಭಕ್ತರಿಂದ ಅನ್ನದಾಸೋಹವನ್ನು ಕನಕನಗರ ಹತ್ತಿರ ಕೈಗೊಳ್ಳಲಾಗಿದೆ.
ದಾಸೋಹ ಸೇವೆಯಲ್ಲಿ ಪಾಲ್ಗೊಂಡಿರುವ ಶಿವಣ್ಣತಾತ ದಿನ್ನಿ ಅವರು ಮಾತನಾಡಿ `ಪಟ್ಟಣದ ಭಕ್ತರಿಂದ ಕಳೆದ ೧೫ ವರ್ಷಗಳಿಂದ ಪಟ್ಟಣದ ಮೂಲಕ ಶ್ರೀಶೈಲ್ಕಕೆ ತೆರಳುವ ಭಕ್ತರಿಗೆ ಬೆಳಿಗ್ಗೆ ಚಹಾ, ಬಿಸ್ಕಿಟ್, ಉಪಹಾರ, ಮದ್ಯಾಹ್ನ ಮತ್ತು ರಾತ್ರಿ ಹೊತ್ತಿಗೆ ಬರುವ ಭಕ್ತರಿಗೆ ಉಗ್ಗಿ, ಅನ್ನ ಸಾಂಬರ್, ಪಲಾವ್ ಸೇರಿದಂತೆ ಕಲ್ಲಂಗಡಿ ಹಣ್ಣುಗಳು,ಮಜ್ಜಿಗೆ, ಬಾಳೆಹಣ್ಣು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ’ ಎಂದರು.
ಯಮನಪ್ಪದಿನ್ನಿ, ಕರಿಯಪ್ಪ ದಿನ್ನಿ, ಶಿವನಪ್ಪ ದಿನ್ನಿ, ಸಿದ್ದನಗೌಡ, ನಿಂಗ್ಪಪ ದಿನ್ನಿ, ನಿಂಗಣ್ಣ ಪೂಜಾರಿ, ಆದಪ್ಪ ದಿನ್ನಿ, ದೇವರಾಜ ದಿನ್ನಿ,ಭೀರಪ್ಪ ದಿನ್ನಿ, ನಿಂಗಪ್ಪ ಹಿರೇಕುರುಬರು, ಶಂಕ್ರö್ಪಪ ತೊಪ್ಪಲದೊಡ್ಡಿ, ಅಯ್ಯಪ್ಪ ತೋಳ ಸೇರಿದಂತೆ ಇನ್ನಿತರ ಮುಖಂಡರು ಐದು ದಿನಗಳ ಕಾಲ ಭಕ್ತರಿಗೆ ಪ್ರಸಾದ ಸೇವೆಯನ್ನು ಕೈಗೊಂಡಿದ್ದರು.

Leave a Reply

Your email address will not be published. Required fields are marked *