ಕವಿತಾಳ:
ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ವಾರದ ಸಂತೆ ಸುಂಕ ವಸೂಲಾತಿಯ ವಾರ್ಷಿಕ ಹರಾಜು ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಈ ಬಾರಿಯ ಗುತ್ತಿಗೆಯನ್ನು ರಫಿ ಮೆಹಬೂಬ್ ಸಾಬ್ ಒಂಟಿಬಂಡಿ ಅವರು ಪಡೆದುಕೊಂಡಿದ್ದಾರೆ. ಇಂದು ನಡೆದ ಬಹಿರಂಗ ಹರಾಜಿನಲ್ಲಿ ಒಟ್ಟು ರೂ.7,೦೦,೧೦೦ ಗೆ ಹರಾಜು ಕೂಗುವ ಮೂಲಕ ಅವರು ಈ ವರ್ಷದ ಗುತ್ತಿಗೆಯನ್ನು ತಮ್ಮದಾಗಿಸಿಕೊಂಡರು. ಪಂಚಾಯಿತಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಿತು.
ನಂತರ ಮುಖ್ಯಾಧಿಕಾರಿ ಜಸ್‌ಪಾಲ್ ಸಿಂಗ್ ಮಾತನಾಡಿ “ಗುತ್ತಿಗೆದಾರರು ನಿಗದಿಪಡಿಸಿದ ನಿಯಮಗಳ ಅನ್ವಯವೇ ಸಂತೆ ಸುಂಕವನ್ನು ವಸೂಲಿ ಮಾಡಬೇಕು. ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ, ಸಂತೆ ಸುಂಕ ವಸೂಲಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಬಾರದು” ಎಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣ ಪಂಚಾಯತ್ ಆವರಣದಲ್ಲಿ ನಡೆದ ಹರಾಜು ಪ್ರಕ್ರಿಯೆ ಮುಖ್ಯಾಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಸದಸ್ಯರ, ಮುಖಂಡರ ಸಮಮುಖದಲ್ಲಿ ಸಂಪೂರ್ಣ ಪಾರದರ್ಶಕವಾಗಿ ಸಾಗಿತು.
ಹರಾಜು ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ರಮೇಶ್ ನಗನೂರು, ರುಕ್ಮುದ್ದೀನ್, ಮುಖಂಡರಾದ ತಿಪ್ಪಯ್ಯಸ್ವಾಮಿ ,ಓಒಣ್ಣ ಕಡಕಲ್ ಹಾಗೂ ಪಂಚಾಯತ್ ಸಿಬ್ಬಂದಿಗಳಾದ ರಾಘವೇಂದ್ರ ಕುಲಕರ್ಣಿ, ಪ್ರಶಾಂತ್, ರಾಮು, ಮಹೇಶ್, ವೆಂಕಟೇಶ್ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *