ಸಿಂಧನೂರು ಮಾರ್ಚ್ 10 : ತಾಲೂಕಿನ ಸಮೀಪದ. ಟಿ ಸೂರ್ಯರಡ್ಡಿ ಕ್ಯಾಂಪ್ ಅಂಗನವಾಡಿ ಕೇಂದ್ರದಲ್ಲಿ ತಾಯಿಂದಿರಿಗೆ ಮಾಹಿತಿ ಶಿಕ್ಷಣ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿ ಆರೋಗ್ಯಕರ ತಾಯಿಂದಿರಿಂದ ಆರೋಗ್ಯವಂತ ಮಕ್ಕಳನ್ನು ನೋಡಬಹುದು. ಅಪೌಷ್ಟಿಕತೆಯಿಂದ ಮಕ್ಕಳ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ ಇದೆ. ಮಕ್ಕಳಲ್ಲಿ ಅಪೌಷ್ಟಿಕತೆ ಮಕ್ಕಳು ದೈಹಿಕ ಬೆಳವಣಿಗೆ ಕುಂಠಿತವಾಗುವುದು ಅಪೌಷ್ಟಿಕತೆ ಮುಖ್ಯ ಕಾರಣ ಅನಕ್ಷರಸ್ಥತೆ ಬಡತನ ಮಗುವಿನ ಆರೈಕೆ ಮಾಡಿದಿರುವುದು ಮಗುವಿಗೆ ತಪ್ಪದೇ ಎದೆ ಹಾಲುಣಿಸುವುದು ಮಗುವಿಗೆ ಕಿವುಚಿದ ಹಣ್ಣುಗಳನ್ನು ಮತ್ತು ದೇಶದ ಹಾಗೂ ಕಿವುಚಿದ ತರಕಾರಿಗಳು ಮತ್ತು ಬೆಯಿಸಿದ ಬೇಳೆಗಳಂತ ಪೂರಕ ಹಾರವನ್ನು ಕೊಡಬೇಕು ಮಗುವಿಗೆ ಬೇಕಾದ ವರ್ಷವಿರುವ ಎಲ್ಲಾ ಪೋಷಕಾಂಶಗಳು ಸಹ ತಾಯಿಯ ಎದೆಹಾಲಿನಲ್ಲಿ ಇರುತ್ತದೆ. ತಾಯಿಯೇ ಎದೆಹಾಲು ಪರಿಶುದ್ಧ ಹಾಗೂ ರೋಗಾಣು ರಹಿತವಾಗಿದ್ದು ಮಗುವನ್ನು ಯಾವುದೇ ರೋಗ ಬರದಂತೆ ಅನೇಕ ಸಂಘಗಳಿಂದ ವಿಶೇಷವಾಗಿ ಅತಿಸಾರ ಬೇದಿಯಿಂದ ರಕ್ಷಿಸುತ್ತದೆ ಬೆಳವಣಿಗೆ ಹಂತದಲ್ಲಿ ಮಗುವಿನ ಆರೈಕೆ ಮುಖ್ಯವಾಗಿದೆ ಎಂದರು.
ನಂತರ ಮಾತನಾಡಿದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ನಿಂಗಮ್ಮ ಅವರು ಹೆರಿಗೆ ನಂತರ ತಾಯಿಯ ಆರೈಕೆ ಮುಖ್ಯವಾಗಿದೆ ತಾಯಿಂದಿರೂ ಹೆರಿಗೆ ನಂತರ ಪೌಷ್ಟಿಕ ಆಹಾರ ಸೇವನೆ ಮತ್ತು ಆರೋಗ್ಯದ ಆರೈಕೆ ಬಹಳ ಮಹತ್ವ ಪಡೆದಿದೆ ಎಲ್ಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ಕಡ್ಡಾಯವಾಗಿ ಕೊಡಸಿಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ರಾಜೇಶ್ವರಿ. ಆಶಾ ಕಾರ್ಯಕರ್ತರಾದ ಮಾಲಾಶ್ರೀ ಮತ್ತು ಮಕ್ಕಳ ತಾಯಿಂದಿರಾದ ಯಲ್ಲಮ್ಮ . ರಾಧಿಕಾ . ಅಂಬಿಕಾ . ಸವಿತಾ. ಹುಸೇನಬಿ. ಉಪಸ್ಥಿತರಿದ್ದರು.


