ರಾಯಚೂರು : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಶ್ರೀ ಸುಯತೀಂದ್ರ ತೀರ್ಥರ ಮಧ್ಯಾರಾಧನೆಯ ಪ್ರಯುಕ್ತ ಶ್ರೀ ಸುಯತೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಪಂಚಾಮೃತಾಭಿಷೇಕ ನೆರವೇರಿತು.
ನಂತರ ಶ್ರೀ ಸುಯತೀಂದ್ರ ತೀರ್ಥರ ರಥೋತ್ಸವಕ್ಕೆ ಚಾಲನೆ ನೀಡಿದರು.
ಅಪಾರ ಸಂಖ್ಯೆಯಲ್ಲಿ ಭಕ್ತರು, ಶಿಷ್ಯರು, ಭಜನಾ ಮಂಡಳಿಯ ಸದಸ್ಯರು ಶ್ರದ್ಧಾ ಭಕ್ತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡರು.

