ಹಿಂದೂ ಸ್ವರಾಜ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಣೆ ಭಾನುವಾರ ನಡೆಯಿತು.
ಪಟ್ಟಣದ ಸೋಮವಾರ ಪೇಟೆ ಬನ್ನಿ ಮಹಾಂಕಾಳಿ ಕಟ್ಟೆ ಮುಂಭಾಗದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಸಿದ್ದಯ್ಯ ಸ್ವಾಮಿ ಪೂಜೆ ಸಲ್ಲಿಸಿದರು. ಶಶಿಕಲಾ ಬೋವಿ ಮೆರವಣಿಗೆಗೆ ಚಾಲನೆ ನೀಡಿ, ಪುಷ್ಪರ್ಚನೆ ಮಾಡಿದರು.
ಮೆರವಣಿಗೆಯಲ್ಲಿ ವಿವಿಧ ವಾದ್ಯ ತಂಡಗಳು ಭಾಗವಹಿಸಿದ್ದವು. ರಾಯಚೂರು ಎಸ್‌ಪಿ ಅರುಣಾಂಗ್ಷ ಗಿರಿ ನೇತೃತ್ವದಲ್ಲಿ ಲಿಂಗಸುಗೂರು ಡಿ.ವೈ.ಎಸ್.ಪಿ, ಮಸ್ಕಿ ಸಿಪಿಐ, ಮುದಗಲ್ ಪಿಎಸ್‌ಐ ಸೇರಿದಂತೆ ಇನ್ನಿತರ ಪಿಎಸ್‌ಐ, ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದರು.
ಗುರುರಾಜ ದೇಶಪಾಂಡೆ, ಗುಂಡಪ್ಪ ಗಂಗಾವತಿ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಶರಣಬಸವ ವ್ಯಾಕರನಾಳ, ರವಿ ಕಟ್ಟಿಮನಿ, ಪಕೀರಪ್ಪ ಕುರಿ, ನ್ಯಾಮತ್ ಖಾದ್ರಿ, ರಘುವೀರ ಮೇಗಳಮನೆ, ಕರಿಯಪ್ಪ ಯಾದವ, ಕಾಂತ ಕುಮಾರ ಪತ್ತಾರ, ಸಂತೋಷ, ರಾಘವೇಂದ್ರ ಸುರಪುರ, ಉದಯಕುಮಾ ಕಮ್ಮಾರ, ವಿಜಯ ಪಾಟೀಲ ಇದ್ದರು.

