ರಾಯಚೂರು : ಬಸವಣ್ಣ ಮಹಾಮನೆಯ ನಿರ್ಮಾಣದ ಮೂಲಕ ಎಲ್ಲ ಮಹಿಳೆಯರಿಗೆ ಸಮಾನತೆ ನೀಡಿದ್ದಾರೆ’ ಎಂದು ಶಿಶು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಹೇಳಿದರು.
ಇಲ್ಲಿನ ಬಸವ ಕೇಂದ್ರದಲ್ಲಿ ಬಸವ ಕೇಂದ್ರ, ಅಕ್ಕನ ಬಳಗ, ಜಿಲ್ಲಾ ಕದಳಿ ವೇದಿಕೆ, ಜಾಗತಿಕ ಲಿಂಗಾಯತ ಮಾಹಾಸಭಾ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಶರಣ ಬಿಬ್ಬಿ ಬಾಚರಸ ಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯವಾಗಿ ಮನಸ್ಸಿನ ಭಾವನೆಗಳನ್ನು ಸ್ವತಂತ್ರವಾಗಿ ಆಲೋಚಿಸಿ ಬೇರೆ ಬೇರೆ ರೀತಿಯಲ್ಲಿ ಸಮಾಜಕ್ಕೆ ಮುಟ್ಟಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ್ದರು’ ಎಂದು ತಿಳಿಸಿದರು.

‘ಕಲ್ಯಾಣ ಕ್ರಾಂತಿಯ ನಂತರ ವಚನಗಳು ಉಳಿದಿದ್ದರೆ ಅದಕ್ಕೆ ಶರಣೆ ಅಕ್ಕನಾಗಮ್ಮನ ಧೃಡ ನಿರ್ಧಾರವೇ ಕಾರಣ. ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬಂತೆ ಅಂದು ಬಸವಣ್ಣ ಮನೆ ಬಿಟ್ಟು ಹೊರಟಾಗ ತಾಯಿಯಾಗಿ ಜೊತೆಗೆ ಹೊರಟು ಮಗ ಚೆನ್ನಬಸವಣ್ಣನನ್ನು, ಬಸವಣ್ಣನನ್ನು ಕಾಪಾಡಿದ್ದು ಅಕ್ಕನಾಗಮ್ಮ’ ಎಂದು ವಿವರಿಸಿದರು.

ಡಾ. ಶಿಲಾ ಸಗರದ ಮಾತನಾಡಿದರು. ಕಾರ್ಯಕ್ರಮವನ್ನು ಗಿರಿಜಾ ಸಿರವಾರ ಉದ್ಘಾಟಿಸಿದರು. ರಾಜನಗೌಡ ಕೋಳೂರು ಅಧ್ಯಕ್ಷತೆ ವಹಿಸಿದ್ದರು.

ಜಗದೇವಿ, ಉಮಾದೇವಿ, ಲಲಿತಾ, ಚಂದ್ರಕಲಾ ಪಾಟೀಲ, ಸುನಂದ ಪಾಟೀಲ, ಸರ್ವಮಂಗಳಾ ಹಿರೇಮಠ, ಪಾರ್ವತಮ್ಮ ಮಲದಕಲ್, ಸುಮಂಗಲಾ ಸಕ್ರಿ, ಜೆ.ಬಸವರಾಜ, ಶಿವಯೋಗಿ ಪಾಟೀಲ ಉಪಸ್ಥಿತರಿದ್ದರು.

ಪಾರ್ವತಿ ಪಾಟೀಲ ನಿರೂಪಿಸಿದರು. ಪ್ರಿಯಾಂಕ ಗದ್ವಾಲ್ ಸ್ವಾಗತಿಸಿದರು. ಜಯಶ್ರೀ ವಂದಿಸಿದರು.

Leave a Reply

Your email address will not be published. Required fields are marked *