ಮಾನ್ವಿ: ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಪದವಿ ಮಹಾವಿದ್ಯಾಲಯದ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ 6 ನೇ ದಿನದ ಕಾರ್ಯಕ್ರಮದಲ್ಲಿ ಡಾ.ಅಂಬಿಕಾ ಮಧುಸೂಧನರವರು ವಿಶೇಷ ಉಪನ್ಯಾಸ ನೀಡಿ ರಾಷ್ಟೀಯ ಸೇವಾ ಯೋಜನೆಯಲ್ಲಿ ಭಾಗವಹಿಸುವುದರಿಂದ ನಾಯಕತ್ವ ಗುಣಗಳನ್ನು ಬೆಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಮನುಷ್ಯನಿಗೆ ದೈಹಿಕ ಸಮಸ್ಸೆ ಎಷ್ಟು ಮುಖ್ಯನೋ ಅಷ್ಟೇ ಮಾನಸಿಕ ಸಮಸ್ಸೆ ಪ್ರತಿಯೊಬ್ಬ ವ್ಯಕ್ತಿಗೆ ಮುಖ್ಯವಾಗಿರುತ್ತದೆ . ಮಾನಸಿಕ ಸಮಸ್ಸೆಯಿಂದ ಖಿನ್ನತೆ ಒಳಗಾಗುವುದು, ಉದ್ವೇಗಕ್ಕೆ ಒಳಗಾಗುವುದು, ಇಂದಿನ ಯುವಕರು ದುಃಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಅಪೌಷ್ಟಿಕತೆಯಿಂದ ಮಾನಸಿಕ ಸಮಸ್ಸೆಗೆ ಒಳಗಾಗುತ್ತಿದ್ದಾರೆ. ಇಂದಿನ ಯುವಕ- ಯುವತಿಯರು ಮೊಬೈಲ್ ಹಾವಳಿಯಿಂದ ಮಾನಸಿಕ ಸಮಸ್ಸೆಗೆ ಒಳಗಾಗುತ್ತಿದ್ದಾರೆ. ಇಂದಿನ ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಡರಾಗಬೇಕೆಂದರೆ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಯೋಗ ಮಾಡಬೇಕು ಎಂದುಹೇಳಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ರವಿ ಸುಂಕನೂರು ಉದ್ಘಾಟಿಸಿ ಮಾತನಾಡಿ ಯೋಜನೆ ಮತ್ತು ಪ್ರಯೋಜನೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕು ಎಂದು ಹೇಳಿದರು.ಇನ್ನೊರ್ವ ಮುಖ್ಯ ಅತಿಥಿಯಾಗಿ ದೇವೇಂದ್ರಪ್ಪ ಕರಡಿಗುಡ್ಡ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಇರಬೇಕು ನಾವು ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿ ಕೊಳ್ಳಬೇಕೆಂದರೆ ಆಯ್ಕೆ, ಅವಕಾಶ, ಬದಲಾವಣೆ ಮಾಡಿಕೊಂಡಾಗ ನಾವು ಮಾಡಿದ ಕಾರ್ಯ ಇನ್ನೊಬ್ಬರಿಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ನಕಾರಾತ್ಮಕವಾಗಿ ಆಲೋಚನೆ ಮಾಡಬೇಡಿ ಸಾಕಾರಾತ್ಮಕವಾಗಿ ಆಲೋಚನೆ ಮಾಡಿ ಒಳ್ಳೆಯದಾಗುತ್ತದೆ ಎಂದು ಹೇಳಿದರು.ನಾರಾಯಣ ಮುಖ್ಯಗುರುಗಳು ಮಾತನಾಡಿ ವಿದ್ಯಾರ್ಥಿಗಳು ನಮ್ಮ ಊರಿನ ಜನಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು ಮತ್ತು ನಮ್ಮ ಶಾಲೆಯ ಮೈದಾನವನ್ನು ಸೇವಾ ಮನೋಭಾವನೆಯಿಂದ ಉತ್ತಮವಾದ ಶ್ರಮದಾನ ಮಾಡಿದ್ದೀರಿ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಣ್ಣ ನಾಯಕ ವಹಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಉದ್ದೇಶವೇನೆಂದರೆ ಪ್ರತಿಯೊಂದು ದಿನ ಕಾರ್ಯಕ್ರಮ ಆಯೋಜನೆ ಮಾಡಿ ವಿಶೇಷ ಉಪನ್ಯಾಸ ನೀಡಿದ ವಿಷಯದ ಮೌಲ್ಯಗಳನ್ನು ಜೀವನದಲ್ಲಿ ಪ್ರತಿಯೊಬ್ಬ ಶಿಬಿರಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಂದು ಹೇಳಿದರು .ಈ ಕಾರ್ಯಕ್ರಮದಲ್ಲಿ
ಕಾಲೇಜಿನ ಪ್ರಾಚಾರ್ಯರಾದ ಶಂಕರಪ್ಪ ಅಂಗಡಿ,ಊರಿನ ಮುಖಂಡರಾದ ಬಾಲಯ್ಯ ನಾಯಕ ಸಹಾಯಕ ಪ್ರಾದ್ಯಾಪಕರು, ಡಾ.ದೇವೇಂದ್ರಪ್ಪ ಕರಡಿಗುಡ್ಡ ಸಹಾಯಕ ಪ್ರಾದ್ಯಾಪಕರು, ಭಾಗಯ್ಯ ನಾಯಕ ಉಪನ್ಯಾಸಕರು,ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಆಂಜನೇಯ ನಸಲಾಪುರ.ಚಂದ್ರಶೇಖರ ಎಚ್ ಸಹಾಯಕ ಪ್ರಾಧ್ಯಾಪಕರು. ಉಪನ್ಯಾಸಕರಾದ ಶರಣಬಸವ ಕರಡಿಗುಡ್ಡ, ಶೈಲಜಾ, ಸಂತೋಷ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಮತ್ತು ಶಿಬಿರಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದ್ದರು. ಏನ್.ಎಸ್.ಎಸ್ ಗೀತೆಯನ್ನು ರಾಜೇಶ್ವರಿ ಸಂಗಡಿಗರು ಹಾಡಿದರು. ರೇಣುಕಾ ನಿರೂಪಿಸಿದರು, ಐಶ್ವರ್ಯ ಸ್ವಾಗತಿಸಿದರು, ಶಾವಂತ್ರಿ ವಂದಿಸಿದರು.


