ಲಿಂಗಸಗೂರು : ಮಾ 11 ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ (ರಿ) ಮತ್ತು ಉತ್ತರ ಕರ್ನಾಟಕ ಮಡಿವಾಳರ ಸಂಘ (ರಿ) ಹಾಗೂ ಜಗದ್ಗುರು ಡಾ. ಶ್ರೀ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠ, ಚಿತ್ರದುರ್ಗ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀಕ್ಷೇತ್ರ ಕರಿಂಜೆ, ಮೂಡಬಿದ್ರೆ, ದಕ್ಷಿಣ ಕನ್ನಡ
ಇವರುಗಳ ದಿವ್ಯ ಸಾನಿಧ್ಯ ಹಾಗೂ ನೇತೃತ್ವದಲ್ಲಿ ಮಾರ್ಚ್ 16 ರ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಮಗೆ ಸಿಗಬೇಕಾದ ಹಕ್ಕನ್ನು ಪಡೆದುಕೊಳ್ಳಲು ನಮ್ಮ ( ಮಡಿವಾಳ ) ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಆಹೋರಾತ್ರಿ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವವರೆಗೂ ಹೋರಾಟ ನಿಲ್ಲದು ಎಂದು ಸಮಾಜದ ಹಿರಿಯ ಮುಖಂಡ ಡಾ. ಚಂದ್ರಶೇಖರ್ ಮರಾಟದ್ ಹೇಳಿದರು .
ಅವರು ಪತ್ರಕರ್ತರೊಂದಿಗೆ ಮಾತನಾಡುತ್ತ ಕರ್ನಾಟಕ ರಾಜ್ಯದಲ್ಲಿ ನಮ್ಮ ಸಮಾಜಕ್ಕೆ ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಕೂಗು ಹಲವಾರು ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ನಮ್ಮಗೆ ಸಿಗಬೇಕಾದ ಸ್ಥಾನಮಾನವಾಗಲೀ ನಮ್ಮ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಇಲ್ಲಿಯವರೆಗೆ ಬಂದಿರುವ ಯಾವುದೇ ಸರ್ಕಾರಗಳು ಮಾಡಲೇ ಇಲ್ಲ. ನಮ್ಮ ಸಮಾಜಕ್ಕೆ ನಿಜವಾಗಿಯೂ ಸಿಗಬೇಕಾದ ಪರಿಶಿಷ್ಟ ಜಾತಿಯ ಹಕ್ಕಿನಿಂದ ನಾವು ಇಂದು ವಂಚಿತರಾಗಿದ್ದೇವೆ. ನಮಗೆ ನಿಜವಾಗಿಯೂ ಯಾವ ಹಕ್ಕು ಸಿಗಬೇಕು ಅದು ಸಿಗದೇ ಆ ಜಾಗದಲ್ಲಿ ಬಲಿಷ್ಟ ಜಾತಿಗಳು ಆಕ್ರಮಿಸಿಕೊಂಡು ನಮ್ಮ ಸಮಾಜ ಸಂಪೂರ್ಣವಾಗಿ ನಿರ್ಲಕ್ಷಿತವಾಗಿದೆ. ನಮ್ಮ ಸಮಾಜವು ಇತರೆ ಯಾವುದೇ ಸಮಾಜದವರು ಮಾಡದ ಮಲಿನ ಬಟ್ಟೆಗಳನ್ನು, ಮಲಮೂತ್ರಗಳನ್ನು ಮುಟ್ಟಿನಿಂದ ರಕ್ತಸ್ರಾವ ಮತ್ತು ಕೀವು ಮುಂತಾದ ಬಟ್ಟೆಯನ್ನು ಶುದ್ಧ ಮಾಡಲು ನಮ್ಮ ಜನಾಂಗವನ್ನು ಬಳಿಸಿಕೊಳ್ಳುತ್ತಾರೆ. ರೋಗಿಗಳ ಬಟ್ಟೆಗಳನ್ನು, ಮರಣವಾದ ಮನೆಗಳ ಬಟ್ಟೆಗಳ ಶುದ್ದಿ ಕಾರ್ಯಗಳಲ್ಲಿ ನಮ್ಮ ಜನಾಂಗ ತೊಡಗಿ ಕೊಂಡಿದ್ದರೂ ನಮ್ಮ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಮೀನಾಮೇಷ ಮಾಡುತ್ತಿರುವುದರ ಹಿಂದೆ ರಾಜಕೀಯ ಶಡ್ಯಂತ್ರ ಇದೆ .
ಈಗಾಗಲೇ ದೇಶದ 18 ರಾಜ್ಯಗಳಲ್ಲಿ 3 ಕೇಂದ್ರಾಡಳಿತ ಪ್ರದೇಶದಲ್ಲಿ ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದಿರುವುದು ಕಾಣುತ್ತದೆ. ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ನಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ನಮ್ಮ ರಾಜ್ಯದಲ್ಲಿ ನಮಗೆ ಯಾವುದೇ ರೀತಿಯ ಮಾನ್ಯತೆಯನ್ನು ನೀಡದಿರುವುದು ಶೋಚನೀಯ. 1921 ನೇ ಇಸವಿಯಲ್ಲೇ ಮೈಸೂರು ಮಹಾರಾಜರು ನಡೆಸಿದ ದುಂಡು ಮೇಜಿನ ಸಭೆಯಲ್ಲಿ ರಾಜ್ಯದ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಆದೇಶ ಮಾಡಿರುವುದು ನಮ್ಮ ಜನಾಂಗ ಎಷ್ಟರ ಮಟ್ಟಿಗೆ ಹಿಂದುಳಿದಿದೆ ಎಂಬುದನ್ನು ಗಮನಿಸಬೇಕಾಗಿದೆ.
ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘವು ಸರ್ಕಾರಕ್ಕೆ ಒತ್ತಡವನ್ನು ನೀಡಿದ್ದರಿಂದ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ರಾಜ್ಯದ ಮಡಿವಾಳ ಜನಾಂಗದವರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಮಡಿವಾಳ ಜನಾಂಗವನ್ನು ಪರಿಶಿಷ್ಟರ ಜಾತಿಗೆ ಸೇರಿಸಬೇಕೆ ಬೇಡವೇ ಎಂಬುದನ್ನು ಕುಲಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆಯನ್ನು ಮಾಡಿ ವರದಿಯನ್ನೀಡಲು ಮೈಸೂರು ವಿಶ್ವ ವಿದ್ಯಾಲಯದ ಪ್ರೊಫೆಸರ್ ಡಾ. ಅನ್ನಪೂರ್ಣ ನವರನ್ನು ನೇಮಿಸಲಾಯಿತು ಇದು 2009 ರಲ್ಲಿ ಎರಡು ವರ್ಷಗಳ ಕಾಲ ಅಧ್ಯಯನವನ್ನು ನಡೆಸಿ ರಾಜ್ಯದಲ್ಲಿ ಸುಮಾರು 28 ಜಿಲ್ಲೆಗಳಿಗೆ ಖುದ್ದು ಭೇಟಿಮಾಡಿ ಜನಾಂಗದ ಮುಖಂಡರು, ವೃತ್ತಿಯಲ್ಲಿ ತೊಡಗಿಸಿಕೊಂಡವರು, ಮಡಿಕಟ್ಟೆಗಳು, ಕುಲಕಸಬನ್ನು ಮಾಡುವವುವರು ಇತ್ಯಾದಿ ಅನೇಕರನ್ನು ಭೇಟಿಮಾಡಿ ಈ ಕುಲಶಾಸ್ತ್ರ ಅಧ್ಯಯನವನ್ನು ಮಾಡಿ ವರದಿಯನ್ನು ನೀಡಿದ್ದಾರೆ .
ವರದಿ ನೀಡಿದರು ಈ ವರೆಗೆ ಈ ಮಡಿವಾಳರನ್ನು ಏಕೆ ಪರಿಶಿಷ್ಟ ಜಾತಿಗೆ ಇಲ್ಲಿಯವರೆಗೆ ಸೇರಿಸಿಲ್ಲ..
? ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿವಾಗಿ ಹಾಗೂ ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಜಾತಿಗೆ ಮೊದಲ ಆದ್ಯತೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಿ ಎನ್ನುವ ಕುಲಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿಯನ್ನು ಸರ್ಕಾರಕ್ಕೆ 2011ರಲ್ಲಿ ಸಲ್ಲಿಸಲಾಗಿತ್ತು. ಆದರೆ ಈ ವರದಿಯನ್ನು ಇಲ್ಲಿಯವರೆಗೆ ಬಂದಿರುವ ಎಲ್ಲಾ ಸರ್ಕಾರಗಳು ಪರಿಗಣಿಸಲೇ ಇಲ್ಲ. 2022ರಲ್ಲಿ ಬಿ.ಜೆ.ಪಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜರಿಯವರು ಈ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಲು ಸೂಚಿಸಲಾಗಿತ್ತು. ವರದಿಯನ್ನು ವಿಧಾನ ಸಭೆಯಲ್ಲಿ ಮಂಡಿಸಬೇಕು ಎನ್ನುವಷ್ಟರಲ್ಲಿ ಚುನಾವಣೆ ಘೋಷಣೆಯಾಯಿತು. ಕುಲಶಾಸ್ತ್ರ ಅಧ್ಯಯನ ವರದಿ ಕಡತವು ಸಮಾಜ ಕಲ್ಯಾಣ ಇಲಾಖೆಯಲ್ಲಿಯೇ SWD 505 SLP22 ಇಂದಿಗೂ ಕೊಳೆಯುವಂತೆ ಮಾಡಿದೆ.
ಈ ವರದಿಯನ್ನು ಜಾರಿಗೆ ತರಲು ನಮ್ಮ ಸಮುದಾಯದ ಡಾ. ಶ್ರೀ ಶ್ರೀ ಬಸವ ಮಾಚೀದೇವ ಸ್ವಾಮೀಜಿ, ಶ್ರೀ ಮಾಚಿದೇವ ಮಹಾಸಂಸ್ಥಾನ ಮಠ, ಚಿತ್ರದುರ್ಗ ಮತ್ತು ಕರ್ನಾಟಕ ರಾಜ್ಯ ಮಡಿವಾಳದ ಕ್ಷೇಮಾಭಿವೃದ್ಧಿ ಸಂಘ ಹಾಗೂ ಉತ್ತರ ಕರ್ನಾಟಕ ಮಡಿವಾಳರ ಸಂಘಟನೆಗಳು ಒಟ್ಟುಗೂಡಿ ರಾಜ್ಯದ 224 ಶಾಸಕರನ್ನು ಖುದ್ದು ಭೇಟಿ ಮಾಡಿ ಮನವಿಯನ್ನು ಮಾಡಲಾಗಿದೆ. ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಉತ್ತರ ಕರ್ನಾಟಕ ಮಡಿವಾಳರ ಸಂಘಟನೆ ಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ 19 ಮಂತ್ರಿಗಳು ಹಾಗೂ ರಾಜ್ಯದ 137 ಶಾಸಕರುಗಳಿಂದ ತಿಫಾರಸ್ಸು ಪತ್ರಗಳನ್ನು ಪಡೆದಿದೆ. ಈವರೆಗೆ ಪ್ರೊಫೆಸರ್ ಡಾ. ಅನ್ಯಪೂರ್ಣ ವರದಿಯನ್ನು ಜಾರಿಗೊಳಿಸಲು ಒಟ್ಟು 156 ಶಿಫಾರಸ್ಸು ಪತ್ರಗಳನ್ನು ಪಡೆದುಕೊಂಡಿದ್ದೇವೆ. ಇದನ್ನು ಮುಖ್ಯ ಮಂತ್ರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯವರಿಗೆ ಸಲ್ಲಿಸಲಾಗಿದೆ. ಇಷ್ಟೆಲ್ಲಾ ಪ್ರಯತ್ನಗಳು ಮಾಡಿದ್ದರೂ ಸಹ ಸರ್ಕಾರ ನಮ್ಮ ಜನಾಂಗದ ಮನವಿಗಳನ್ನು ಸರಿಯಾಗಿ ಪರಿಗಣಿಸದೆ ನಮ್ಮ ಹಕ್ಕನ್ನು ಕಸಿದುಕೊಂಡಿದೆ. ನಮ್ಮ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ವರೆಗೂ ಆಹೋರಾತ್ರಿ ಪ್ರತಿಭಟನೆ ನಡೆಸಿ ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳಿದರು . ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ತಾಲೂಕ ಅಧ್ಯಕ್ಷ ಅಮರೇಶ್ ಬಾಲಾಜಿ , ಪ್ರಧಾನ ಕಾರ್ಯದರ್ಶಿ ಸುರೇಶ ಮಡಿವಾಳ , ಖಜಾಂಚಿ ಅಯ್ಯಪ್ಪ ಚಿಕ್ಕೇಸರೂರು , ಡಾ. ಅಮರೇಶ್ ಮಡಿವಾಳ, ಬಸವರಾಜ್ ಕಸಬಾ ಲಿಂಗಸಗೂರು , ಅಮರೇಶ್ ಮೂಕಲಾ ದಿನ್ನಿ , ವಿಜಯ್ ಮಕಾಪುರ್ , ಶಂಕ್ರಪ್ಪ ಮಡಿವಾಳ , ಶೇಖರ್ ಮಡಿವಾಳ , ತಿರುಪತಿ ಮಡಿವಾಳ ಸೇರಿದಂತೆ ಸಮಾಜದ ಮುಖಂಡರು ಇದ್ದರು .

