ತಾಳಿಕೋಟಿ: ಪವಿತ್ರ ರಮಜಾನ್ ಮಾಸದ ಪ್ರಯುಕ್ತ ಜಮಾತೆ ಇಸ್ಲಾಮಿ ಹಿಂದ್ ನಗರ ಶಾಖೆಯ ವತಿಯಿಂದ ಸರ್ವಧರ್ಮಿಯರಿಗಾಗಿ ಹಮ್ಮಿಕೊಂಡ ಸೌಹಾರ್ದ ಇಫ್ತಾರ ಕೂಟ ಕಾರ್ಯಕ್ರಮ ಇಂದು(ಮಾ.10) ನಡೆಯಲಿದೆ. ಪಟ್ಟಣದ ಕತ್ರಿ ಬಜಾರ್ ಹತ್ತಿರ ಇರುವ ಜಾಮಿಯಾ ಮಸೀದಿಯಲ್ಲಿ ಸಂಜೆ 5-15 ಘಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಪೂಜ್ಯ ಶ್ರೀ ಸಿದ್ದಲಿಂಗದೇವರು, ಕೊಡೆಕಲ್ ದುರುದುಂಡೇಶ್ವರ ವಿರಕ್ತ ಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ್ ಅಹ್ಮದ್ ಖಾಜಿ ವಹಿಸುವರು. ಖ್ಯಾತ ಪ್ರವಚನಕಾರರಾದ ಜನಾಬ ಲಾಲಹುಸೇನ ಕಂದಗಲ್ ವಿಶೇಷ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಅಸ್ಕಿ ಫೌಂಡೇಶನ್ ಕೊಣ್ಣೂರದ ಅಧ್ಯಕ್ಷ, ಸಮಾಜ ಸೇವಕರಾದ ಸಿ.ಬಿ.ಅಸ್ಕಿ, ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಯುದ್ದೀನ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ ಅವರು ಆಗಮಿಸಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ಪಟ್ಟಣದ ಸರ್ವಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಮಾತೆ ಇಸ್ಲಾಮೀ ಹಿಂದ್ ನಗರ ಶಾಖೆಯ ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

