ಬದಲಾಗುತ್ತಿರುವ ಸಮಾಜದ ಧೋರಣೆಗಳಿಗೆ ಅನುಗುಣವಾಗಿ ಶೈಕ್ಷಣಿಕ ವಲಯದಲ್ಲಿಯೂ ಆಗಬಹುದಾದ ಬದಲಾವಣೆಗೆ ತಕ್ಕಂತೆ ಗುಣಾತ್ಮಕ ಶಿಕ್ಷಣ ವ್ಯವಸ್ಥೆಯನ್ನು ಅನಾವರಣಗೊಳಿಸಲು ಪ್ರಶಿಕ್ಷಣಾರ್ಥಿಗಳು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ’ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿ ಎಸ್.ವಿ. ಡಾಣಿ ಹೇಳಿದರು.ಪಟ್ಟಣದ ಎಸ್.ಎ. ನಿಂಗೋಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಒಕ್ಕೂಟಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಅತ್ಯಂತ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸುವ ಪ್ರಶಿಕ್ಷಣಾರ್ಥಿಗಳ ಇತರೆ ವಿದ್ಯಾರ್ಥಿಗಳಂತೆ ಇರದೇ ಭಿನ್ನವಾಗಿಯೇ ಇರುವುದು, ಅಧ್ಯಯನ ಶೀಲರಾಗಿರುವುದು ಮುಖ್ಯ. ಸಮುದಾಯ ಸಂಘಟನೆಯ ಮಧ್ಯೆ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದರಿಂದ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳುವುದು ಅವಶ್ಯಕ’ ಎಂದರು.

ಮುನಿರಾಬಾದ್‌ ಡಯಟ್ ಉಪನ್ಯಾಸಕ ಮಲ್ಲಿಕಾರ್ಜುನ ಬೇಲೇರಿ ಮಾತನಾಡಿದರು. ‌ಉಪನ್ಯಾಸಕ ಎಂ.ಪ್ರಾಣೇಶ, ವಕೀಲ ಸಂಗಮೇಶ ಅಂಗಡಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಪ್ಪ ನಿಂಗೋಜಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *