ರಾಯಚೂರು : ಇಲ್ಲಿನ ನವೋದಯ ಮೆಡಿಕಲ್ ಕಾಲೇಜು ಎದುರು ಸಾವಿತ್ರಿಬಾಯಿ ಫುಲೆ ಪುತ್ಥಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ಪದಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕ ಸಿಬ್ಬಂದಿ ನಗರದ ನವೋದಯ ಮೆಡಿಕಲ್ ಕಾಲೇಜಿನ ಮುಂದೆ ಇರುವ ಸಾವಿತ್ರಿಬಾಯಿ ಫುಲೆ ನಾಮಫಲಕವನ್ನು ಕಿತ್ತು ಹಾಕಲು ಬಂದಿದ್ದರು.
ಕಳೆದ ಆರು ವರ್ಷಗಳ ಹಿಂದೆ ಮಾಜಿ ಸಂಸದ ಅಮರೇಶ್ವರ ನಾಯಕ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ, ಸಮಾಜದ ಮುಖಂಡರ ನೇತೃತ್ವದಲ್ಲಿ ಸಾವಿತ್ರಿಬಾಯಿ ಫುಲೆ ನಾಮಫಲಕ ಅನಾವರಣಗೊಳಿಸಲಾಗಿದೆ ಎಂದು ಹೇಳಿದರು.

ಇಂದಿಗೂ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವದ ದಿನ ಅದೇ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ನಾಮಫಲಕ ಮತ್ತು ಭಾವಚಿತ್ರ ಹೊಂದಿದ ಫಲಕ ಅಳವಡಿಸಲಾಗಿತ್ತು. ಪುತ್ಥಳಿ ಸ್ಥಾಪನೆಗೆ ಎನ್.ಎಸ್.ಬೋಸರಾಜು ಅವರು ₹5 ಲಕ್ಷ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ ₹5 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಜಾಗದ ಮಾಲೀಕರು ತಕರಾರು ಮಾಡಿದ್ದಾರೆ ಎಂದು ದೂರಿದರು.

ನಗರದ ಎಲ್ಲಾ ಸಮುದಾಯದ ಜನರು ಮತ್ತು ಸಾವಿತ್ರಿಬಾಯಿ ಫುಲೆ ಅಭಿಮಾನಿಗಳು ಪುತ್ಥಳಿ ಸ್ಥಾಪನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ರವಿಂದ್ರ ಜಲ್ದಾರ್, ಭೀಮಣ್ಣ ಮಂಚಾಲಿ, ರಾಘವೇಂದ್ರ ಬೋರಡ್ಡಿ, ಶಶಿರಾಜ, ಈರಣ್ಣ ಹೂಗಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *