ಹಾಲಾಪೂರ: ಸಮೀಪದ ತೋರಣದಿನ್ನಿ ಗ್ರಾಮ ಪಂಚಾಯಿತಿಗೆ ಗೂಗೇಬಾಳ ಗ್ರಾಮದ ಮಹಿಳೆಯರು ಉದ್ಯೋಗ ಖಾತ್ರಿ ಕೆಲಸಕ್ಕಾಗಿ ಪಂಚಾಯತಿಗೆ ಮುತ್ತಿಗೆ ಹಾಕಿ ಇಲ್ಲಿನ ಗ್ರಾಮ ಪಂಚಾಯತಿ ಪಿಡಿಒ ತಿಮ್ಮಪ್ಪ ಮತ್ತು ಆಡಳಿತ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೂಗೆಬಾಳ ಗ್ರಾಮದ ಗೌರಮ್ಮ ಗಂಡ ಹನುಮಂತ ಎನ್ನುವವರು ನಾವು ಕಳೆದ ನಾಲ್ಕು ತಿಂಗಳಗಳಿಂದ ಕೆಲಸವಿಲ್ಲದೆ, ಖಾಲಿ ಕುಳಿತಿದ್ದು ಅದಕ್ಕಾಗಿ ತೋರಣದಿನ್ನಿ ಗ್ರಾಮ ಪಂಚಾಯತಿ ಪಿಡಿಒ ತಿಮ್ಮಪ್ಪ ಮತ್ತು ಅನೇಕರಿಗೆ ಹಲವು ಸಲ ಉದ್ಯೋಗ ಖಾತ್ರಿ ಕೆಲಸ ಕೊಡಲು ಮನವಿ ಮಾಡಿದರು ಕಿಂಚಿತ್ತೂ ಮನ್ನಣೆ ನೀಡದೆ ಇಲ್ಲದ ನೆಪ ಹೇಳುತ್ತಾ ಸಮಯ ಕಳೆದಿದ್ದು ಕೆಲಸ ಕೊಡದೆ ನಿರ್ಲಕ್ಷ್ಯ ಕಾಣುತ್ತಿದ್ದಾರೆ, ಇಲ್ಲಿಯ ಆಡಳಿತ ಅಧಿಕಾರಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ತೋರಣದಿನ್ನಿ ಗ್ರಾಮ ಪಂಚಾಯಿತಿ ಕಥೆಯಾಗಿದೆ ಎಂದು ಗೌರಮ್ಮ ಗಂಡ ಹನುಮಂತ ಎನ್ನುವರು ಹೇಳಿದರು, ಈಗಲಾದರೂ ತಾಲೂಕು ಪಂಚಾಯತಿ ಇಒ ರವರು ತಕ್ಷಣ ಪಿಡಿಓ ರವರಿಗೆ ಕೆಲಸ ಕೊಡಲು ಸೂಚಿಸಬೇಕು ಇಲ್ಲವಾದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅನೇಕರು ಹೇಳಿದರು, ಈ ವೇಳೆಯಲ್ಲಿ ಎಲ್ಲಮ್ಮ ಗಂಡ ಸಿದ್ದಪ್ಪ, ಅಂಬಮ್ಮ ಗಂಡ ಶಿವಪ್ಪ, ಹನುಮಂತಿ ಗಂಡ ಕರಿಯಪ್ಪ, ಮಹಾಂತೇಶ ಹಿರೇಮಠ, ಮೌನೇಶ ತೋರಣದಿನ್ನಿ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *