ತಾಳಿಕೋಟಿ: ವಿದ್ಯಾರ್ಥಿಗಳು ಜೀವನದಲ್ಲಿ ಕಠಿಣ ಪರಿಶ್ರಮ ನಿರಂತರ ಅಧ್ಯಯನದ ಮೂಲಕ ಒಳ್ಳೆಯ ಭವಿಷ್ಯವನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ರಾಮನಗೌಡ ಎಚ್.ಬಾಗೇವಾಡಿ ಹೇಳಿದರು. ಪಟ್ಟಣದ ವಿಕಾಸ್ ಪಬ್ಲಿಕ್ ಸ್ಕೂಲ್ ತಾಳಿಕೋಟಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ “ಬೀಳ್ಕೊಡುಗೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಶನಿವಾರ ಮಾತನಾಡಿದರು. ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದದ್ದು ಅದನ್ನು ಯಾವ ಕಾರಣಕ್ಕೂ ಕೆಡದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. 9 ನೇ ತರಗತಿಯ ವಿದ್ಯಾರ್ಥಿಗಳು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಾರ್ದಿಕ ಸ್ವಾಗತ ಕೋರಿದರು. ಕಾರ್ಯಕ್ರಮದ ನಿಮಿತ್ಯ ಶಾಲೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ಭಾಷಣಗಳು ಮತ್ತು ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳು ಶಾಲೆಯಲ್ಲಿ ಕಳೆದ ತಮ್ಮ ಮಧುರ ನೆನಪುಗಳನ್ನು ಹಂಚಿಕೊಂಡು ಶಿಕ್ಷಕರು ನಮಗೆ ಮಾರ್ಗದರ್ಶನ ನೀಡಿದವರು ಮಾತ್ರವಲ್ಲ, ನಮ್ಮ ಜೀವನವನ್ನು ರೂಪಿಸಿದವರು ಕೂಡ. ಅವರು ನಮಗೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರಣೆ ನೀಡಿದರು. ಅವರ ಆಶೀರ್ವಾದಗಳು ನಮಗೆ ಸದಾ ಮಾರ್ಗದರ್ಶಕವಾಗಿವೆ.
ಶಾಲೆಯಲ್ಲಿ ಕಳೆದ ಸ್ನೇಹದ ಕ್ಷಣಗಳು, ಆಟಗಳು, ಪಾಠಗಳು ಮತ್ತು ಶಿಕ್ಷಕರ ಪ್ರೀತಿ ಎಂದಿಗೂ ಮರೆಯಲಾಗದು ಎಂದು ತಿಳಿಸಿದರು. “ಬೀಳ್ಕೊಡುಗೆ” ದಿನದಲ್ಲಿ ಸ್ನೇಹಿತರನ್ನು ಮತ್ತು ಶಿಕ್ಷಕರನ್ನು ಬಿಡುವಾಗ ಎಲ್ಲರ ಕಣ್ಣುಗಳಲ್ಲಿ ಸಂತೋಷದ ಜೊತೆ ಸ್ವಲ್ಪ ಕಣ್ಣೀರು ಕೂಡ ಕಾಣಿಸಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಶ್ರದ್ದಾನಂದ, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿ ಇದ್ದರು.

Leave a Reply

Your email address will not be published. Required fields are marked *