ಲಿಂಗಸಗೂರು : ಮಾ 8 ಲಿಂಗಸಗೂರು ಪೋಲಿಸ್ ಠಾಣಾ ವ್ಯಾಪ್ತಿಯ ಯರಡೋಣ ನಿವಾಸಿ ವಿಜಯಲಕ್ಷ್ಮೀ @ ಗಿರಿಜಮ್ಮ ಗಂಡ ಸೋಮಪ್ಪ ಬಿಂಗಿ ಈಕೆಯು ತನ್ನ ಗಂಡ ಮೃತಪಟ್ಟ ನಂತರ ತನ್ನ ತಾಯಿಯ ತವರು ಮನೆಯಾದ ಯರಡೋಣ ಗ್ರಾಮದಲ್ಲಿ ವಾಸವಾಗಿದ್ದು , ಆರೋಪಿ ದೇವರಾಜ @ ದೇವಣ್ಣ ತಂದೆ ಯಲ್ಲಪ್ಪ ಅನ್ವರಿ ಸಾಕೀನ ಯರಡೋಣ ಈತನು ಆಕೆಯೊಂದಿಗೆ ಸಲುಗೆ ಬೆಳೆಸಿ ಅಕ್ರಮ ಸಂಬಂಧ ಹೊಂದಿದ್ದು ದಿನಾಂಕ:10-03-2024 ರಂದು ಅಮವಾಸ್ಯೆ ಇದ್ದ ಪ್ರಯುಕ್ತ ಆರೋಪಿಯು ಆಕೆಯೊಂದಿಗೆ ಛತ್ತರದ ಹನಮಪ್ಪ ದೇವರಿಗೆ ಹೋಗಿ ಮರಳಿ ಲಿಂಗಸಗೂರಿಗೆ ಬಂದು ಲಿಂಗಸಗೂರು ಬಸ್ ನಿಲ್ದಾಣದ ಹಿಂದೆ ಇರುವ ಹಳ್ಳದ ದಂಡೆಯ ಮೇಲೆ ಬೆಳೆದಿರುವ ಜಾಲಿಗಿಡಗಳ ಪೊದೆಯಲ್ಲಿ ಕರೆದು ಕೊಂಡು ಹೋಗಿ ವಿಜಯಲಕ್ಷ್ಮಿಗೆ ತನ್ನೊಂದಿಗೆ ಮಲಗುವಂತೆ ಒತ್ತಾಯಿಸಿದಾಗ ಆಕೆಯು ಈ ದಿನ ಅಮವಾಸ್ಯೆ ಇದೆ ಬೇಡ ಅಂತಾ ಹೇಳಿ ನಿರಾಕರಿಸಿದ್ದಕ್ಕೆ ಆರೋಪಿಯು ಕೊಲೆ ಮಾಡುವ ಉದ್ದೇಶದಿಂದ ಆಕೆಯ ಕಪಾಳಕ್ಕೆ ಹೊಡೆದು, ನೆಲಕ್ಕೆ ಕೆಡವಿ ಕಲ್ಲಿನಿಂದ ಬಲ ಮಲಕಿಗೆ ಹೊಡೆದು ರಕ್ತ ಗಾಯಗೊಳಿಸಿ ಆಕೆಯು ಹುಟ್ಟುಕೊಂಡ ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುತ್ತಾನೆಂದು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿಗಳಾದ ಪುಂಡಲಿಕ ಪಟತ್ತಾರ ಸಿಪಿಐ ಇವರು ಪ್ರಕರಣದ ತನಿಖೆ ಕೈಗೊಂಡು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ವಾದ ವಿವಾದಗಳನ್ನು ಆಲಿಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಲಯ ರಾಯಚೂರು, ಪೀಠಾಸಿನ ಲಿಂಗಸಗೂರು ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ ಜಕಾತಿ ರವರು ದಿನಾಂಕ:07-03-2026 ರಂದು ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ರೂ.50,000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ . ಸರ್ಕಾರದ ಪರವಾಗಿ ಮಂಜುನಾಥ ಬೇರ್ಗಿ (ಹುಳ್ಳಿಹಾಳ್) ಸರ್ಕಾರಿ ಅಭಿಯೋಜಕರು, ಲಿಂಗಸಗೂರು ರವರು ವಾದ ಮಂಡಿಸಿದ್ದು ಹಾಗೂ ನಿಂಗಯ್ಯ ಪಿ ಸಿ ರವರು ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ನ್ಯಾಯಾಲಯದಲ್ಲಿ ಹಾಜರುಪಡಿಸಿರುತ್ತಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Leave a Reply

Your email address will not be published. Required fields are marked *