ಲಿಂಗಸಗೂರು : ಮಾ 8 ಇತ್ತಿಚೆಗೆ ಮಕ್ಕಳಿಗೆ ವಿಧ್ಯಾಭ್ಯಾಸದ ಜೊತೆ ಸಂಸ್ಕಾರ ಮುಖ್ಯ ವಾಗಿದೆ ಪಾಲಕರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಮನೆಯಲ್ಲಿ ಸಂಸ್ಕಾರ ಕಲಿಸಬೇಕಾಗಿದೆ ಎಂದು ಜಿಲ್ಲಾ ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತಕರಾದ ಬಸವರಾಜ ನಾಯಕ ಅಭಿಪ್ರಾಯ ಪಟ್ಟರು.

ಅವರಿಂದು ಪಟ್ಟಣ ನರಕಲದಿನ್ನಿ ಗ್ರಾಮದಲ್ಲಿ ವಿದ್ಯಾ ಭಾರತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ . ಸಂಸ್ಥೆ ಬೆಳೆಯಬೇಕಾದರೆ ಕೇವಲ ಸಂಸ್ಥೆಯ ಸಿಬ್ಬಂದಿಗಳು ಮುಖ್ಯವಾಗುವುದಿಲ್ಲ ಅದಕ್ಕೆ ಪಾಲಕರು ಊರಿನ ಗಣ್ಯರ ಶ್ರಮ ಪಾತ್ರ ಬಾಹಳಷ್ಟು ಮುಖ್ಯವಾಗಿರುತ್ತದೆ. ನಾನು 1986 ರಲ್ಲಿ ನಾಗರಹಾಳ ಗ್ರಾಮದಲ್ಲಿ ಓದಿದ್ದೇನೆ ಏಳನೇ ತರಗತಿ ಇತ್ತಿಚೆಗೆ 11 ದೇಶಗಳನ್ನು ಸುತ್ತಾಡಿದ್ದೇನೆ. 26 ರಾಜ್ಯ ತಿರುಗಾಡಿದ್ದೇನೆ ಅದಕ್ಕೆ ಕಾರಣ ವಿದ್ಯಾಕಿಂತ ಸಂಸ್ಕಾರ ಕಾರಣ. ಇದರಲ್ಲಿ ಮಾರ್ಕ್ಸ್ ಮುಖ್ಯವಾಗುವುದಿಲ್ಲ ಸಂಸ್ಕಾರ ಮುಖ್ಯ ಅದೇ ನನಗೆ ಅರ್ಥ ವಾಗಿದ್ದು. ಅದಕ್ಕೆ ಇಂದಿನ ಮಕ್ಕಳಲ್ಲಿ ಸಂಸ್ಕಾರಕ್ಕೆ ಒತ್ತು ನೀಡಬೇಕು.
1ರಿಂದ 5ನೇ ತರಗತಿಗಳ ವರಿಗೆ ಬೋಧನೆ ಕಠಿಣ, ಕಾರಣ ಈ ಹಂತ ಮಕ್ಕಳ ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಸ್ಥಾನಪಲ್ಲಟದ ಹಂತವಾ ಗಿದೆ. ಅವರ ಕೌಶಲ್ಯಕ್ಕೆ ತಕ್ಕಂತೆ ಶಿಕ್ಷಣ ನೀಡಬೇಕು. ಸ್ವಾಭಾವಿಕವಾದ ಬೆಳವಣಿ ಗೆಯಲ್ಲಿ ಗುಣಮಟ್ಟ ಕಾಣಬಹುದು ಎಂದರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯವಾಗಿದೆ. ಸಕಾಲದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಭುಸ್ವಾಮಿ ಶ್ರೀಗಳು, ಗಿರಿಯಪ್ಪ, ರೇಷ್ಮೆ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಕುಮಾರ್ ದೇವದುರ್ಗ, ಹನುಮೇಶ, ದೀಕ್ಷಾ, ಬಸಮ್ಮ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *