ಮಾನ್ವಿ: ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಪದವಿ ಮಹಾವಿದ್ಯಾಲಯದ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ 4 ನೇ ದಿನದ ಕಾರ್ಯಕ್ರಮದಲ್ಲಿ ಚಂದ್ರಮತಿ ಅಲ್ದಾಳ ಕನ್ನಡ ಉಪನ್ಯಾಸಕರು ವಿಶೇಷ ಉಪನ್ಯಾಸ ನೀಡಿ ಶಿಕ್ಷಣದಿಂದ ಮಹಿಳಾ ಸಬಲೀಕರಣ ಕುರಿತು ಮಾತನಾಡಿ ಇಂದಿನ ವ್ಯವಸ್ಥೆಯಲ್ಲಿ ಪುರುಷ ಪ್ರಧಾನ ರಾಷ್ಟ್ರ ಎಂದು ಹೇಳುತ್ತಿದ್ದಾರೆ ಅದು ತಪ್ಪು ಇದು ಮಹಿಳಾ ಪ್ರಧಾನ ರಾಷ್ಟ್ರವಾಗಿದೆ. ಹೇಗೆಂದರೆ ಪ್ರತಿಯೊಂದು ಮಹಿಳೆಯರು ಪಂಚಾಯತ ಮಟ್ಟದಿಂದ ಅಧಿಕಾರಿಯಾಗಿ ಪೈಲೆಟ್ ವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸಪಲತೆಯನ್ನು ಹೊಂದಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಬೇಕು. ಮಹಿಳೆಯರಿಗೆ ತವರು ಮನೆ ಸಂಸ್ಕಾರವಿರಬೇಕು ಮತ್ತು ಗಂಡನ ಮನೆ ಸಹಕಾರವಿರಬೇಕು ಎಂದುಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶರಣಬಸವ ಕರಡಿಗುಡ್ಡ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಇಂದಿನ ಯುಗದಲ್ಲಿ ತಂತ್ರಜ್ಞಾನದ ಮಹತ್ವ ತುಂಬಾ ಪ್ರಯೋಜನವಾಗಿದೆ ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು .ಈ ಕಾರ್ಯಕ್ರಮದಲ್ಲಿ
ಕಾಲೇಜಿನ ಪ್ರಾಚಾರ್ಯರಾದ ಶಂಕ್ರಪ್ಪ ಅಂಗಡಿ ಮಾತನಾಡಿದರು.ಊರಿನ ಮುಖಂಡರಾದ ರಾಘವೇಂದ್ರ ನಾಯಕ ಪ್ರಾದ್ಯಪಕರು, ಪ್ರಾಣೇಶ ಗೌಡ ಜಿ. ಊರುಕುಂದ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ,ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಆಂಜನೇಯ ನಸಲಾಪುರ.ಚಂದ್ರಶೇಖರ ಎಚ್ ಸಹಾಯಕ ಪ್ರಾಧ್ಯಪಕರು. ಡಾ. ಹುಲಿಯಪ್ಪ ದುಮತಿ ಸಹಾಯಕ ಪ್ರಾಧ್ಯಪಕರು ಕಾಲೇಜಿನ ಉಪನ್ಯಾಸಕರಾದ ಅಂಬಣ್ಣ ನಾಯಕ, ಶೈಲಜಾ , ರೇಣುಕಾ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಮತ್ತು ಶಿಬಿರಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದ್ದರು. ಏನ್.ಎಸ್.ಎಸ್ ಗೀತೆಯನ್ನು ಹುಲಿಗೆಮ್ಮ ಸಂಗಡಿಗರು ಹಾಡಿದರು. ಸುಧಾ ನಿರೂಪಿಸಿದರು, ಶಿವಬಸಮ್ಮ ಸ್ವಾಗತಿಸಿದರು, ಯಲ್ಲಮ್ಮ ವಂದಿಸಿದರು

