ತಾಳಿಕೋಟೆ: ತಾಲ್ಲೂಕಿನ ಬಿಳೇಭಾವಿ ಗ್ರಾಮದಲ್ಲಿ ಕಣ್ವಮಠದ 2 ನೇ ಹಾಗೂ 4 ನೇ ಯತಿಗಳಾದ ಅಕ್ಷೋಭ್ಯತೀರ್ಥರು ಹಾಗೂ ವಿದ್ಯಾನಿಧಿತೀರ್ಥರ ವೃಂದಾವನಗಳಿದ್ದು ಮಾಧವತೀರ್ಥ ಮೂಲ ಮಹಾಸಂಸ್ಥಾನಮ್ ಶ್ರೀಮತ್ ಕಣ್ವಮಠ (ವೀರಘಟ್ಟ) ಮಹಾಸಂಸ್ಥಾನ ಹುಣಸಿಹೊಳೆ ಇವರ ಪರಂಪರೆಯಲ್ಲಿ 4ನೇ ಪೀರಸ್ಥರಾದ ವಿದ್ಯಾನಿಧಿ ತೀರ್ಥರ 162 ನೇ ಆರಾಧನಾ ಮಹೋತ್ಸವವು ಇದೇ ಮಾ.8ರಿಂದ 10ರವರೆಗೆ ಜರುಗಲಿದೆ.
ಹುಣಕಿಹೊಳೆಯ ಕಣ್ವಮಠದ ಪೀಠಾಧಿಕಾರಿಗಳಾದ ವಿದ್ಯಾ ಕಣ್ವವಿರಾಜ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯ ವಹಿಸುವರು.
ಮಾ.8 ಭಾನುವಾರ ಪೂರ್ವಾರಾಧನೆ, ಮಾ.9 ಸೋಮವಾರ ಮಧ್ಯಾರಾಧನೆ ಹಾಗೂ ಮಾ.10 ಮಂಗಳವಾರ ಉತ್ತರಾಧನೆ ಜರುಗುವುದು. ಪ್ರತಿದಿನ ಬೆಳಿಗ್ಗೆ : 5-00 ಘಂಟೆಗೆ ಸುಪ್ರಭಾತ, ಧರ್ಮ ಧ್ವಜಾರೋಹಣ, ವೇದಘೋಷ, ಯತಿಗಳ ವೃಂದಾವನಗಳಿಗೆ ಅಭಿಷೇಕ, ಲಕ್ಷ ಮಷ್ಪಾರ್ಚನೆ.
ರಾಮ ರಾಜ್ಯ ಕಲಾ ಮೇಳದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ,
ಚಂದ್ರಲಾಂಬಾ ಮತ್ತು ಪರ್ಣಿಕಾ ಭಜನಾ ಮಂಡಳಿ ವಿಜಯಪುರ. ಮಹಾಲಕ್ಷ್ಮೀ ಭಜನಾ ಮಂಡಳಿ ತಾಳಿಕೋಟೆ, ಗಾಯತ್ರಿ ಭಜನಾ ಮಂಡಳಿ ತಾಳಿಕೋಟೆ ಇದರಿಂದ ನಾಮ ಸಂಕೀರ್ತನೆ.
ಕಣ್ಣಮಠದ ಪೀಠಾಧಿಪತಿ ವಿದ್ಯಾ ಕಣ್ಣ ವಿರಾಜತೀರ್ಥರಿಂದ ಸಂಸ್ಥಾನಪೂಜೆ. ಶ್ರೀಗಳಿಂದ ಅನುಗ್ರಹ ಸಂದೇಶ, ಮಹಾಮಂಗಳಾರತಿ ತೀರ್ಥ ಪ್ರಸಾದ. ನಡೆಯುವುದು.
ಎಂದು ಅಕ್ಷೋಭ್ಯ ತೀರ್ಥರು ಹಾಗೂ ವಿದ್ಯಾನಿಧಿ ತೀರ್ಥರ ಸೇವಾ ಸಮಿತಿ,ಬಿಳೇಭಾವಿ-ನಾಗೂರ ಸಮಸ್ತ ಭಕ್ತ ವೃಂದ ತಿಳಿಸಿದೆ.
