ತಾಳಿಕೋಟಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದ 2026-27 ನೇ ಸಾಲಿನ ಬಜೆಟ್ ಸಾಲದ ಹೊರೆ ಹೊತ್ತ ಶೂನ್ಯ ಸಾಧನೆಯ ಬಜೆಟ್ ಆಗಿದೆ ಎಂದು ಬಿಜೆಪಿ ಯುವ ಮುಖಂಡ ಮಾನಸಿಂಗ್ ಕೊಕಟನೂರ ಟೀಕಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆಯನ್ನು ಎದುರಿಸುತ್ತಿರುವ ಈ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಸಾಲದ ಹೊರೆಯನ್ನು ಹೊತ್ತಿದೆ. ಬಜೆಟ್ ಕೇವಲ ಭರವಸೆಗಳಿಗೆ ಮಾತ್ರ ಸೀಮಿತವಾಗಿದ್ದು ಅನುಷ್ಠಾನಕ್ಕೆ ಬರುವುದು ಕಷ್ಟ ಸಾಧ್ಯ. ವಿಜಯಪುರ ಜಿಲ್ಲೆ ಹಾಗೂ ಅದರಲ್ಲೂ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಹೇಳಿಕೊಳ್ಳುವಂತಹ ಯಾವ ಯೋಜನೆಗಳು ಘೋಷಣೆಯಾಗಿಲ್ಲ ಒಟ್ಟಾರೆ ಇದೊಂದು ನಿರುತ್ಸಾಹದ ಬಜೆಟ್ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *