ಹಾಲಾಪೂರ: ಗ್ರಾಮದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಪೂಜೆ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭ ನಡೆಯಿತು. ಉದ್ಘಾಟನೆಯನ್ನು ಮಂಜುನಾಥ ಮುಖ್ಯ ಗುರುಗಳು ಹಾಗೂ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಇವರು ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಶಿಸ್ತು, ಗುರುಹಿರಿಯರಿಗೆ ಗೌರವ ಕೊಡುವುದರ ಮೂಲಕ ಸಮಾಜದಲ್ಲಿ ಆದರ್ಶ ಪ್ರಾಯರಾಗಿ ಬದುಕಬೇಕು ಹಾಗೆ ನೈತಿಕ ತತ್ವ, ಮೌಲ್ಯ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಉನ್ನತ ಹುದ್ದೆ ಹೊಂದಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಹನುಮಂತರಾಯ ದೇಸಾಯಿ, ಅರವಿಂದ ಪಾಟೀಲ್, ಶಿವಶಂಕರಗೌಡರು ಹಾಗೂ ಶಾಲೆಯ ಶಿಕ್ಷಕಿರಾದ ದ್ಯಾವಮ್ಮ, ಸುಜಾತಾ ನಾಗಲಿಕರ, ನೇತ್ರಾವತಿ, ಬಸ್ಸಮ್ಮ, ಹನುಮಂತಮ್ಮ, ಮಂಜುಳಾ ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

