ಮಾನ್ವಿ: ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಪದವಿ ಮಹಾವಿದ್ಯಾಲಯದ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ 3 ನೇ ದಿನದ ಕಾರ್ಯಕ್ರಮದಲ್ಲಿ ವೀರಭದ್ರಯ್ಯ ಹಿರೇಮಠ ಪ್ರಾಚಾರ್ಯರು ವಿಶೇಷ ಉಪನ್ಯಾಸ ನೀಡಿ ಗ್ರಾಮ ಸ್ವಚ್ಛತೆಯಲ್ಲಿ ಯುವಕರ ಪಾತ್ರದ ಕುರಿತು ಮಾತನಾಡಿ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸಿಕೊಳ್ಳಬೇಕಾದರೆ ಪರಿಸರದ ಸ್ವಚ್ಛತೆ, ಆರೋಗ್ಯದ ಜಾಗೃತಿ ಹಾಗೂ ಮಾನಸಿಕ ಸ್ವಚ್ಛತೆಯ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವುದರಿಂದಿಗೆ ಸಂಸ್ಕೃತಿ ಹಾಗೂ ಸಂಸ್ಕಾರದ ಗ್ರಾಮೀಣ ಭಾಗದ ಮೂಲ ನೆಲೆ ಅದನ್ನು ಕಾಪಾಡಿ ಕೊಳ್ಳುವುದರ ಜೊತೆಗೆ ಗ್ರಾಮದಲ್ಲಿ ಕಸ ವಿಲೇವಾರಿ ಮಾಡುವಾಗ ಒಣ ಕಸ ಮತ್ತು ಹಸಿ ಕಸ ಹೇಗೆ ವಿಂಗಡಿಸಬೇಕು ಎಂದು ಗ್ರಾಮೀಣ ಜನರಿಗೆ ಶಿಬಿರಾರ್ಥಿಗಳು ಜಾಗೃತಿಯನ್ನು ಮೂಡಿಸಬೇಕೆಂದು ತಿಳಿಸಿದರು.ಸಂಸ್ಕಾರ ಮತ್ತು ಸಂಸ್ಕೃತಿಯು ಯಾರಲ್ಲಿ ಇರುತ್ತೆ ಅವರು ಉತ್ತಮವಾದ ಬದಕನ್ನು ಕಟ್ಟಿಕೊಳ್ಳುತ್ತಾರೆ ಎಂದು ಹೇಳಿದರು.
ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಾರಾಯಣ ಮುಖ್ಯ ಗುರುಗಳು ಮಾತನಾಡಿ ರಾಷ್ಟೀಯ ಸೇವಾ ಯೋಜನೆ ಮಾಡುವ ಉದ್ದೇಶವೇನೆಂದರೆ ಸ್ವಯಂ ಪ್ರೇರಿತರಾಗಿ ಕೆಲಸವನ್ನು ಮಾಡಬೇಕು, ರಾಷ್ಟ್ರ ಪ್ರೇಮ ಹಾಗೂ ದೇಶಭಿಮಾನವನ್ನು ಪ್ರತಿಯೊಬ್ಬರಲ್ಲಿ ಮೂಡಿಸಿಕೊಳ್ಳಬೇಕೆಂದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ. ಹುಲಿಯಪ್ಪ ದುಮತಿ ಮಾತನಾಡಿ ಮನುಷ್ಯನ ಮನುಸ್ಸು ಸ್ವಚ್ಛವಾಗಿದ್ದರೆ ದೇಶ ಸ್ವಚ್ಛತೆಯಿಂದ ಇರುತ್ತದೆ.ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯ ಬಗ್ಗೆ ಯುವಕರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ
ಕಾಲೇಜಿನ ಪ್ರಾಚಾರ್ಯರಾದ ಶಂಕ್ರಪ್ಪ ಅಂಗಡಿ,
ರಾಘವೇಂದ್ರ ನಾಯಕ ಪ್ರಾಧ್ಯಾಪಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಕಾಲೇಜಿನ ಉಪನ್ಯಾಸಕರಾದ ಅಂಬಣ್ಣ ನಾಯಕ,ಆಫ್ರಿನ್ ಬೇಗಂ , ಶೈಲಜಾ ,ಶರಣಬಸವ ಕರಡಿಗುಡ್ಡ, ಉಪನ್ಯಾಸಕರಾದ ದೇವೇಂದ್ರಪ್ಪ ಕರಡಿಗುಡ್ಡ ಊರಿನ ಮುಖಂಡರಾದ ನರಸಿಂಹ ನಾಯಕ, ಎಂ ವೆಂಕಟೇಶ ನಾಯಕ , ಆರ್ ಹುಸೇನಪ್ಪ ನಾಯಕ ಭಾಗಯ್ಯ ನಾಯಕ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಮತ್ತು ಶಿಬಿರಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದ್ದರು.ಅನಿತಾ ನಿರೂಪಿಸಿದರು, ಪವಿತ್ರಾ ಸ್ವಾಗತಿಸಿದರು, ಸಣ್ಣ ಚನ್ನಬಸ್ಸಮ್ಮ ವಂದಿಸಿದರು.

Leave a Reply

Your email address will not be published. Required fields are marked *