ಮಸ್ಕಿ: ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆದು ಅಕ್ರಮ ಮಾರಾಟ ಮಾಡುವರರು ವಿರುದ್ಧ ಅಬಕಾರಿ ಕಾಯ್ದೆ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಮಹಿಳೆಯರು ತಹಸೀಲ್ ಕಛೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ಮಹಿಳೆಯರು ಕೆಲಕಾಲ ಪ್ರತಿಭಟಸಿ ಅಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಂತೋಷ ಹಿರೇದಿನ್ನಿ ಮಾತನಾಡಿ, ತಾಲೂಕಿನ ಹೂವಿನಭಾವಿ ಗ್ರಾಮದಲ್ಲಿ ಸರಕಾರಿ ಶಾಲೆಯ ಹತ್ತಿರದಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿರುವದರಿಂದ ಮದ್ಯವ್ಯಸನಿಗಳು ಮದ್ಯದ ಪಾಕೇಟ್ ಮತ್ತು ಬಾಟಲಿಗಳನ್ನು ಶಾಲಾ ಆವರಣದಲ್ಲಿ ಬಿಸಾಡುತ್ತಿರುವದರಿಂದ ಶಾಲಾ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ತಾಲೂಕಿನ ಬಹುತೇಕ ಗ್ರಾಮೀಣ ಭಾಗದ ಹೋಟೆಲ್, ಟೀ ಅಂಗಡಿ, ಕಿಆರಣಿ ಅಂಗಡಿಗಳಲ್ಲಿ ಅಕ್ರಮವಾಗಿ ಹಗಲು-ರಾತ್ರಿ ಎಗ್ಗಿಲ್ಲದೇ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು, ವಿದ್ಯಾರ್ಥಿಗಳು ದುಶ್ಚÀಟಕ್ಕೆ ಬಿದ್ದು, ಸಂಸಾರ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಶೆಯಲ್ಲಿ ಸುಖಾಸುಮ್ಮನೆ ಗ್ರಾಮದಲ್ಲಿ ಜಗಳವಾಗಿ ವೈಶ್ಯಮ ಉಂಟಾಗಿ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ರೈತ ಸಂಘಟನೆವಟಿಯಿಂದ ತಹಸೀಲ್ ಕಾರ್ಯಾಲಯದ ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾರುತಿ ಜಿನ್ನಾಪೂರ, ಮಲ್ಲಪ್ಪ, ಗುಂಡಪ್ಪ, ವೆಂಕಟೇಶ ಚಿಲ್ಕರಾಗಿ, ಆದಪ್ಪ ತಳವಾರ, ಶ್ರೀನಿವಾಸ, ಬಾಲಸ್ವಾಮಿ, ಮಾಳಪ್ಪ, ಸಿದ್ದಪ್ಪ, ದುರುಗಪ್ಪ, ಬುಳ್ಳಪ್ಪ, ನಿಂಗಪ್ಪ, ಸಿದ್ದಮ್ಮ, ಗಂಗಮ್ಮ, ಬಸಮ್ಮ, ರೇಣುಕಾ ಸೇರಿದಂತೆ ಇನ್ನಿತರೆ ಮಹಿಳೆಯರಿದ್ದರು.

Leave a Reply

Your email address will not be published. Required fields are marked *