ತಾಳಿಕೋಟಿ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಇದರ ಆಡಳಿತ ಮಂಡಳಿಗೆ ನೂತನವಾಗಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಡಿವಾಳಪ್ಪ (ಮಡುಸೌಕಾರ) ಬಿರಾದಾರ ಇವರನ್ನು ಮಿಣಜಗಿ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಮಡುಸೌಕಾರ ಬಿರಾದಾರ ಅವರು ಇವತ್ತು ಸಂಘದ ಆಡಳಿತ ಮಂಡಳಿ ಸದಸ್ಯರ ಜೊತೆಗೆ ತಾವೆಲ್ಲರೂ ಸಹಕರಿಸಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದೀರಿ ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿರುವೆ. ನನ್ನ ಈ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು. ಈ ಸಮಯದಲ್ಲಿ ಗಣ್ಯರಾದ ಗುರಪ್ಪಗೌಡ ಪಾಟೀಲ, ಶ್ರೀಶೈಲ್ ವಜ್ಜಲ,ಜಿ.ಬಿ.ಪಾಟೀಲ, ಗೊಟಖಂಡಕಿ ಎಸ್‌ಡಿಎಂಸಿ ಅಧ್ಯಕ್ಷ ಬಸನಗೌಡ ಬಿರಾದಾರ, ಮಹಾಂತೇಶ ಬಿರಾದಾರ, ಶರಣಗೌಡ ಬಿರಾದಾರ, ಗಿರೀಶ ತಳವಾರ ಹಾಗೂ ಬಸನಗೌಡ ಬಿರಾದಾರ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *