ಲಿಂಗಸುಗೂರು : ದಿನಾಂಕ : 28/02/2026 ರಂದು ನೂರು ದಿನ ಹೇಡಿಯಾಗಿ ಬದುಕುವುಕ್ಕಿಂತ ಮೂರು ದಿನ ಹುಲಿಯಾಗಿ ಬದುಕುಬೇಕು ಎನ್ನುವ ಶೇರ್ ಎ ಮೈಸೂರು ಹಜರತ್ ಟಿಪ್ಪು ಸುಲ್ತಾನ್ ರವರ ತತ್ವದಡಿಯಲ್ಲಿ ದೇಶದ ಸಲುವಾಗಿ ತಮ್ಮ ಪ್ರಾಣವನ್ನೇ ಪವಿತ್ರ ರಂಜಾನ್ ಮಾಸದಲ್ಲಿ ದೇಶಗೋಸ್ಕರ ಬಲಿದಾನ ನೀಡಿ ವೀರ ಮರಣ ಹೊಂದಿ ಹುತಾತ್ಮರಾದ ನಮ್ಮ ಇಸ್ಲಾಂ ಧರ್ಮದ ಧಾರ್ಮಿಕ ಜಾಗತಿಕ ಮುಖಂಡರು ಹಾಗೂ ಇರಾನ್ ದೇಶದ ಸರ್ವೋಚ್ಚ ನಾಯಕ ಜನಾಬ್ ಆಯಾತೊಲ್ಲಾ ಅಲಿ ಖಮೇನಿ ಸಾಹೇಬ್ ರವರ ಸಾವಿನ ಸುದ್ದಿ ಇಡೀ ನಮ್ಮ ಇಸ್ಲಾಂ ಧರ್ಮ ವಿಷಾದ ಪಡುವ ದುಃಖಕರ ಸಂಗತಿಯಾಗಿದೆ. ಈ ಘಟನೆಗೆ ಸಂಭಂದಪಟ್ಟಂತೆ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿವತಿಯಿಂದ ಸಂತಾಪ ಸೂಚಕ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಸಮುದಾಯದ ಮುಖಾಂಡರಾದ KFC ಮೊಹಮ್ಮದ್ ಭಾಯಿ, ಫೈಸಲ್ ಚಾವುಸ್ ಭಾಯಿ, ಇಬ್ರಾಹಿಂ ಭಾಯಿ, ಅಬ್ದುಲ್ ವಾಹಿದ್ ಭಾಯಿ ಇನ್ನಿತರ ಮುಖಂಡರು & ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಗೌರವ ಅಧ್ಯಕ್ಷರಾದ ಅನ್ಸರುದ್ದಿನ್ ಭಾಯಿ, ಅಧ್ಯಕ್ಷರಾದ ಹುಸೇನ್ ಭಾಷಾ ಕೆ., ಪ್ರಧಾನ ಕಾರ್ಯದರ್ಶಿಯಾದ ಅಮೀನ್ ಭಾಯಿ, ಮುದಗಲ್ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಮಹ್ಮದ್ ರಸೂಲ್, ದಾದಾಪೀರ್ ಭಾಯಿ, ರಾಜಸಾಬ್, ರಫಿ ಸಂಪಂಗಿ, ಮೌಲಾ ಭಾಯಿ, ವಸಿಂ, ಹಜರತ್, ಫಾರೂಕ್, ಖಾಸಿಂ ಇನ್ನಿತರ ಸದಸ್ಯರು ಹಾಗೂ ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಅಪಾರ ಪ್ರಮಾಣದ ಬೆಂಬಲಿಗರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *