ಮಾನ್ವಿ ಪ್ರಸಿದ್ಧವಾದ ಶ್ರೀ ರೇಣುಕಾ ಯಲ್ಲಮ್ಮ ದೇವಿ ನೀರಮಾನ್ವಿ ಗ್ರಾಮದ ಜೆಲ್ಲಿ ಕುಟುಂಬದ ಮತ್ತೊಬ್ಬ ಯುವಕ ಭಾರತೀಯ ಗಡಿ ಭದ್ರತಾಪಡೆಗೆ ಆಯ್ಕೆಯಾಗಿದ್ದು ಇಂದು ಗ್ರಾಮದಿಂದ ಜಮ್ಮು ಕಾಶ್ಮೀರದ ಉದಾಂಪುರ್ ತರಬೇತಿ ಕೇಂದ್ರಕ್ಕೆ ಹೋಗುವುದಕ್ಕೂ ಮುಂಚೆ ಇಂದು ಸ್ವಾಮಿ ವಿವೇಕಾನಂದ ಸದ್ಭಾವನಾ ಸಮಿತಿ ನೀರಮಾನ್ವಿ ಹಾಗೂ ಗ್ರಾಮದ ಹಲವು ಸಂಘಟನೆಯ ಮುಖಂಡರು ಕುಟುಂಬಸ್ಥರು ಊರಿನ ಹಿರಿಯರು ಅದ್ದೂರಿಯಾಗಿ ಛತ್ರಪತಿ ಶಿವಾಜಿ ಮಹಾರಾಜರ ಸರ್ಕಲ್ ನಲ್ಲಿ ಗೌರವಿಸಿ ಸನ್ಮಾನಿಸಿ ಇಂದು ಗ್ರಾಮದಿಂದ ಸಂತೋಷದಿಂದ ಕಳುಹಿಸಿಕೊಟ್ಟರು
ಈ ಗ್ರಾಮವು ಸಾಹಿತ್ಯಕ್ಕೂ ಹೆಸರಾಗಿದೆ ಜಾನಪದ ಕಲೆಗೂ ಹೆಸರಾಗಿದೆ ಅದೇ ರೀತಿಯಾಗಿ ಈ ಗ್ರಾಮದ ಯುವಕರು ದೇಶ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಈ ಗ್ರಾಮದ ಯುವಕರು ಇನ್ನು ಹೆಚ್ಚಾಗಿ ಒಳ್ಳೆಯ ಹುದ್ದೆಗಳನ್ನು ಪಡೆಯಲಿ ಎಂದು ನಾವು ಹಾರೈಸುತ್ತೇವೆಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತಮ್ಮ ಅನಿಸಿಕೆ ಹಂಚಿಕೊಂಡರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಸ್ವಾಮಿ ವಿವೇಕಾನಂದ ಸದ್ಭಾವನಾ ಸಮಿತಿ ಪದಾಧಿಕಾರಿಗಳು ಎಲ್ಲಾ ಸಮುದಾಯದ ಹಿರಿಯ ಮುಖಂಡರು ಹಾಗೂ ಕುಟುಂಬಸ್ಥರು ಹಾಜರಿದ್ದರು

