ಮಸ್ಕಿ ತಾಲೂಕಿನ ಜಿನ್ನಾಪೂರು, ಬಸವಣ್ಣ ಕ್ಯಾಂಪ್, ಬಸಾಪುರು, ಗೊಗೆಬಾಳ, ಪಾಮನಕಲ್ಲೂರು ಮತ್ತು ಬೆಂಚಮರಡಿ ಗ್ರಾಮಗಳಲ್ಲಿ ಸಿ ಸಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್ ಬಸನಗೌಡ ತುರ್ವಿಹಾಳ ಅವರು ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಾ ಜಿನ್ನಾಪೂರು ಗ್ರಾಮದ ಸೇತುವೆ ನಿರ್ಮಾಣಕ್ಕೆ ಮೊತ್ತ 2.70 ಕೋಟಿ ಪಿ ಡಬ್ಲ್ಯೂ ಡಿ ವತಿಯಿಂದ, ನಿರ್ಮಿತಿ ಕೇಂದ್ರದ ವತಿಯಿಂದ ಗೂಗೆಬಾಳ ಮೊತ್ತ 30 ಲಕ್ಷ, ಬಸವಣ್ಣ ಕ್ಯಾಂಪ್ ಮೊತ್ತ 30 ಲಕ್ಷ, ಬಸಾಪುರ ಮೊತ್ತ 35 ಲಕ್ಷ, ಬೆಂಚಮರಡಿ 30 ಲಕ್ಷ ಮೊತ್ತ. ಜಲಾದಾರೆ ಮತ್ತು ಜೆ ಜೆ ಎಂ ಕಾಮಗಾರಿಯಿಂದ ಗ್ರಾಮಗಳಲ್ಲಿ ರಸ್ತೆಗಳು ಹದಗೆಟ್ಟಿರಿವದರಿಂದ 2025-26 ನೇ ಸಾಲಿನ ಕಲ್ಯಾಣ ಕರ್ನಾಟಕ ನೀದಿಯಿಂದ ಸಿ ಸಿ ರಸ್ತೆ ಅಭಿವೃದ್ಧಿ ಕಾಮಗರಿಗಳನ್ನು ಹಮ್ಮಿಕೊಳ್ಳಲಾಗಿದೆ. ಸೇತುವೆ ಕಾಮಗಾರಿ ಸೇರಿದಂತೆ ಸಿ ಸಿ ರಸ್ತೆ ಕಾಮಗಾರಿಗಳನ್ನು ಗುಣಮಟ್ಟವನ್ನು ಕಾಯ್ದುಕೊಂಡು ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮತ್ತು ಗುತ್ತೇದಾರರಿಗೆ ತಿಳಿಸಿದರು.

ಮಸ್ಕಿ ತಾಲೂಕು ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಹಾಗೂ ಇನ್ನು ಅನೇಕ ಮುಖಂಡರು, ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *