ಹಾಲಾಪೂರ: ಗ್ರಾಮದ ಸರಕಾರಿ ಪ್ರೌಢಶಾಲೆಗೆ ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ ದೊಡ್ಡಮನಿ ಯವರು ಭೇಟಿ ನೀಡಿದರು. ಇದೇ ತಿಂಗಳು ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಅದುಕ್ಕೋಸ್ಕರ ಇಂದು ಪೂರ್ವಭಾವಿ ಸಭೆಯನ್ನು ನಡೆಸಿ ಈಗಾಗಲೇ ಪೂರ್ವ ಸಿದ್ಧತೆ ಪರೀಕ್ಷೆಗಳು ಒಂದು, ಎರಡು ಮತ್ತು ಮೂರು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮಕ್ಕಳೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಿ ಬರುವಂತಹ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಮಾಡುವ ಮೂಲಕ ಕಲಿತ ಶಾಲೆಗೆ, ನಿಮ್ಮ ಗ್ರಾಮಕ್ಕೆ, ತಂದೆ ತಾಯಿಗಳಿಗೆ ಹೆಸರು ತರುವಂತ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳೊಂದಿಗೆ ಊಟ ಮಾಡುತ್ತಾ ಹೇಳಿದರು . ಹಾಗೆ ವಿಷಯವಾರು ಶಿಕ್ಷಕರೊಂದಿಗೆ ಚರ್ಚಿಸಿ ಗುಣಮಟ್ಟದ ಫಲಿತಾಂಶ ಸುಧಾಣಿಗಾಗಿ ಸೂಕ್ತ ಮಾರ್ಗದರ್ಶನ ಬಿಇಓ ಚಂದ್ರಶೇಖರ್ ದೊಡ್ಡಮನಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯಗುರು ಸುಭಾಷ್ ಸಿಂಗ್ ಹಜಾರೆ ಹಾಗೂ ಶಿಕ್ಷಕರು ಇದ್ದರು.

Leave a Reply

Your email address will not be published. Required fields are marked *