ಸನಾತನ ಹಿಂದೂ ಧರ್ಮದ ಹಬ್ಬಗಳ ಆಚರಣೆಗಳಲ್ಲಿ ಮತ್ತು ಸಂಪ್ರದಾಯಗಳಲ್ಲಿ ಸಾಮಾನ್ಯವಾಗಿ ವಿಜ್ಞಾವು ಅಡಕವಾಗಿದೆ. ಪೂಜೆ ಪುನಸ್ಕಾರಗಳಿಂದ ಜೀವನದಲ್ಲಿ ಬರುವ ಸುಖ ದುಖಃ ಮನೋ ನಿಯಂತ್ರಣವಾಗಿ ಜೀವನದ ಸಾಧನೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ಪ್ರಕೃತಿಯಲ್ಲಿ ಗ್ರಹಣಗಳು ಸಂಭವಿಸಿದಾಗ ಹೋಮ, ಹವನ ಪೂಜೆ ಆಚರಣೆ ಮಾಡುವುದರಿಂದ ಜನಸಾಮಾನ್ಯರಿಗೆ ಹಾಗೂ ದೇಶಕ್ಕೆ ಬರುವಂತ ಅತಿವೃಷ್ಠಿ ಅನಾವೃಷ್ಠಿಗಳನ್ನು ಪಾರು ಮಾಡಬಹುದು ಎಂಬ ಪ್ರತೀತಿ ಇದೆ ಎಂದು ವಶಿಷ್ಠಧಾಮ ಸೇವಾ ಟ್ರಸ್ಟ್‌ನ ಅಧ್ಯಕ್ಷ ಭೀಮಸೇನಾಚಾರ್ಯ ನವಲಿ ಹೇಳಿದರು.
ಅವರು ಸಿಂಧನೂರು ನಗರದ ಉಪ್ಪಾರವಾಡಿಯ ವಶಿಷ್ಠಧಾಮದಲ್ಲಿ ಲೋಕಕಲ್ಯಾಣಾರ್ಥವಾಗಿ ಜರುಗಿದ ಚಂದ್ರಗ್ರಹಣ ಹೋಮ ಶಾಂತಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತನಾಡಿ
ಜನಸಾಮಾನ್ಯರು ನಿರಂತರವಾಗಿ ಧಾರ್ಮಿಕ ಆಚರಣೆಗಳು ಆಚರಿಸುವ ಮೂಲಕ ಅರೋಗ್ಯ ಐಶ್ವರ್ಯ ಪಡೆಯಬಹುದಾಗಿದೆ, ಆಗಾಗ ಸಂಭವಿಸುವ ಗ್ರಹಣ ಸಮಯದಲ್ಲಿ ಭಗವಂತನಲ್ಲಿ ಪ್ರಾರ್ಥಿಸುವುದು ಹೋಮ ಹವನ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.
ವಸಿಷ್ಠಧಾಮ ಟ್ರಸ್ಟ್‌ನ ಕಾರ್ಯದರ್ಶಿ ಭಾರದ್ವಾಜ ಉಪ್ಪಳ ಅವರು ಲೋಕಕಲ್ಯಾಣಕ್ಕಾಗಿ ನಡೆದ ಚಂದ್ರ ಗ್ರಹಣ ಶಾಂತಿ ಹೋಮ ಕಾರ್ಯಕ್ರಮವನ್ನು ನೇರವೇರಿಸಿ, ಉಪನ್ಯಾಸ ನೀಡಿದರು.
ವಶಿಷ್ಠಧಾಮ ಗುರುಕುಲ ಮಕ್ಕಳಿಂದ ಭಗವದ್ಗೀತಾ ಶ್ಲೋಕ ಪಾರಾಯಣ, ಈರಮ್ಮ, ಶೋಭಾ ನವಲಿ, ಪದ್ಮಾವತಿ ಗೋಮರ್ಸಿ, ಲಕ್ಷ್ಮಿ, ಸುಮಿತ್ರಾ ಮುಂತಾದವರಿಂದ ಭಜನಾಕಾರ್ಯಕ್ರಮ ಜರುಗಿತು.
ಈ ಸಮಯದಲ್ಲಿ ನಗರಸಭೆಯ ಸದಸ್ಯ ಹನಮೇಶ ಕುರಕುಂದಿ, ರೈತ ಮುಖಂಡ ಗೌಡಪ್ಪಗೌಡ ಗುಂಜಳ್ಳಿ, ವಿರುಪಣ್ಣ ಗುಡಿ, ಉಮೇಶ ಗೋಮರ್ಸಿ, ಬಸವರಾಜ ಕೆಸರಟ್ಟಿ, ಉಮೇಶರಾವ್ ಪವಾರ, ವೆಂಕಟೇಶ ಸಾ ಪೋತ್ನಾಳ, ಬಸವರಾಜ ನಾಯಕ, ಗಂಧಿ ವೆಂಕೋಬಣ್ಣ ಶ್ರೇಷ್ಠಿ ಮಲ್ಕಾಪುರ, ಅವಿನಾಶ್ ದೇಶಪಾಂಡೆ ಮುಂತಾದವರು ಉಪಸ್ಥಿತರಿದರು.

