ಸಿಂಧನೂರು – ಮಸ್ಕಿ ತಾಲೂಕಿನ ಬಳಗಾನೂರ ಪೊಲೀಸ್ ಠಾಣೆಯ ಪಿ.ಎಸ್.ಐ. ಅಧಿಕಾರಿಗಳಾದ ಯರಿಯಪ್ಪ ಅಂಗಡಿ ಇವರ ಸಲಹೆಯಂತೆ ಬಳಗಾನೂರು ಪಟ್ಟಣದಲ್ಲಿ ಸುಮಾರು ದಿನಗಳಿಂದ ಅಪರಿಚಿತ ವ್ಯಕ್ತಿಯಾಗಿ ಓಡಾಡುತ್ತಿದ್ದ ವಿಜಯ್ ತಂ. ಜೋಲು ತೊಂಟು ಬಾಯೀ ಕೊಲ್ಕತ್ತಾ ( ವೆಸ್ಟ್ ಬೆಂಗಾಲ್ )ವಯಸ್ಸು-40 ಇವರನ್ನು ಪೊಲೀಸ ಅಧಿಕಾರಿಗಳು ಸುಮಾರು ಎರಡು ಮೂರು ದಿನಗಳ ಕಾಲ ಊಟೋಪಚಾರ ಮಾಡಿ ಆಶ್ರಯ ನೀಡಿ ಕಾರುಣ್ಯ ಆಶ್ರಮಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ ಅವರು ತಮ್ಮ ವಾಹನ ಸಿಬ್ಬಂದಿಗಳೊಂದಿಗೆ ಬಳಗಾನೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಈ ವ್ಯಕ್ತಿಯನ್ನು ಆಶ್ರಮಕ್ಕೆ ಕರೆತಂದು ಆಶ್ರಯ ನೀಡಿದರು. ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವಸ್ವಾಮಿ ಹಿರೇಮಠ ಅವರು ಈ ವ್ಯಕ್ತಿಯು ಹೆಸರು ಮಾತ್ರ ಹೇಳುತ್ತಿದ್ದು ಇನ್ನೂ ಬೇರೆ ಯಾವುದೇ ವಿಷಯವನ್ನು ಹೇಳುತ್ತಿಲ್ಲ ಇಂತಹ ವ್ಯಕ್ತಿಗೆ ಮಾನವೀಯತೆಯ ದೃಷ್ಟಿಯಿಂದ ಬಳಗಾನೂರು ಪೊಲೀಸ್ ಠಾಣೆ ಪಿಎಸ್ಐ ಗಳಾದ ಯರಿಯಪ್ಪ ಅಂಗಡಿ ಹಾಗೂ ಸಿಬ್ಬಂದಿಗಳು ಸ್ವಂತ ಸಹೋದರರಾಗಿ ಎರಡು ಮೂರು ದಿನಗಳ ಕಾಲ ನೋಡಿಕೊಂಡಿರುವುದು. ಪೊಲೀಸ್ ಇಲಾಖೆಯ ಸಾಮಾಜಿಕ ಜವಾಬ್ದಾರಿಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿರುವುದು ಸಮಾಜಕ್ಕೆ ಉತ್ತಮ ಸಂದೇಶ ಪೊಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ಸ್ವಂತ ಕಾರ್ಯಕ್ರಮಗಳನ್ನು ಹಬ್ಬ ಹರಿದಿನಗಳನ್ನು ಮಾಡಿಕೊಳ್ಳದೆ ನಿರಂತರ ಸಾರ್ವಜನಿಕರ ಸೇವೆಯಲ್ಲಿ ತೊಡಗಿ ಜನರಿಗೆ ಉತ್ತಮ ರೀತಿಯಿಂದ ಸ್ಪಂದಿಸುತ್ತಿರುವುದು ನಮ್ಮ ರಾಯಚೂರು ಜಿಲ್ಲಾ ಪೊಲೀಸ್ ಇಡೀ ರಾಜ್ಯದ ಜನರ ಪ್ರೀತಿಗೆ ಪಾತ್ರವಾಗಿದೆ ಕೆಲವೇ ತಿಂಗಳುಗಳ ಹಿಂದೆ ಕಾರುಣ್ಯ ಆಶ್ರಮಕ್ಕೆ 2005ನೇ ಬ್ಯಾಚ್ ನ ಪೊಲೀಸರು ಇಂತಹ ನಿರ್ಗತಿಕರ ಆಶ್ರಯಕ್ಕಾಗಿ ಆಶ್ರಯಧಾಮ ನಿರ್ಮಿಸಿ ಕೊಟ್ಟಿದ್ದಾರೆ. ಮತ್ತು ರಾಯಚೂರು ಜಿಲ್ಲಾ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಕಾರುಣ್ಯ ಆಶ್ರಮಕ್ಕೆ ಸಹಾಯ ಸಹಕಾರ ಮಾಡುತ್ತಾ ಮಾರ್ಗದರ್ಶನ ನೀಡುತ್ತಿರುವುದು ನಮಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ಕಲ್ಪಿಸಿದಂತಾಗಿದೆ ಎಂದು ಮಾತನಾಡಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದರು. ಈ ಸಮಯದಲ್ಲಿ ಬಳಗಾನೂರು ಪೊಲೀಸ್ ಠಾಣೆಯ ಪಿ.ಎಸ್.ಐ.ಯರಿಯಪ್ಪ ಅಂಗಡಿ. ಹೆಡ್ ಕಾನ್ಸ್ಟೇಬಲ್ ಸಂಗಯ್ಯ ಸ್ವಾಮಿ. ಹೆಡ್ ಕಾನ್ಸ್ಟೇಬಲ್ ದೇವಪ್ಪ.ಪಿ. ಸಿ.ರೇವಣಸಿದ್ದಪ್ಪ. ಆಶ್ರಮದ ಸಿಬ್ಬಂದಿಗಳಾದ ಮರಿಯಪ್ಪ ಮತ್ತು ಇನ್ನಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *