ತಾಳಿಕೋಟಿ: ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಷ.ಬ್ರ.ಶ್ರೀ ರಾಜ ಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದಲ್ಲಿ ಪರಮ ಪೂಜ್ಯರು ರಾಜೇಂದ್ರ ಒಡೆಯರ್ ಶಿವಾಚಾರ್ಯರಿಗೆ ಗೌರವ ಸಮರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕೊಡೆಕಲ್ಲದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ವೀರಶೈವ ಲಿಂಗಾಯತ ಧರ್ಮದಲ್ಲಿ ಗುರುವಿಗೆ ಶ್ರೇಷ್ಠ ಗೌರವದ ಸ್ಥಾನವನ್ನು ನೀಡಿದ್ದು ಗುರುವಿಲ್ಲದೆ ಮನುಷ್ಯನ ಮೋಕ್ಷ ಅಸಾಧ್ಯ ಎಂದು ಹೇಳಲಾಗಿದೆ. ಪೂಜ್ಯ ರಾಜೇಂದ್ರ ಶರಣರು ಈ ಭಾಗದಲ್ಲಿ ಭಕ್ತರನ್ನು ಆಧ್ಯಾತ್ಮಿಕವಾಗಿ ಸಂಸ್ಕರಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ ಅವರೊಬ್ಬ ಸರಳ ಎಲ್ಲರ ಸಂಪ್ರೀತಿಗೆ ಪಾತ್ರರಾದ ಗುರುಗಳಾಗಿದ್ದಾರೆ. ಅವರನ್ನು ಇಂದು ನಾವೆಲ್ಲರೂ ಗೌರಿಸುವಂತಹ ಕೆಲಸ ಮಾಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಎಲ್ಲ ಭಕ್ತಾದಿಗಳು ಅವರ ಮೇಲೆ ಇದೇ ರೀತಿಯ ಶ್ರದ್ಧೆ ಪ್ರೀತಿ ಹಾಗೂ ಭಕ್ತಿಯನ್ನಿಟ್ಟು ತನು ಮನ ಧನದಿಂದ ಸಹಕರಿಸಬೇಕು ಎಂದರು. ಸಾಸನೂರ ತುಂಬಿಗೀಯ ಪೂಜ್ಯ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೇವದುರ್ಗದ ಪರಮ ಪೂಜ್ಯರಾದ ಕಪಿಲ ಸಿದ್ದರಾಮ ಶಿವಾಚಾರ್ಯರು, ಚಬನೂರಿನ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು, ದೇವರ ಹಿಪ್ಪರಗಿ ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯರು, ಕಲ್ಮಠದ ಸಿದ್ದಲಿಂಗ ದೇವರು, ಮಾತೋಶ್ರೀ ಸಾವಿತ್ರಿ ಅಮ್ಮನವರು,ಡಾ.ಗುರುಲಿಂಗಯ್ಯ ಹಿರೇಮಠ,ಶರಣಗೌಡ ಇಬ್ರಾಹಿಂಪೂರ,ರವಿಧಣಿ ದೇಶಮುಖ,ಎಸ್.ಎಸ್.ಹಾವರಗಿ,ಪುರಾಣಿಕ ರಾಚಯ್ಯ ಹಿರೇಮಠ,ಡಾ.ಸೋಮಶೇಖರಯ್ಯ ಹಿರೇಮಠ, ಸಾಹಿತಿ ಬಸವರಾಜ ಗೊರಜಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *