ಮಾನ್ವಿ : ಇಂದು ನಮ್ಮ ಪಟ್ಟಣದ ಅತ್ಯಂತ ಮಹತ್ವದ ದಿನಗಳಲ್ಲೊಂದು. ಬೇಸಿಗೆಯ ಬಿರುಬಿಸಿಲಿನ ಝಳವನ್ನು ಸಹಿಸಲಾರದೆ ನರಳುವ ಜನತೆಗಾಗಿ ನೀರಿನ ದಾಹವನ್ನು ತಣಿಸಲು ಇಂತ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದು ಒಳ್ಳೆಯ ಕಾರ್ಯ ಎಂದು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷರಾದ ರಾಮಣ್ಣ ನಾಯಕ ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ಸಂತೆ ಮಾರ್ಕೆಟಿನಲ್ಲಿ ಬುಧುವಾರದಂದು ಕೊಂಡಯ್ಯ ನಾಯಕ ಪ್ರಧಾನ ಕಾರ್ಯದರ್ಶಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ಪ್ರಾರಂಭವಾಗಿದ್ದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.ಆಂಜನೇಯ ನಸಲಾಪುರ ಮಾತನಾಡಿ
ಬೇಸಿಗೆ ಎಂದರೆ ಬರೀ ಸೆಖೆ ಮಾತ್ರವಲ್ಲ, ನೀರಿನ ಕೊರತೆಯಿಂದ ಜನರು ಪಡುವ ಕಷ್ಟವೂ ಹೌದು. ವಿಶೇಷವಾಗಿ ಕಾರ್ಮಿಕರು, ರಿಕ್ಷಾ ಚಾಲಕರು, ಪಾದಚಾರಿಗಳು ಮತ್ತು ವ್ಯಾಪಾರಸ್ಥರು ಬಿಸಿಲಿನ ಝಳಕ್ಕೆ ಸಿಲುಕಿ ಬಾಯಾರಿಕೆಯಿಂದ ನರಳುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈ ಸಮಸ್ಯೆಗೆ ಸ್ಪಂದಿಸುವ ಸದುದ್ದೇಶದಿಂದ, ಕೊಂಡಯ್ಯ ನಾಯಕರ ಪುಟ್ಟ ಪ್ರಯತ್ನವೇ ಈ ನೀರಿನ ಅರವಟ್ಟಿಗೆ. ಇಲ್ಲಿ ಯಾವುದೇ ವ್ಯಕ್ತಿ, ಜಾತಿ, ಧರ್ಮ, ವರ್ಗದ ಭೇದವಿಲ್ಲದೆ ಎಲ್ಲರೂ ನೀರು ಕುಡಿಯಬಹುದು. ಇದು ಮಾನವೀಯತೆಯ ಸಂಕೇತ ಎಂದು ಹೇಳಿದರು. ಸಾಜೀದ್ ಪಾಷಾ ಮಾತನಾಡಿ ಸಂತೆ ಮಾರ್ಕೆಟ್ ಅಲ್ಲಿ ನೀರಿನ ಅರವಟ್ಟಿಗೆ ಪ್ರಾರಂಭ ಮಾಡಿದ್ದೂ ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ. ಸಂತೆಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ನಾಯ್ಡು ನಾಯಕ, ದೇವರಾಜ್ ನಾಯಕ ಅಧ್ಯಕ್ಷರು ಕ.ವಾ.ನಾ.ಮ. ಮಾನ್ವಿ, ಬಸವರಾಜ್ ಸ್ವಾಮಿ, ಮಂಜುನಾಥ ನಾಯಕ, ಉಪೇಂದ್ರ ನಾಯಕ, ವಿರೇಶ ನಾಯಕ, ಚನ್ನಬಸವ ಸ್ವಾಮಿ ಅಧ್ಯಕ್ಷರು ನೆರಳು ಅನಾಥಶ್ರಮ ಮಾನ್ವಿ, ಬಸವ ನಾಯಕ,ರಾಜ್ ನಾಯಕ, ಬಸವ ನಾಯಕ, ಶಿವರಾಯ ನಾಯಕ, ಹನುಮೇಶ್ ನಾಯಕ ಸುರೇಶ ನಾಯಕ, ವಿಜಯ್ ನಾಯಕ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *