ಸಿಂಧನೂರು ಮಾರ್ಚ್ 04: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ವಿಭಾಗ ರಾಯಚೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜವಳಗೇರಾ ಇ ವರ ಸಂಯುಕ್ತ ಆಶ್ರಯದಲ್ಲಿ ಶ್ರವಣ ದೋಷ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮದ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿ ಎಲ್ಲಾ ವಯೋಮಾನದಲ್ಲಿ ಬರುತ್ತಿರುವ ಶ್ರವಣ ದೋಷಗಳನ್ನು ನಿರ್ಲಕ್ಷ ಮಾಡಬಾರದು ಕಿವುಡುತನವನ್ನು ಆರಂಭದಲ್ಲಿ ಗುರುತಿಸಿ ಪರೀಕ್ಷಿಸಿ, ಚಿಕಿತ್ಸೆ ಪಡೆಯುವುದು ಹುಟ್ಟಿದ ಮಕ್ಕಳಲ್ಲಿ ಕಂಡುಬರುವ ಕಿವುಡುತನವನ್ನು ತಕ್ಷಣ ತಜ್ಞ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಹುಟ್ಟಿದ ಜೋರಾದ ಶಬ್ದಕ್ಕೆ ಎಚ್ಚೆತ್ತು ಕೈಗೊಳ್ಳದಿರುವುದು. ಕಣ್ಣು ಮೀಟುಕಿಸದಿರುವುದು ತಾಯಿಯ ಧ್ವನಿ ಗುರುತಿಸಿದೇ ಹಾಗೂ ಮಗು ಶಬ್ದ ಕಡೆ ಕಣ್ಣುನ್ನು ತಿರುಗಿಸದಿರುವುದು ತಾಯಿ ಕರೆದಾಗ ಪ್ರತಿಕ್ರಿಯೆ ನೀಡಿರುವುದು ಸೂಚನೆಗಳನ್ನು ಅರ್ಥ ಮಾಡಿಕೊಳ್ಳದಿರುವುದು ಇವು ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಕಂಡುಬರುವ ಕಿವಿಯ ತೊಂದರೆಗಳು ಕೊಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು
ನಂತರ ಮಾತನಾಡಿದ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಅಂಬಮ್ಮ ಅವರು ಕಿವಿ ಕೇಳಿಸುವುದಿಲ್ಲ . ಕಿವಿ ನೋವು ಕಿವಿ ಸೋರುವುದು ಕಿವಿಯೊಳಗೆ ಗುಂಯ್ ಗುಟ್ಟುವ ಶಬ್ದ ಬರುವುದು ಕಿವಿ ತುರಿಕೆ ಕಿವಿ ಜುಮ್ಮೆನಿಸಿವುದು‌ ತಲೆ ಸುತ್ತು ತಲೆ ನೋವು ವಾಂತಿ ಇವುಗಳ ಶ್ರವಣ ದೋಷದ ತೊಂದರೆ ಗಳಾಗಿವೆ. ಯಾವುದೇ ವಸ್ತುವನ್ನು ಕಿವಿಯೊಳಗೆ ಹಾಕದಿರುವುದು‌ ಕಿವಿ ಒಳಗಿನ ಗುಗ್ಗೆಯನ್ನು ಪಿನ್ನು ಅಥವಾ ಯಾವುದೇ ವಸ್ತುವಿನಿಂದ ಸ್ವಂತ ತೆಗೆಯಲು ಪ್ರಯತ್ನಿಸುವುದು ಯಾವುದೇ ಕಿವಿಯ ತೊಂದರೆಗಳು ಕಂಡು ಬಂದರೆ ಕೂಡಲೇ ತಕ್ಷಣ ಕಿವಿ ತಜ್ಞರಲ್ಲಿ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಇಂದ್ರಮ್ಮ ಮತ್ತು ಆಶಾ ಕಾರ್ಯಕರ್ತೆಯರು ಶರಣಮ್ಮ .ತಾಯಿಂದಿರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *