ಸಿಂಧನೂರು – ಮಾ 4 ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್ (ರಿ)ಸ್ವಾಮಿ ಟೇಬಲ್ ಟ್ರಸ್ಟ್ (ರಿ) ಬೆಳಕು ಸಾಹಿತ್ಯ ಮತ್ತು ಸಾಂಸ್ಕೃತಿಕ ಶೈಕ್ಷಣಿಕ ಸಂಸ್ಥೆ (ರಿ) ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷದಂತೆ ಕಾರುಣ್ಯಾಶ್ರಮದಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 112ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮವನ್ನು ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ತುರ್ವಿಹಾಳ ಪೊಲೀಸ್ ಠಾಣೆಯ ಪಿ.ಎಸ್.ಐ.ಗಳಾದ ಸುಜಾತ ಅವರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ನಮ್ಮ ಈ ಕಾರುಣ್ಯ ಕುಟುಂಬ ಹುಟ್ಟಿದ್ದೇ ಪುಟ್ಟರಾಜ ಗವಾಯಿಗಳ ಆಶೀರ್ವಾದದೊಂದಿಗೆ. ಆಶ್ರಮದ ಸೇವೆಗೆ ಬಹುದೊಡ್ಡ ಶಕ್ತಿಯಾಗಿ ನಮಗೆ ನಡೆದಾಡುವ ದೇವರಾಗಿ ವಿಶ್ವ ಕಂಡರಿಯದಂತಹ ಅಂದ ಅನಾಥರ ಬಾಳಿನ ಬೆಳಕಾಗಿದ್ದರು ಪುಟ್ಟರಾಜ ಗವಾಯಿಗಳು ಇಂತಹ ಪುಣ್ಯಾತ್ಮರನ್ನು ನಿರಂತರ ಪೂಜಿಸುವುದು ಪ್ರಾರ್ಥನೆಯ ಮೂಲಕ ಆಶ್ರಯದಾತರುಗಳಿಗೆ ಆಯಸ್ಸು ಆಯುರಾರೋಗ್ಯ ಕರುಣಿಸು ತಂದೆ ಎನ್ನುವ ನಿರಂತರ ಪ್ರಾರ್ಥನೆ ಕಾರುಣ್ಯ ಕುಟುಂಬದ್ದು. ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಗವಾಯಿಗಳು ನಮ್ಮ ಸೇವೆಗೆ ಸ್ಪೂರ್ತಿಯಾಗಿದ್ದಾರೆ. ಅಂಧ-ಅನಾಥರ ಬಾಳಿಗೆ ಬೆಳಕಾಗಿದ್ದವರು ನಮ್ಮ ಗದುಗಿನ ಪುಟ್ಟರಾಜರು ಮಾನವ ಧರ್ಮದ ಸಮಾನತೆಯ ಹರಿಕಾರರಾಗಿ ಅದೆಷ್ಟು ಅಂಧರಿಗೆ ಬೆಳಕು ಚೆಲ್ಲಿದ ಈ ಪವಾಡ ಪುರುಷರು ತ್ರಿವಿಧ ದಾಸೋಹಿ ಮೂರ್ತಿಗಳಾಗಿ ಇತಿಹಾಸದಲ್ಲಿ ಉಳಿದಿದ್ದಾರೆ. ನಮ್ಮ ಕಾರುಣ್ಯ ಆಶೀರ್ವಾದದಲ್ಲಿ ಇವರು ನಡೆದಾಡುವ ದೇವರುಗಳಾಗಿ ದಿನಾಲು ಕೂಡ ನಮಗೆ ಆಶೀರ್ವದಿಸುತ್ತಿದ್ದಾರೆ ಎನ್ನುವ ನಂಬಿಕೆ ನಮ್ಮೆಲ್ಲರಲ್ಲಿ ಇದೆ ಇವರ ಆಶೀರ್ವಾದ ಸದಾವಕಾಲ ನಮ್ಮೆಲ್ಲರ ಮೇಲಿರಲಿ ಎನ್ನುವುದು ನಮ್ಮ ಸಂಕಲ್ಪವಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ.ಜ್ಯೋತಿ ಮೀನಾಕ್ಷಮ್ಮ. ಲಕ್ಷ್ಮಮ್ಮ ಹಾಗೂ ಆಶ್ರಮದ ಆಶ್ರಯದಾತರುಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *