ಸಿಂಧನೂರು : ಮಾ 4 ತಾಲೂಕಿನ ತುರ್ವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ತಿಡಿಗೋಳ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನಾಗಿ ಸುಮಾರು ಎರಡು ದಿನಗಳಿಂದ ಗ್ರಾಮದಲ್ಲಿ ವಾಸವಾಗಿದ್ದ ಈತನನ್ನು ಊರಿನ ಗ್ರಾಮಸ್ಥರು 112 ಗೆ ಕರೆ ಮಾಡಿ ನಮ್ಮ ಊರಲ್ಲಿ ಅಪರಿಚಿತ ವ್ಯಕ್ತಿ ವಾಸವಾಗಿದ್ದಾನೆ ಎಂದು ತಿಳಿಸಿದಾಗ ತುರ್ವಿಹಾಳ ಠಾಣೆಯ 112 ವಾಹನವು ಹೋಗಿದ್ದು ಸದರಿ ವಾಹನದಲ್ಲಿ ಈತನನ್ನುಕರೆದುಕೊಂಡು ಬಂದು ಠಾಣೆಗೆ ಕರೆತಂದು ಪೊಲೀಸ್ ಸಿಬ್ಬಂದಿಗಳಾದ ನಾಗಪ್ಪ ಮತ್ತು ಅಸ್ಲಾಂ ಇವರುಗಳ ಕರ್ತವ್ಯದಲ್ಲಿ ಇರಿಸಿಕೊಂಡಿದ್ದರು.ಈತನನ್ನು ವಿಚಾರಿಸಿದಾಗ ಹೆಸರು ಹೇಳದೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವ ಕಾರಣ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾಕ್ಟರ್ ಚನ್ನಬಸಯ್ಯಸ್ವಾಮಿ ಹಿರೇಮಠ ಅವರಿಗೆ ಮಾಹಿತಿ ನೀಡಲಾಯಿತು. ತಕ್ಷಣ ಆಶ್ರಮದ ವಾಹನದೊಂದಿಗೆ ಆಶ್ರಮದ ಸಿಬ್ಬಂದಿಗಳು ಈತನಿಗೆ ಹೋಲಿಸ ಅಧಿಕಾರಿಗಳ ಸಹಕಾರದೊಂದಿಗೆ ಈತನಿಗೆ ಕಟಿಂಗ್ ಮಾಡಿ ಸ್ನಾನ ಮಾಡಿಸಿ ಪಿ.ಎಸ್.ಐ. ಅಧಿಕಾರಿಗಳಾದ ಸುಜಾತ ಅವರ ಸಮಕ್ಷಮದಲ್ಲಿ ಆಶ್ರಮಕ್ಕೆ ಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ಪಿ.ಎಸ್.ಐ. ಸುಜಾತ ಮಾತನಾಡಿ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಇಂತಹ ಮಾನಸಿಕ ಅಸ್ವಸ್ಥರು ಅನಾಥರು ಬುದ್ಧಿಮಾಂದ್ಯರು ಕಂಡುಬಂದಂತಹ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಕಾರುಣ್ಯ ಆಶ್ರಮಕ್ಕೆ ಸೇರಿಸುತ್ತಿದ್ದೇವೆ. ನಂತರ ಅವರ ಬಗ್ಗೆ ವಿಚಾರಣೆ ಮಾಡಿದಾಗ ಅವರ ಪಕ್ಕ ವಿಳಾಸ ಹಾಗೂ ಕುಟುಂಬ ಇದ್ದಂತಹ ಸಂದರ್ಭದಲ್ಲಿ ಅವರವರ ಮನೆಗೆ ಕಳುಹಿಸುತ್ತೇವೆ. ಇಂತಹ ಸೇವೆಯಲ್ಲಿ ನಮ್ಮ ಇಲಾಖೆಯೊಂದಿಗೆ ಕಾರುಣ್ಯಾಶ್ರಮದ ಸಾಕಾರ ದೊರೆಯುವುದರಿಂದ ನಮ್ಮ ಕರ್ತವ್ಯಕ್ಕೆ ಬಹಳ ಅನುಕೂಲವಾಗುತ್ತಿದೆ. ನಮ್ಮ ಪೊಲೀಸ್ ಇಲಾಖೆಯ ಪ್ರೀತಿಗೆ ಪಾತ್ರವಾಗಿರುವ ಕಾರುಣ್ಯಾಶ್ರಮದ ಸೇವೆ ಶ್ಲಾಘನೀಯ. ಬಡ ಜಂಗಮರಾಗಿ ತಮ್ಮ ಜೋಳಿಗೆಯ ಮೂಲಕ ಇಂತಹ ಕಾರ್ಯ ಮಾಡುತ್ತಿರುವುದು ಮಾನವೀಯತೆ ಎನ್ನುವ ಪದಕ್ಕೆ ಸಂಪೂರ್ಣ ಅರ್ಥ ಕಲ್ಪಿಸಿಕೊಟ್ಟಿದೆ. ಕಾರುಣ್ಯಾಶ್ರಮವು ಅಂಧ-ಅನಾಥರ ಬಾಳಿನ ಸುಂದರ ಬದುಕಿನ ಅರಮನೆಯಾಗಿ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಈ ವ್ಯಕ್ತಿಯ ಪರಿಚಯ ಯಾರಿಗಾದರೂ ಇದ್ದಂತಹ ಸಂದರ್ಭದಲ್ಲಿ ನಮ್ಮ ಠಾಣೆಗೆ ಮಾಹಿತಿ ನೀಡಲು ವಿನಂತಿಸಿಕೊಳ್ಳುತ್ತೇನೆ.ಎಂದು ಮಾತನಾಡಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ನಾಗಪ್ಪ ಪಿ.ಸಿ.ಅಸ್ಲಾಂ ಪಾಷ ಪ್. ಸಿ. ಮಹೇಶ ಬಾಬು ಪಿ. ಸಿ. ಶಂಕರ ನಾಯಕ ವರದಿಗಾರರು.ನವಾಬ್ ಶರೀಫ್ ವರದಿಗಾರರು. ಕನಕರಾಯ ವರದಿಗಾರರು ಎಂ. ಡಿ ಯುನೂಸ್ ಖಾಜಿ ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಹಾಗೂ ತುರುವಿಹಾಳ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಹಲವಾರು ಸಾರ್ವಜನಿಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *