ರಾಯಚೂರು ಮಾ 4 : ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ವಿನೋದ್ ರೆಡ್ಡಿ ಅವರಿಗೆ ದೇವದುರ್ಗ ತಾಲೂಕು ಘಟಕದ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರ ಆದೇಶದಂತೆ ರಾಯಚೂರು ಜಿಲ್ಲೆಗೆ ನೂತನ ಜಿಲ್ಲಾಧ್ಯಕ್ಷರಾಗಿ ವಿನೋದ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕು ಘಟಕದ ಪದಾಧಿಕಾರಿಗಳು ಗೌರವ ಸನ್ಮಾನ ಮಾಡಿ ಶುಭಾಶಯ ಕೋರಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಸವರಾಜ್ HP, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶಂಕ್ರಗೌಡ ಮಾಲಿಪಾಟೀಲ್, ಶರಣು ಸರ್, ಕರವೇ ದೇವದುರ್ಗ ತಾಲೂಕು ಅಧ್ಯಕ್ಷರಾದ ನಂದಪ್ಪ ಪಿ ಮಡ್ಡಿ, ರಂಗಪ್ಪ ಬಂಡಿ, ಕರವೇ ಮುಖಂಡರಾದ ಭೀಮಣ್ಣ ನಾಯಕ (ತಾಲೂಕು ಸಂಚಾಲಕರು), ಗುರುನಾಥ್ ರೆಡ್ಡಿ (ತಾಲೂಕು ಪ್ರಧಾನ ಕಾರ್ಯದರ್ಶಿ), ತಮ್ಮಣ್ಣ ಹೆರುಂಡಿ (ಜಾಲಹಳ್ಳಿ ಹೋಬಳಿ ಅಧ್ಯಕ್ಷರು), ವೆಂಕಟೇಶ್ ಜಗರಕಲ್ (ಜಾಲಹಳ್ಳಿ ಉಪಾಧ್ಯಕ್ಷರು), ಅಮರೇಶ್ (ಹೋಬಳಿ ಉಪಾಧ್ಯಕ್ಷರು), ಭೀಮಾರಾಯ ಮಕಾಶಿ (ಯುವ ಕಲಚೇತನ ಅಧ್ಯಕ್ಷರು) ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂತನ ಜಿಲ್ಲಾಧ್ಯಕ್ಷರಾದ ವಿನೋದ್ ರೆಡ್ಡಿ ಅವರು ಸಂಘಟನೆಯನ್ನು ಇನ್ನಷ್ಟು ಬಲಪಡಿಸುವುದಾಗಿ ತಿಳಿಸಿದರು.

