ಮಾನ್ವಿ : ಪಟ್ಟಣದ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ನಡೆದ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜ (ರಿ) ಸಭೆಯಲ್ಲಿ ಮಾನ್ವಿ ತಾಲೂಕು ಅಧ್ಯಕ್ಷರನ್ನಾಗಿ ಮೌನೇಶ್ ಆಚಾರ್ ಹಾಲ್ವಿ ಅವರನ್ನು ಏಕಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಮಾಜದ ಸಂಘಟನೆ ಬಲವರ್ಧನೆ, ಯುವಕರ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮೌನೇಶ್ ವಿಶ್ವಕರ್ಮ ಸಾಲವಾಡಗಿ ಮಾತನಾಡಿ, ಸಮಾಜದ ಏಕತೆ ಮತ್ತು ಸಂಘಟಿತ ಶಕ್ತಿ ಅತ್ಯಂತ ಮುಖ್ಯವಾಗಿದ್ದು, ಹೊಸದಾಗಿ ಆಯ್ಕೆಯಾದ ತಾಲೂಕು ಅಧ್ಯಕ್ಷರು ಸಮಾಜದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ತಿಳಿಸಿದರು. ರಾಜ್ಯ ನಿರ್ದೇಶಕ ಅಂಬಣ್ಣ ಸಾಹುಕಾರ ಮದ್ಲಾಪೂರ್ ಸಹ ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.
ಸಭೆಯಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ಬಿ.ವೀರೇಶ್, ಸಮಾಜದ ಮಾಜಿ ತಾಲೂಕು ಅಧ್ಯಕ್ಷ ಸತೀಶ್ ಆಚಾರ್, ಗವಿಯಪ್ಪ ಆಚಾರ್, ಜಿ.ಎಸ್.ಅಂಬಣ್ಣ ಆಚಾರ್, ಷಣ್ಮುಖ ಆಚಾರ್ ಅಡಿಟರ್ ಜಿಕಲಪರ್ವಿ, ಮನೋಹರ ಆಚಾರ್ ವಕೀಲರು, ತಿರುಮಲ ಆಚಾರ್, ಗದ್ವಾಲ್ ವೆಂಕಟೇಶ್ ಆಚಾರ್, ಕೆ.ಮಲ್ಲಿಕಾರ್ಜುನ್ ಆಚಾರ್, ಧನುಂಜಯ ಆಚಾರ್, ವಿ.ಮೋಹನ್ ಆಚಾರ್, ಗ್ಯಾನಪ್ಪ ಆಚಾರ್, ಜೆ.ನಾಗರಾಜ್ ಆಚಾರ್, ಶಿವಪ್ಪ ಆಚಾರ್, ಕೆ.ಮಹೇಶ ಆಚಾರ್, ಸುಗಪ್ಪ ಆಚಾರ್, ಪಾಂಡುರಂಗ ಆಚಾರ್, ವೆಂಕಟೇಶ್ ಆಚಾರ್, ವರ್ಮಾ ಮೌನೇಶ್ ಆಚಾರ್, ವೀರೇಂದ್ರ ಆಚಾರ್, ಶಂಕ್ರಪ್ಪ ಆಚಾರ್, ರಮೇಶ್ ಆಚಾರ್, ಕೆಂಚಪ್ಪ ಆಚಾರ್, ರಾಘವೇಂದ್ರ ಆಚಾರ್, ಕೆ ಮಂಜುನಾಥ್ ಆಚಾರ್, ಕೆ ಆಯಪ್ಪ ಆಚಾರ್, ಎಚ್ ಮೌನೇಶ್ ಆಚಾರ್, ವೀರಭದ್ರ ಆಚಾರ್, ನಾಗಪ್ಪ ಬಡಿಗೇರ್ ಆಚಾರ್, ಕಾಳಪ್ಪ ಆಚಾರ್, ಮದ್ಲಾಪುರ್ ಚಂದ್ರಶೇಖರ್, ಮದ್ಲಾಪುರ್ ರಾಜಶೇಖರ್, ಶಿವಕುಮಾರ್ ಆಚಾರ್ ನೀರಮಾನ್ವಿ, ಗಂಗಾಧರ ಆಚಾರ್ ಕನಕಗಿರಿ, ಕಾಳಪ್ಪ ಕನಕಗಿರಿ, ನರಸಪ್ಪ ಆಚಾರ್, ತಿಪ್ಪಣ್ಣ ಆಚಾರ್, ಸುರೇಶ್ ಆಚಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *