ರಾಯಚೂರು ಮಾರ್ಚ್ 02 (ಕರ್ನಾಟಕ ವಾರ್ತೆ): ಕಡು ಬಡವರು, ಆರ್ಥಿಕ ದುರ್ಬಲ ವರ್ಗದವರು, ದೈನಂದಿನ ದುಡಿಮೆಯಿಂದಲೇ ಜೀವನ ನಿರ್ವಹಣೆ ಮಾಡಬೇಕಾದ ಕುಟುಂಬಗಳು ತುರ್ತು ಶಸ್ತ್ರಚಿಕಿತ್ಸೆಗಾಗಿ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಪಡೆಯಲು ಸಹಾಯಕವಾಗುವಂತೆ ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರ ಜಂಟಿಯಾಗಿ ಒಟ್ಟು 1650 ವಿವಿಧ ಚಿಕಿತ್ಸಾ ವಿಧಾನಗಳಿಗೆ ಉಚಿತ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ- ಪ್ರಧಾನಮಂತ್ರಿ ಜನಾರೋಗ್ಯ ಯೋಜನಾ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (ಎಬಿ-ಪಿಎಮ್ಜೆವೈ-ಸಿಎಮ್-ಆರ್ಕೆ) ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಕೋರಿದ್ದಾರೆ.
ಹೃದಯ ಸಂಬಂಧಿ, ಮೂತ್ರಪಿಂಡ, ಕಿಡ್ನಿ, ಕ್ಯಾನ್ಸ್ರ್, ಸುಟ್ಟಗಾಯಗಳು, ಗಂಭಿರ ಅಪಘಾತ, ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಕೆ, ಮೊಣಕಾಲು, ಸೊಂಟದ ಬದಲಿ ಚಿಕಿತ್ಸೆಯು ಸೇರಿದಂತೆ ಗಂಭೀರ ಖಾಯಿಲೆಗಳಿಗೆ ಒಟ್ಟು 1650 ವಿವಿಧ ಚಿಕಿತ್ಸಾ ವಿಧಾನಗಳಿಗೆ ಜಿಲ್ಲೆಯ ಎಲ್ಲ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೇವೆ, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡ ನೋಂದಾಯಿತ ಖಾಸಗಿ ಆಸ್ಪತ್ರೆಗಳ ಮೂಲಕ ಫಲಾನುಭವಿಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇತ್ತೀಚೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ. ಕುಮಾರ ನಾಯಕ ಅವರ ಅಧ್ಯಕ್ಷತೆಯ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದೀಶಾ) ಸಭೆಯಲ್ಲಿ ಸಂಸದರು ಸೂಚಿಸಿದಂತೆ ಈಗಾಗಲ್ಲೇ ಯೋಜನೆಯ ಕುರಿತು ಜನತೆಗೆ ಸಿಬ್ಬಂದಿಯವರ ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಜಿಲ್ಲೆಯ ಪ್ರತಿ ನಾಗರಿಕರು ಯೋಜನೆಯಡಿ ಸೌಲಭ್ಯ ಪಡೆದು ಆರ್ಥಿಕ ಹೊರೆಯಿಂದ ಮುಕ್ತರಾಗಲು ಸದುಪಯೋಗಕ್ಕಾಗಿ ವಿನಂತಿಸಿದ್ದಾರೆ.
ಯೋಜನೆಯಡಿ ತಜ್ಞತೆಯ ಚಿಕಿತ್ಸಾ ಸೌಲಭ್ಯ: ತುರ್ತು ಸಂದರ್ಭಗಳಲ್ಲಿ 169 ಚಿಕಿತ್ಸಾ ವಿಧಾನ ಸೌಲಭ್ಯ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ 900 ಚಿಕಿತ್ಸಾ ವಿಧಾನ ಸೌಲಭ್ಯ, ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಪ್ರಾಥಮಿಕ ಹಂತದ 40 ಚಿಕಿತ್ಸಾ ವಿಧಾನ ಸೇರಿದಂತೆ ಒಟ್ಟು 1650 ವಿವಿಧ ಚಿಕಿತ್ಸಾ ವಿಧಾನಗಳನ್ನು ಉಚಿತವಾಗಿ ಒದಗಿಸಲಾಗುವುದು.
ಯೋಜನೆಯ ಫಲಾನುಭವಿಗಳು: ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಸದಸ್ಯರಿಗೆ ವಾರ್ಷಿಕ ರೂಪಾಯಿ 5 ಲಕ್ಷಗಳ ವರೆಗೆ ಉಚಿತ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಎಪಿಎಲ್ ಕಾರ್ಡ್ದಾರರಿಗೆ ವಾರ್ಷಿಕ ರೂಪಾಯಿ ಒಂದು ಲಕ್ಷ ಐವತ್ತು ಸಾವಿರಗಳ ವರೆಗೆ ಉಚಿತ ಚಿಕಿತ್ಸಾ ವೆಚ್ಚದ ಸೌಲಭ್ಯವಿದೆ.
ಆಸ್ಪತ್ರೆಗಳ ವಿವರ, ದೊರೆಯುವ ಸೌಲಭ್ಯ: ರಾಯಚೂರಿನ ನವೋದಯ ಆಸ್ಪತ್ರೆಯಲ್ಲಿ ಸಾಮಾನ್ಯ ಔಷಧಿ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಕಣ್ಣಿನ ತೊಂದರೆ, ಎಲುಬು ಕೀಲು, ಕಿವಿ ಮೂಗು ಗಂಟಲು ತಜ್ಞರು, ಪ್ರಸೂತಿ ತಜ್ಞತೆ, ಮೂತ್ರ ಪಿಂಡ ಕಾಯಿಲೆಗೆ ಚಿಕಿತ್ಸೆ ನೀಡಲಾಗುವುದು.
ಹೊಸಮನಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು, ವಿಜಯ ಪಾಲಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್‌ನಲ್ಲಿ ಹೃದಯ ರೋಗ ಚಿಕಿತ್ಸೆ, ಬೆಟ್ಟದೂರ ಆಸ್ಪತ್ರೆಯಲ್ಲಿ ಹೃದಯ ರೋಗ ಚಿಕಿತ್ಸೆ, ಧರಣಿ ಆಸ್ಪತ್ರೆಯಲ್ಲಿ ಹೃದಯ ರೋಗ ಚಿಕಿತ್ಸೆ, ಎಮ್.ಕೆ ಭಂಡಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಔಷಧಿ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಕಣ್ಣಿನ ತೊಂದರೆ, ಚಿಕಿತ್ಸೆ, ಎಲುಬು ಕೀಲು ತಜ್ಞತೆ, ಪ್ರಸೂತಿ ತಜ್ಞತೆ, ಕ್ಯಾನ್ಸರ್ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ದಂತ ಚಿಕಿತ್ಸೆ, ಮೊಣಕಾಲು ಬದಲಿ/ಸೊಂಟ ಬದಲಿ ಶಸ್ತ್ರ ಚಿಕಿತ್ಸೆ ನಂದಿನಿ ಆಸ್ಪತ್ರೆಯಲ್ಲಿ ಸಾಮಾನ್ಯ ಶಸ್ತ್ರ ಚಿಕಿತ್ಸೆ ಸೌಲಭ್ಯ, ಎಲುಬು ಕೀಲು ತಜ್ಞತೆ, ಮೂತ್ರ ಪಿಂಡ ಕಾಯಿಲೆಗೆ ಚಿಕಿತ್ಸೆ ಹಾಗೂ ಮಾನ್ವಿಯ ಅಶ್ವಿನಿ ಆಸ್ಪತ್ರೆಯಲ್ಲಿ ಸಾಮಾನ್ಯ ಔಷಧಿ ಚಿಕಿತ್ಸೆ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಎಲುಬು ಕೀಲು ತಜ್ಞತೆ, ಸಿಂಧನೂರಿನ ಶ್ರೀ ರೇಣುಕಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞತೆ, ಸಾಮಾನ್ಯ ಔಷಧಿ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ ಸೌಲಭ್ಯ, ಎಲುಬು ಕೀಲು ತಜ್ಞತೆ, ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ, ಶಾಂತಿ ಆಸ್ಪತ್ರೆಯಲ್ಲಿ ಸಾಮಾನ್ಯ ಔಷಧಿ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ ಸೌಲಭ್ಯ, ಎಲುಬು ಕೀಲು ತಜ್ಞತೆ, ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ, ಆದರ್ಶ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞತೆ, ಸಾಮಾನ್ಯ ಔಷಧಿ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ ಸೌಲಭ್ಯ, ಎಲುಬು ಕೀಲು ತಜ್ಞತೆ, ಕೇರ್ ಆಸ್ಪತ್ರೆಯಲ್ಲಿ ಸಾಮಾನ್ಯ ಔಷಧಿ ಚಿಕಿತ್ಸೆ, ಸಹನಾ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ, ವೀರ ಗಂಗಾಧರ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞತೆ, ಸಾಮಾನ್ಯ ಔಷಧಿ ಚಿಕಿತ್ಸೆ, ಸಾಮಾನ್ಯ ಶಸ್ತ್ರ ಚಿಕಿತ್ಸೆ ಹಾಗೂ ಮಸ್ಕಿಯ ಅನ್ನಪೂರ್ಣ ಆಸ್ಪತ್ರೆಯಲ್ಲಿ ಎಲುಬು ಕೀಲು ಚಿಕಿತ್ಸೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *