ಲಿಂಗಸಗೂರು : ಮಾ 3 ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಜನಸಾಮಾನ್ಯರಿಗೆ ಪ್ರಮುಖ ಆರೋಗ್ಯ ಕೇಂದ್ರವಾಗಿದ್ದು, ಪ್ರತಿದಿನ ನೂರಾರು ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಆದರೆ ಹೃದಯ ರೋಗ (Cardiac) ಹಾಗೂ ಮೂತ್ರಕೋಶ (Urology) ಸಂಬಂಧಿತ ಗಂಭೀರ ಕಾಯಿಲೆಗಳಿಗೆ ಅಗತ್ಯವಾದ ಆಧುನಿಕ ಯಂತ್ರೋಪಕರಣಗಳ ಕೊರತೆ ಇದೆ . ಹೃದಯ ರೋಗ ಹಾಗೂ ಮೂತ್ರಕೋಶದ ಚಿಕಿತ್ಸೆಗೆ ಅಗತ್ಯ ಯಂತ್ರೋಪಕರಣಗಳನ್ನು ಅಳವಡಿಸುವಂತೆ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕ ಅಧ್ಯಕ್ಷ ಆಂಜನೇಯ ಭಂಡಾರಿ
ತಾಲೂಕು ಆರೋಗ್ಯಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ನಂತರ ಮಾತನಾಡಿದ ಅವರು

ಹೃದಯ ಸಂಬಂಧಿತ ತುರ್ತು ಪರಿಸ್ಥಿತಿಗಳಾದ ಹೃದಯಾಘಾತ, ರಕ್ತದ ಒತ್ತಡ ಸಮಸ್ಯೆ, ಹೃದಯ ಬಡಿತದ ವ್ಯತ್ಯಾಸ ಇತ್ಯಾದಿಗಳಿಗೆ ತಕ್ಷಣ ಪರೀಕ್ಷೆ ಮತ್ತು ಚಿಕಿತ್ಸೆ ನೀಡುವ ಯಂತ್ರ, ಟ್ರೆಡ್‌ಮಿಲ್ ಟೆಸ್ಟ್ (TMT), ಇಕೋ ಕಾರ್ಡಿಯೋಗ್ರಫಿ (ECHO) ಯಂತ್ರ, ಡಿಫಿಬ್ರಿಲೇಟರ್ ಮುಂತಾದ ಉಪಕರಣಗಳು ಅಗತ್ಯವಿರುತ್ತವೆ. ಇವುಗಳ ಕೊರತೆಯಿಂದ ರೋಗಿಗಳನ್ನು ದೂರದ ಜಿಲ್ಲಾ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಅನಿವಾರ್ಯತೆ ಉಂಟಾಗುತ್ತಿದೆ. ಮೂತ್ರಕೋಶ ಸಂಬಂಧಿತ ಸಮಸ್ಯೆಗಳಾದ ಕಿಡ್ನಿ ಕಲ್ಲು, ಮೂತ್ರನಾಳದ ತೊಂದರೆ, ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಎಂಡೋಸ್ಕೋಪಿಕ್ ಉಪಕರಣಗಳು ಮುಂತಾದವುಗಳು ಅತ್ಯವಶ್ಯಕವಾಗಿವೆ. ಅಲ್ಲದೇ ತಜ್ಞ ವೈದ್ಯರು ಇದ್ದರು ಸಹ ಸರಿಯಾದ ಯಂತ್ರೋಪಕರಣಗಳು ಇಲ್ಲದ ಕಾರಣ ಬಡ ರೋಗಿಗಳು ಹೆಚ್ಚಿನ ವೆಚ್ಚವನ್ನು ಭರಿಸಬೇಕಾಗುತ್ತಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಬಡಜನರ ಆರೋಗ್ಯದ ರಕ್ಷಣೆಗೆ ತಕ್ಷಣವೇ ಹೃದಯ ಮತ್ತು ಮೂತ್ರಕೋಶ ಚಿಕಿತ್ಸೆಗೆ ಅಗತ್ಯವಾದ ಎಲ್ಲಾ ಆಧುನಿಕ ಯಂತ್ರೋಪಕರಣಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಳವಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಕಾರ್ಯಾಲಯದ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು . ಈ ಸಂದರ್ಭದಲ್ಲಿ ಶಿವು ಪತ್ತಾರ್ , ವೆಂಕಟೇಶ್ ಉಪ್ಪಾರ್ , ಅಶೋಕ್ ನಾಯಕ್ , ಸಲೀಮ್ ಖಾನ್ ,ಅಭಿ ನಾಯಕ್ , ಶಾರು ಜೋಗೇಶ್ , ಯಲ್ಲಪ್ಪ ದೊಡ್ಡಮನಿ ಸೇರಿದಂತೆ ಇದ್ದರು .

Leave a Reply

Your email address will not be published. Required fields are marked *