ಆಕ್ಸಫರ್ಡ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ ಶ್ರೇಷ್ಠಿ ನೇತೃತ್ವದಲ್ಲಿ ಜರುಗಿದ ಅಲಬನೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಶ್ರೀ ಆರ್ ಅನಿಲ್ ಕುಮಾರ್ ರವರು ಉದ್ಘಾಟಿಸಿದರು. ನಂತರದಲ್ಲಿ ಮಾತಾನಾಡಿದ ಅವರು ಇತ್ತೀಚೆಗೆ ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ,ದೌರ್ಜನ್ಯ,ಹಿಂಸೆ,ಕಿರುಕುಳ ತಡೆಗಟ್ಟಲು ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ನೀಡಿ ಅದರ ಬಗ್ಗೆ ಅರಿವು ಮೂಡಿಸಿದರು ಮತ್ತು ಅದರ ಕುರಿತು ಜಾಗೂರಕರಾಗಿರಬೇಕು ಎಂದು ಹೇಳಿದರು ಈ ಸಂಧರ್ಬದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪರಶುರಾಮ ಮಲ್ಲಾಪುರ ಅಧ್ಯಕ್ಷರು ನೊಬೆಲ್ ಪ‌,ಪೂ ಕಾಲೇಜು ಸಿಂಧನೂರು ಇವರು ಬಾಲಕಿಯರ ಭದ್ರತೆ,ಸುರಕ್ಷತೆ,ರಕ್ಷಣೆಗೆ ಸಮಾಜದ ಪ್ರತಿಯೊಬ್ಬರು ಹೊಣೆಗಾರರು ಎಂದು ತಿಳಿಸಿದರು ಈ ಮೂಲಕ ಬಿತ್ತಿ ಪತ್ರಗಳನ್ನು ಕೊಟ್ಟು ಮಾಹಿತಿಯನ್ನು ನೀಡುವುದರ ಮೂಲಕ ಜಾಗೃತಿಯನ್ನು ಮೂಡಿಸಿದರು ಈ ಕಾರ್ಯಕ್ರದ ಅಧ್ಯಕ್ಷತೆಯನ್ನು ಮೌನೇಶ ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು ಅಲಬನೂರು.ಮುಖ್ಯ ಅತಿಥಿಗಳಾಗಿ ಸತ್ಯನಾರಾಯಣ ಶ್ರೇಷ್ಠಿ ಅಧ್ಯಕ್ಷರು ಆಕ್ಸ್‌ಫರ್ಡ್ ಸಮೂಹ ಸಂಸ್ಥೆ ಸಿಂಧನೂರು, ಶ್ರೀ ರಾಮರೆಡ್ಡಿ ಹುಡಾ ಶಿಕ್ಷಕರು ಶಿವಯೋಗಿ ಒಳಬಳ್ಳಾರಿ ಫ್ರೌಡಶಾಲೆ ಒಳಬಳ್ಳಾರಿ. ಶ್ರೀ ವೆಂಕಟೇಶ ಕುಲಕರ್ಣಿ ಮುಖ್ಯಗುರುಗಳು ಸ,ಪ್ರೌ,ಶಾಲೆ ಮಾಡ ಶಿರವಾರ.ಮಹಿಬೂಬ್ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿಪೂರ್ವ ಕಾಲೇಜು ಅಲಬನೂರು. ಶ್ರೀ ಶಂಕರಗೌಡ ಬೂತಲದಿನ್ನಿ ಅರ್ಥಶಾಸ್ತ್ರ ಉಪನ್ಯಾಸಕರು.ಶ್ರೀ ಪಂಪಾಪತಿ ಕಲ್ಮಂಗಿ ಇತಿಹಾಸ ಉಪನ್ಯಾಸಕರು.
ಬಿ.ರವಿಕುಮಾರ್ ಸಾಸಲಮರಿ.ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *