ದಿನಾಂಕ 27.02.2026 ರಂದು ಸುಕ್ಷೇತ್ರ ಅಂಬಾಮಠ ಗ್ರಾಮದಲ್ಲಿ ಸಿಂಧನೂರು ನಗರದ ನೊಬೆಲ್ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ವತಿಯಿಂದ 2025-26 ನಾ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಎರಡನೇ ದಿನದ ಗ್ರಾಮೀಣ ಅಭಿವೃದ್ಧಿಯಲ್ಲಿ ಎನ್ಎಸ್ಎಸ್ ಪಾತ್ರ ಎಂಬ ವಿಷಯವನ್ನು ಮಂಡಿಸಿ ಶ್ರೀ ಮಲ್ಲಿಕಾರ್ಜುನ ಕಮತಗಿ ರವರು ಗ್ರಾಮೀಣ ಅಭಿವೃದ್ಧಿಗೆ ಏನ್ ಎಸ್ ಎಸ್ ಪಾತ್ರ ಅಮೂಲ್ಯವಾದದು, ಎಂದು ಎನ್ ಎಸ್ ಎಸ್ ಇರುವುದರಿಂದ ಗ್ರಾಮಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿವೆ ಎಂಬ ಆಶಾ ಮನೋಭಾವನೆಯನ್ನು ವ್ಯಕ್ತಪಡಿಸಿದರು
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮೈ ಭಾರತ್ ಯುವ ಭಾರತ್ ಬಳಕೆ ಹಾಗೂ ಒಬ್ಬ ಸಾಮಾನ್ಯ ವಿದ್ಯಾರ್ಥಿಯನ್ನು ರಾಷ್ಟ್ರಮಟ್ಟದವರೆಗೆ ಬಹುಬೇಗ ಕರೆದುಕೊಂಡು ಹೋಗುವ ದೊಡ್ಡ ವೇದಿಕೆ ಎಂದರೆ ಅದು ಎನ್ ಎಸ್ ಎಸ್ ಎಂದು ತಿಳಿಸಿದರು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೋಬೆಲ್ ಪದವಿ ಮಹಾವಿದ್ಯಾಲಯದ ವಾಣಿಜ್ಯೋಪನ್ಯಾಸಕರ ಯಂಕೋಬಾ ಬೂದಿಹಾಳ, ಮುಖ್ಯ ಅತಿಥಿಯಾಗಿ ರಮೇಶ್ ಹಲಗಿ, ಅತಿಥಿಗಳಾಗಿ ಕಾಲೇಜಿನ ಬಸವರಾಜ್ ದೇವಪುರ ದೇವೇಂದ್ರ ಕವಿತಾ ಹಾಗೂ ಕಾರ್ಯಕ್ರಮ ಅಧಿಕಾರಿಗಳಾದ ಹೊನ್ನಪ್ಪ ಬೆಳಗುರ್ಕಿ ಭಾಗವಹಿಸಿದ್ದರು, ಕಾಲೇಜ್ ಇತಿಹಾಸ ಉಪನ್ಯಾಸಕರಾದ ದೇವೇಂದ್ರರವರು ವಿದ್ಯಾರ್ಥಿಗಳಿಗೆ ಭಗತ್ ಸಿಂಗನ ದೇಶ ಪ್ರೇಮ ಪರಿಸರಮ ಶಿಸ್ತನ್ನು ಕುರಿತು ವಿವರಿಸಿದರೆ ಕುಮಾರಿ ಕವಿತಾರವರು ವಿದ್ಯಾರ್ಥಿಗಳ ಬಂಗಾರದ ಜೀವನಮಯಕ್ಕೆ ಎನ್ ಎಸ್ ಎಸ್ ಹಿಡಿದ ಕನ್ನಡಿ ಎಂದು ತಿಳಿಸಿದರು , ವೇದಿಕೆ ಮೇಲೆ ಇರುವ ಎಲ್ಲಾ ಅತಿಥಿಗಳು ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ನ ಮಹತ್ವ ತಿಳಿಸಿದರು.
ಈ ಕಾರ್ಯಕ್ರಮದ ನಿರ್ವಹಣೆ ರಮಾಭಾಯಿ ತಂಡದವರು ನೆರವೇರಿಸಿದರು,
ನಂದಿನಿ (6th) ನಿರೂಪಿಸಿದರು ಮೇಘ (4th) ತಂಡ ಪ್ರಾರ್ಥಿಸಿದರು ದೇವರಾಜ್ ನಾಯಕ್ (6th) ಸ್ವಾಗತಿಸಿದರು ವೀರೇಶ್ ದ್ವಿತೀಯ ಸೆಮಿಸ್ಟರ್ ವಂದಿಸಿದರು.

