ಸಿಂಧನೂರು : ಪ್ರತೀ ಶನಿವಾರದಂತೆ ಸಿಂಧನೂರು ನಗರದ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜೀನಲ್ಲಿ ನಡೆಯುವ ಉಪನ್ಯಾಸ ಸರಣಿಯ ಅಂಗವಾಗಿ, ದಿನಾಂಕ ಫೆಬ್ರವರಿ 28 ಶನಿವಾರದಂದು ಅತ್ಯಂತ ಉಪಯುಕ್ತ ಹಾಗೂ ಜ್ಞಾನವರ್ಧಕವಾದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಸನ್ ರೈಸ್ ವಿದ್ಯಾ ಸಂಸ್ಥೆಗೆ ಸುಹಾಸ್ತಾ ಹೆಲ್ತ್ ಕೇರ್ ಸಿಂಧನೂರಿನ ಪ್ರಸೂತಿ, ಸ್ತ್ರೀ ರೋಗ ಹಾಗೂ ಬಂಜೆತನ ನಿವಾರಣಾ ತಜ್ಞರಾದ ಡಾ. ಶ್ರೀವಲ್ಲಿ ಲಾವಣ್ಯ ಚೇರುಕುರಿ (MBBS, MS, OBG & GYN) ಅವರು ಗೌರವಾನ್ವಿತ ಅತಿಥಿಯಾಗಿ ಆಗಮಿಸಿ ಶನಿವಾರದ ವಿಶೇಷ ಉಪನ್ಯಾಸ ನೀಡಿದರು.ಡಾ. ಶ್ರೀವಲ್ಲಿ ಲಾವಣ್ಯ ಚೇರುಕುರಿ ಅವರು “Painless Delivery” ಎಂಬ ಸಮಕಾಲೀನ ಹಾಗೂ ಬಹುಮುಖ್ಯ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿಯನ್ನು ನೀಡಿದರು.ತಮ್ಮ ಉಪನ್ಯಾಸದಲ್ಲಿ ಅವರು ಸಹಜ ಪ್ರಸವ ಮತ್ತು ಪೇನ್‌ಲೆಸ್ ಡೆಲಿವರಿ ನಡುವಿನ ವ್ಯತ್ಯಾಸ ಪೇನ್‌ಲೆಸ್ ಡೆಲಿವರಿಯಲ್ಲಿ ಬಳಸುವ ವಿಧಾನಗಳು(ಉದಾಹರಣೆಗೆ: ಎಪಿಡ್ಯುರಲ್ ಅನಸ್ತೇಶಿಯಾ)
ತಾಯಿಯ ಹಾಗೂ ಶಿಶುವಿನ ಸುರಕ್ಷತೆ ಪ್ರಸವ ಸಮಯದಲ್ಲಿ ನರ್ಸಿಂಗ್ ಸಿಬ್ಬಂದಿಯ ಪಾತ್ರ
ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣದ ನಿರ್ಧಾರ ಸಾಮರ್ಥ್ಯ
ಇವುಗಳ ಕುರಿತು ಸುಲಭ ಮತ್ತು ಸ್ಪಷ್ಟವಾದ ಭಾಷೆಯಲ್ಲಿ ವಿವರಿಸಿದರು.ವಿದ್ಯಾರ್ಥಿಗಳು ತಮ್ಮ ಸಂದೇಹಗಳನ್ನು ಕೇಳಿ ಸ್ಪಷ್ಟನೆ ಪಡೆದುಕೊಂಡರು. ಈ ಸಂವಾದಾತ್ಮಕ ಅಧಿವೇಶನವು ವಿದ್ಯಾರ್ಥಿಗಳಲ್ಲಿ ವೈದ್ಯಕೀಯ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ವೃತ್ತಿ ಬದುಕಿನ ಬಗ್ಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿತು.ಡಾಕ್ಟರ್ ಅವರು ತಮ್ಮ ಮಾತುಗಳಲ್ಲಿ ನರ್ಸಿಂಗ್ ವೃತ್ತಿಯ ಮಹತ್ವವನ್ನು ವಿಶೇಷವಾಗಿ ಒತ್ತಿ ಹೇಳಿದರು. ರೋಗಿಯ ಆರೈಕೆಯಲ್ಲಿ ನರ್ಸಿಂಗ್ ಸಿಬ್ಬಂದಿಯ ಮಾನವೀಯತೆ ಸೇವಾ ಮನೋಭಾವ ಸಮಯಪಾಲನೆ ಮತ್ತು ಶಿಸ್ತಿನ ಮಹತ್ವ ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ವೃತ್ತಿಯ ಗೌರವ
ಇವುಗಳ ಬಗ್ಗೆ ಪ್ರೇರಣಾದಾಯಕವಾಗಿ ಮಾತನಾಡಿದರು.ಕಾರ್ಯಕ್ರಮದ ಕೊನೆಯಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರು ಲಾಜರ್ ಸಿರಿಲ್ ಅವರು ಮಾತನಾಡಿ, ಇಂತಹ ಉಪನ್ಯಾಸ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಹಾಗೂ ವೃತ್ತಿಪರ ಕೌಶಲ್ಯಗಳ ವೃದ್ಧಿಗೆ ಬಹಳ ಸಹಾಯಕವಾಗಿವೆ ಎಂದು ತಿಳಿಸಿದರು.ಅವರು ಡಾ. ಶ್ರೀವಲ್ಲಿ ಲಾವಣ್ಯ ಚೇರುಕುರಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಈ ವಿಶೇಷ ಶನಿವಾರದ ಉಪನ್ಯಾಸ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹೊಸ ಅರಿವು, ಆತ್ಮವಿಶ್ವಾಸ ಹಾಗೂ ವೃತ್ತಿ ಜೀವನದ ಪ್ರೇರಣೆಯನ್ನು ನೀಡಿದ ಸ್ಮರಣೀಯ ಕ್ಷಣವಾಗಿತ್ತು. ಈ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರು ಸಿರಿಲ್,ಆಸಿಫ್ ಹಾಗೂ ಸುಹಾಸ್ತಾ ಆಸ್ಪತ್ರೆಯ ಶುಶ್ರೂಷಾ ಅಧಿಕಾರಿ ಸಮ್ರೀನ್ ಹಾಗೂ ಎಲ್ಲಾ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




