ರಾಯಚೂರು ಫೆಬ್ರವರಿ 27(ಕರ್ನಾಟಕ ವಾರ್ತೆ): 2025-26 ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ (ಫೆ.೨೮) ಆರಂಭವಾಗಿದ್ದು, ಮಾರ್ಚ್ ೧೭ವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ೪೩ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಶಿಕ್ಷಣ ಇಲಾಖೆ ಮತ್ತು ಎಕ್ಸಾಂ ಬೋರ್ಡ್ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ೨೨,೪೪೨ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ೧೮,೪೧೯ ಹೊಸ ವಿದ್ಯಾರ್ಥಿಗಳು, ೩,೪೫೦ ಪುನರಾವರ್ತಿತ ವಿದ್ಯಾರ್ಥಿಗಳು, ೫೬೦ ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ (ದ್ವಿತೀಯ) ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಅಕ್ರಮ ತಡೆಗೆ ಎರಡನೇ ಬಾರಿಗೆ ವೆಬ್ ಕಾಸ್ಟಿಂಗ್ ಕಣ್ಗಾವಲು ಇರಲಿದ್ದು, ಪರೀಕ್ಷಾ ಕೊಠಡಿಯೊಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೊಬೈಲ್, ಎಲೆಕ್ಟ್ರಾನಿಕ್ ವಾಚ್, ಕ್ಯಾಲುಕೇಟರ್ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಾಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವನ್ನು ಸರ್ಕಾರ ದಿಂದ ಮಾಡಿಕೊಟ್ಟಿದೆ.
ಪರೀಕ್ಷಾ ನಿಯಮಗಳು.? ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದ ೨೦೦ ಮೀಟರ್ ನಿಷೇಧಾಜ್ಞೆ. ಪಿಯುಸಿ ಎಕ್ಸಾಂ ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ, ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಇರಲಿದೆ. ಪರೀಕ್ಷಾ ಕೇಂದ್ರದ ಸುತ್ತ ಜೆರಾಕ್ಸ್, ಸೈಬರ್ ಸೆಂಟರ್, ಕಂಪ್ಯೂಟರ್ ಸೆಂಟರ್ ಮುಚ್ಚಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುವ, ಅಕ್ರಮ ಮಾಡುವವರ ವಿರುದ್ಧ ಕ್ರಮ. ಪ್ರಶ್ನೆ ಪತ್ರಿಕೆ ರವಾನೆ ಮಾಡೋದ್ರೀಂದ ಹಿಡಿದು ಪರೀಕ್ಷಾ ಕೇಂದ್ರಕ್ಕೆ ತೆರಳೋವರೆಗೂ ಕ್ಯಾಮೆರಾ ರೆಕಾರ್ಡ್. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಉಪಕರಣಗಳು ನಿಷೇಧ ಮಾಡಲಾಗಿದೆ.
ಪರೀಕ್ಷೆ ಕೇಂದ್ರಗಳು: ರಾಯಚೂರಿನಲ್ಲಿ ಆರ್.ಪಿ.ಎಸ್. ಪ.ಪೂ.ಕಾಲೇಜ್, ಬಾಲಕರ ಸ.ಪ.ಪೂ.ಕಾಲೇಜ್, ಬಾಲಕಿಯರ ಸ.ಪ.ಪೂ. ಕಾಲೇಜ್, ಟ್ಯಾಗೋರ್ ಸ್ಮಾರಕ ಪ.ಪೂ.ಕಾಲೇಜ್, ಹಮ್ದರ್ದ ಪ.ಪೂ.ಕಾಲೇಜ್, ವಿಧ್ಯಾಭಾರತಿ ಪ.ಪೂ. ಕಾಲೇಜ್, ಬಾಲಕಿಯರ ಸ.ಪ.ಪೂ.ಕಾಲೇಜ್, ಇನ್ಫಂಟ್ ಜೇಸಸ್ ಪ.ಪೂ.ಕಾಲೇಜ್, ಪ್ರಮಾಣ ಪ.ಪೂ.ಕಾಲೇಜ್, ವಿದ್ಯಾನಿಧಿ ಪ.ಪೂ.ಕಾಲೇಜ್, ಜವಾಹರನಗರ ಪ.ಪೂ.ಕಾಲೇಜ್, ಅಲ್-ಕರೀಮ್ ಪ.ಪೂ.ಕಾಲೇಜ್, ಎಸ್.ಎಸ್.ಆರ್.ಜಿ ಪ.ಪೂ.ಕಾಲೇಜಿನಲ್ಲಿ ನಡೆಯಲಿವೆ.
ಲಿಂಗಸುಗೂರು ತಾಲೂಕಿನಲ್ಲಿ ನಲ್ಲಿ ಸರ್ಕಾರಿ ಪ.ಪೂ.ಕಾಲೇಜ್ ಲಿಂಗಸುಗೂರು, ಸರ್ಕಾರಿ ಪ.ಪೂ.ಕಾಲೇಜ್ ಮುದಗಲ್ಲ, ಸರ್ಕಾರಿ ಪ.ಪೂ.ಕಾಲೇಜ್ ಹಟ್ಟಿ, ಶ್ರೀಬಸವೇಶ್ವರ ಪ.ಪೂ.ಕಾಲೇಜ್ ಲಿಂಗಸೂಗುರು, ವಿ.ಸಿ.ಇ.ಎಸ್ ಪ.ಪೂ.ಕಾಲೇಜ್ ಲಿಂಗಸೂಗುರು, ಶ್ರೀಮತಿ ಎಚ್.ಎಸ್.ಗೌಡ ಪ.ಪೂ.ಕಾಲೇಜ್ ಲಿಂಗಸೂಗುರು, ಶರಣಪ್ಪಮೇಟಿ ಪ.ಪೂ.ಕಾಲೇಜ್ ಲಿಂಗಸುಗೂರಿನಲ್ಲಿ ನಡೆಯಲಿವೆ. ದೇವದುರ್ಗದಲ್ಲಿ ಬಾಲಕರ ಸ.ಪ.ಪೂ.ಕಾಲೇಜ್, ಬಾಲಕಿಯರ ಸ.ಪ.ಪೂ.ಕಾಲೇಜ್, ಬಸವ ಪ.ಪೂ, ಎಸ್.ಕೆ.ಎಂ ಪ.ಪೂ ಹಾಗೂ ಜ್ಞಾನಜ್ಯೋತಿ ಪ.ಪೂ.ಕಾಲೇಜಿನಲ್ಲಿ ನಡೆಯಲಿವೆ. ಸಿಂಧನೂರಿನಲ್ಲಿ ಬಾಲಕರ ಸ.ಪ.ಪೂ.ಕಾಲೇಜ್, ಶ್ರೀಬಸವೇಶ್ವರ, ಆರ್.ಜಿ.ಎಮ್, ಶ್ರೀಕನಕದಾಸ, ಸಂಕೇತ, ಎವಿಎಸ್ ಬ್ರಿಲಿಯಂಟ್, ಕ್ರಿಷ್ಣದೇವರಾಯ, ಎಕ್ಸಲೆಂಟ್ ಹಾಗೂ ವಿಸ್ಡಮ್ ಪ.ಪೂ.ಕಾಲೇಜ್ ನಲ್ಲಿ ನಡೆಯಲಿವೆ.
ಮಾನವಿಯಲ್ಲಿ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್, ಎಸ್.ಪಿ.ವಿ, ಎಸ್.ಆರ್.ಎಸ್.ವಿ, ಲೋಯೋಲಾ ಪದವಿ ಪೂರ್ವ ಕಾಲೇಜಿನ ನಡೆಯಲಿವೆ. ಮಸ್ಕಿನಲ್ಲಿ ಬಾಲಕರ ಹಾಗೂ ಬಾಲಕಿರ ಸ.ಪ.ಪೂ ಕಾಲೇಜ್‌ನಲ್ಲಿ ನಡೆಯಲಿವೆ. ಸಿರವಾರದಲ್ಲಿ ಸರ್ಕಾರಿ ಪ.ಪೂ.ಕಾಲೇಜ್ ಹಾಗೂ ಅಮರೇಗೌಡ ಪಾಟೀಲ್ ಬಯ್ಯಾಪೂರ್ ಪ.ಪೂ ಕಾಲೇಜಿನಲ್ಲಿ ನಡೆಯಲಿವೆ.
ವೇಳಾಪಟ್ಟಿ: ಫೆಬ್ರವರಿ ೨೮ರ ಶನಿವಾರ ದಂದು ಕನ್ನಡ, ಅರೇಬಿಕ್, ಮಾರ್ಚ್ ೨ರ ಸೋಮವಾರ ದಂದು ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಮಾರ್ಚ್ ೩ರ ಮಂಗಳವಾರ ದಂದು ಇಂಗ್ಲಿಷ್, ಮಾರ್ಚ್ ೪ರ ಬುಧವಾರ ದಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಫ್ರೆಂಚ್, ಮಾರ್ಚ್ ೫ರ ಗುರುವಾರ ದಂದು ಇತಿಹಾಸ, ಮಾರ್ಚ್ ೬ರ ಶುಕ್ರವಾರ ದಂದು ಭೌತಶಾಸ್ತ್ರ, ಮಾರ್ಚ್ ೭ರ ಶನಿವಾರ ದಂದು ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ, ಮಾರ್ಚ್ ೯ರ ಸೋಮವಾರ ದಂದು ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ, ಮಾರ್ಚ್ ೧೦ರ ಮಂಗಳವಾರ ದಂದು ಅರ್ಥಶಾಸ್ತ್ರ, ಮಾರ್ಚ್ ೧೧ರ ಬುಧವಾರ ದಂದು ತರ್ಕಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹ ವಿಜ್ಞಾನ, ಮಾರ್ಚ್ ೧೨ರ ಗುರುವಾರ ದಂದು ಹಿಂದಿ, ಮಾರ್ಚ್ ೧೩ರ ಶುಕ್ರವಾರ ರಾಜ್ಯಶಾಸ್ತ್ರ, ಮಾರ್ಚ್ ೧೪ರ ಶನಿವಾರ ದಂದು ಲೆಕ್ಕಶಾಸ್ತ್ರ, ಗಣಿತ, ಮಾರ್ಚ್ ೧೬ರ ಸೋಮವಾರ ದಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ, ಮಾರ್ಚ್ ೧೭ರ ಮಂಗಳವಾರ ದಂದು ಹಿಂದುಸ್ತಾನಿ ಸಂಗೀತ, ಎಲೆಕ್ಟಾçನಿಕ್ಸ್ ಮತ್ತು ಯಂತ್ರಾಂಶ ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್‌ನೆಸ್ ವಿಷಯಗಳು ನಡೆಯಲಿವೆ.
ಉಚಿತ ಪ್ರಯಾಣ ವ್ಯವಸ್ಥೆ: ವಿದ್ಯಾರ್ಥಿಗಳು ತಮ್ಮ ನಿವಾಸದಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಮತ್ತು ಮರಳಿ ಮನೆಗೆ ಬರಲು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಗುರುತಿನ ಚೀಟಿ ಮತ್ತು ಪ್ರವೇಶಪತ್ರವನ್ನು ತೋರಿಸಿ ಪ್ರಯಾಣಿಸಬಹುದಾಗಿದೆ.
ಬೈಟ್:
ಆತ್ಮವಿಶ್ವಾಸವೇ ಯಶಸ್ಸಿನ ಗುಟ್ಟು, ವಿದ್ಯಾರ್ಥಿಗಳು ಇಡೀ ವರ್ಷ ಓದಿರುತ್ತಾರೆ. ಆ ಪರಿಶ್ರಮವನ್ನು ನೆನಪಿಸಿಕೊಂಡು ನನಗೆ ಬರುತ್ತದೆ, ನಾನು ಬರೆಯಬಹುದು ಎಂಬ ಧೈರ್ಯವನ್ನು ವಿದ್ಯಾರ್ಥಿಗಳು ಮನಸ್ಸಿನಲ್ಲಿ ಇಟ್ಟುಕೊಂಡು, ಸಕಾರಾತ್ಮಕ ಚಿಂತನೆಯ ಮೂಲಕ ತಮ್ಮ ಸಾಮಥ್ರ‍್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಈಶ್ವರ ಕುಮಾರ್ ಕಾಂದೂ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ರಾಯಚೂರು.
ಗಾಬರಿ ಹಾಗೂ ಆತಂಕಕ್ಕೆ ಒಳಗಾಗದೆ, ವಿದ್ಯಾರ್ಥಿಗಳು ನಿಶ್ಚಿಂತೆಯಿಂದ ಪರೀಕ್ಷೆ ಎದುರಿಸಿ, ಮೊದಲ ೧೫ ನಿಮಿಷಗಳ ಕಾಲ ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ, ಯಾವುದೇ ವದಂತಿಗೆ ಕಿವಿಕೊಡದೆ ಪರೀಕ್ಷೆಯನ್ನು ಎದುರಿಸಬೇಕೆಂದು. ಸೋಮಶೇಖರಪ್ಪ ಹೋಕ್ರಾಣಿ,
ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಯಚೂರು

