ರಾಯಚೂರು ಫೆಬ್ರವರಿ 27 (ಕರ್ನಾಟಕ ವಾರ್ತೆ): ಜಿಲ್ಲೆಯ ಮಾನ್ವಿ ತಾಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿ 9 ಮತ್ತು 10 ನೇ ತರಗತಿಯಲ್ಲಿ ಪಂಗಡದ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದ ಆದೇಶದಂತೆ 2025-2026ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಮಂಜೂರಿಗೆ ನೋಂದಣಿ ಮಾಡಿಕೊಳ್ಳಬೇಕೆಂದು ಕೋರಲಾಗಿದೆ.
ಎನ್‌ಎಸ್‌ಪಿ ಓಟಿಆರ್ ನೋಂದಣಿ ಅವಶ್ಯಕವಾಗಿದ್ದು, ಈಗಾಗಲೇ ಎನ್‌ಎಸ್‌ಪಿ ಓಟಿಆರ್ ನೋಂದಣಿ ಮಾಡಲು ಬಾಕಿ ಇದ್ದ ಒಟ್ಟು 1006 ವಿದ್ಯಾರ್ಥಿಗಳಲ್ಲಿ ಈಗಾಗಲೇ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಹಕಾರದಿಂದ ಈ ಇಲಾಖೆಯ ನಿಲಯ ಪಾಲಕರು ಅಖಂಡ ಮಾನವಿ ತಾಲೂಕಿನ ಪ್ರತಿ ಶಾಲೆಗೆ ಭೇಟಿ ನೀಡಿ 9 ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಎನ್‌ಎಸ್‌ಪಿ ಓಟಿಆರ್ ನೋಂದಣಿ ಮಾಡಲಾಗಿರುತ್ತದೆ.
ಇನ್ನೂ ಸುಮಾರು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಎನ್‌ಎಸ್‌ಪಿ ಓಟಿಆರ್ ನೋಂದಣಿ ಕಾರ್ಯ ಬಾಕಿ ಇರುತ್ತದೆ. ಈ ವಿದ್ಯಾರ್ಥಿಗಳಿಗೆ ಭಾರತ ಸರಕಾರದ ಶಿಷ್ಯವೇತನ ಮಂಜೂರಾತಿ ಮಾಡಲು ಸಾಧ್ಯಾವಾಗಿರುವುದಿಲ್ಲ.
ಕಾರಣ ಎನ್‌ಎಸ್‌ಪಿ ಓಟಿಆರ್ ನೋಂದಣಿ ಮಾಡಲು ಬಾಕಿ ಇರುವ 9 ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ ಪರಿಶಿಷ್ಟ ಪಂಗಡದ ಎಲ್ಲಾ ವಿದ್ಯಾರ್ಥಿಗಳು ಕೂಡಲೇ ತಮ್ಮ ಶಾಲೆಯ ಮುಖ್ಯೋಪಾಧ್ಯಾಯರನ್ನು ಭೇಟಿ ಎನ್‌ಎಸ್‌ಪಿ ಓಟಿಆರ್ ಅನ್ನು https://scholarships.gov.in/ ಮಾಡಿಸಕಬೇಕೆಂದು ಮಾನ್ವಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

