ಸಿಂಧನೂರು ನೀರಿನ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಜಿ ಸಚಿವ ವೆಂಕಟರಾವ್ ನಾಡ ಗೌಡರು ಮಾಡುತ್ತಿರುವುದು ಎಷ್ಟು ಸರಿ ಎಂದು ಶಾಸಕ ಹಂಪನಗೌಡ ಬಾದರ್ಲಿ ಪ್ರಶ್ನಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.ಬೇಸಿಗೆ ಬೆಳೆಗೆ ನೀರು ಬಿಡಿಸಲು ಮುತ್ತಿಗೆ ಹಾಕುತ್ತೆನೆನ್ನುವ ಮಾಜಿ ಸಚಿವರೆ ನಿಮ್ಮಿಂದ ನೀರು ಬಿಡಿಸುವ ಕೆಲಸ ಆಗಲಿ. ಭದ್ರಾ ಜಲಾಶಯದಿಂದ 3 ಟಿ.ಎಮ್.ಸಿ ಗಿಂತ ಅಧಿಕ ಬಿಡಿಸಿಕೊಂಡ ಬಂದ ಉದಾಹರಣೆ
ಇಲ್ಲ.ಒಂದು ವೇಳೆ 3 ಟಿ.ಎಮ್.ಸಿ ನೀರು ಬಿಡಿಸಿದರೂ ಎರಡನೇ ಬೆಳೆಗೆ ನೀರು ಸಾಕಾಗಲ್ಲ. ಆ ಕಾರಣಕ್ಕೆ ನೀರಿನ ವಿಷಯದಲ್ಲಿ ರಾಜಕಾರಣ ಮಾಡಬೇಡಿ ನಾಡಗೌಡ್ರೆ ಎಂದು ಪ್ರಶ್ನಿಸಿದರು.ನಾಡಗೌಡರು ನೀರು ಕೈಯಲ್ಲಿದ್ದಾಗ ಯಾಕೆ ಮಾತನಾಡಿಲ್ಲ ಈಗಯಾಕೆ ಮಾತನಾಡುತ್ತಿರುವುದು ಹಿಂದಿನ ಉದ್ದೇಶ ಏನು ? ತುಂಗಭದ್ರಾ ಜಲಾಶಯದ ಕೇಂದ್ರ ಸರ್ಕಾರದ ಹತೋಟಿಯಲ್ಲಿದೆ ನೀವು ನೀರು ತರುವ ಕೆಲಸ ಮಾಡಿ ಎಂದು ಶಾಸಕರು ನಾಡಗೌಡರಿಗೆ ತಿಳಿಸಿದರು.ನಂತರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಾಲೇಜು ಕಟ್ಟಡ, ಸಿಸಿ ರಸ್ತೆ ಸೇರಿದಂತೆ ಪ್ರತಿಯೊಂದು ಕಾಮಗಾರಿಗಳು ನಡೆದಿವೆ.ಗ್ಯಾರಂಟಿ ಗಳಿಂದ ಸರ್ಕಾರದಲ್ಲಿ ಹಣ ಇಲ್ಲ ಎನ್ನುವದಕ್ಕೆ ಶಾಸಕರು ಉತ್ತರಿಸಿದರು.
ಈ ಪತ್ರಿಕಾ ಪ್ರಕಟಣೆಯಲ್ಲಿ ಖಾಜಿಮಲ್ಲಿಕ್, ಭೀಮನಗೌಡ ಗೋರೆಬಾಳ,ಬಸವರಾಜ ಹಿರೇಗೌಡ ಅಂಬ್ರಸ್,ಅನೀಲಕುಮಾರ ವಾಯ್ ಉಪಸ್ಥಿತರಿದ್ದರು.

